ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ದಿನಕ್ಕೆ 20,551 ಹೊಸ ಕೋವಿಡ್ ಕೇಸ್

|
Google Oneindia Kannada News

ನವದೆಹಲಿ ಆಗಸ್ಟ್ 5: ಮುಂಗಾರು ಮಳೆ ಆರಂಭವಾದಾಗಿನಿಂದ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿವೆ. ದೇಶದಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು ಈ ನಡುವೆ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,551 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೇಶದ ಕೋವಿಡ್-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,35,364 ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ: ಗುಡ್ಡ ಕುಸಿತ, ಆರೆಂಜ್ ಅಲರ್ಟ್‌ ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ: ಗುಡ್ಡ ಕುಸಿತ, ಆರೆಂಜ್ ಅಲರ್ಟ್‌

ಶುಕ್ರವಾರ (ಆಗಸ್ಟ್ 5) ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತ 20,551 ಹೊಸ ಕೊರೊನ ವೈರಸ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು 98.50 ಪ್ರತಿಶತವನ್ನು ತಲುಪಿದೆ ಮತ್ತು ಒಟ್ಟು ಚೇತರಿಕೆಯ ಡೇಟಾ 4,34,24,029 ಕ್ಕೆ ತಲುಪಿದೆ.

1,114 ಪ್ರಕರಣಗಳ ಇಳಿಕೆ

1,114 ಪ್ರಕರಣಗಳ ಇಳಿಕೆ

ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 1,35,364 ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ. 24 ಗಂಟೆಯಲ್ಲಿ 1,36,478 ಸಕ್ರಿಯ ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ 1,114 ಪ್ರಕರಣಗಳ ಇಳಿಕೆ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.31 ಪ್ರತಿಶತವನ್ನು ಒಳಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,26,600 ಆಗಿದೆ. ಭಾರತದಲ್ಲಿ ಮಾರ್ಚ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿದೆ. ಆಗಸ್ಟ್ 5 ರಂದು ದೈನಂದಿನ ಧನಾತ್ಮಕ ದರವು 5.14 ಶೇಕಡಾವನ್ನು ದಾಖಲಿಸಿದೆ.

4,00,110 ಮಾದರಿಗಳ

4,00,110 ಮಾದರಿಗಳ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಕೋವಿಡ್-19 ಗಾಗಿ ಆಗಸ್ಟ್ 4 ರವರೆಗೆ 87,71,60,646 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಗುರುವಾರ 4,00,110 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇತ್ತೀಚಿಗೆ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ವರದಿಯಿಂದ ತಿಳಿದು ಬಂದಿದೆ. ಮಳೆಯಿಂದಾಗಿ ಜ್ವರ, ನಗಡಿ, ಕೆಮ್ಮು ಲಕ್ಷಣಗಳೊಂದಿಗೆ ಜನ ಹೆಚ್ಚಾಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ.

1,862 ಹೊಸ ಪ್ರಕರಣಗಳು

1,862 ಹೊಸ ಪ್ರಕರಣಗಳು

ಮಹಾರಾಷ್ಟ್ರವು ಗುರುವಾರ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯನ್ನು ಕಂಡಿದೆ. ಏಕೆಂದರೆ ರಾಜ್ಯದಲ್ಲಿ 1,862 ಹೊಸ ಸೋಂಕುಗಳು ವರದಿಯಾಗಿವೆ. ಹಿಂದಿನ ದಿನಕ್ಕಿಂತ ಇದು 70 ಇದು ಕಡಿಮೆ. ಬುಧವಾರ ಮಹಾರಾಷ್ಟ್ರದಲ್ಲಿ 1,932 ಸೋಂಕುಗಳು ಮತ್ತು ಏಳು ಸಾವುಗಳು ದಾಖಲಾಗಿವೆ.

ರಾಜ್ಯದಲ್ಲಿ ಗುರುವಾರ ಏಳು ಸಾವುಗಳು ವರದಿಯಾಗಿವೆ. ಹೊಸ ಪ್ರಕರಣಗಳೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 80,53,965 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 1,48,124 ಕ್ಕೆ ಏರಿದೆ. ಏಳು ಸಾವುಗಳಲ್ಲಿ ಮುಂಬೈ, ಪುಣೆ ಮತ್ತು ಸತಾರಾದಲ್ಲಿ ತಲಾ ಇಬ್ಬರು ಮತ್ತು ಥಾಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ಕಳೆದ 24 ಗಂಟೆಗಳಲ್ಲಿ 2,099 ಸೇರಿದಂತೆ 78,93,764 ಜನರು ಚೇತರಿಸಿಕೊಂಡ ನಂತರ ಬಿಡುಗಡೆಗೊಂಡಿದ್ದಾರೆ, ರಾಜ್ಯದಲ್ಲಿ 12,077 ಸಕ್ರಿಯ ಪ್ರಕರಣಗಳು ಇವೆ.

98.01ರಷ್ಟು ಚೇತರಿಕೆಯ ಪ್ರಮಾಣ

98.01ರಷ್ಟು ಚೇತರಿಕೆಯ ಪ್ರಮಾಣ

ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಚೇತರಿಕೆಯ ಪ್ರಮಾಣವು ಶೇಕಡಾ 98.01 ರಷ್ಟಿದೆ ಎಂದು ತೋರಿಸಿದೆ. ಕಳೆದ 24 ಗಂಟೆಗಳಲ್ಲಿ 40,123 ಮಾದರಿಗಳನ್ನು ಪರೀಕ್ಷಿಸಿದ ನಂತರ ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ವೈರಸ್ ಪರೀಕ್ಷೆಗಳ ಸಂಖ್ಯೆ 8,33,21,005 ಕ್ಕೆ ತಲುಪಿದೆ ಎಂದು ಅದು ಬಹಿರಂಗಪಡಿಸಿದೆ. ದಿನದ ಮಹಾರಾಷ್ಟ್ರದ ಕರೊನಾ ವೈರಸ್ ಅಂಕಿಅಂಶಗಳು: ಒಟ್ಟು ಪ್ರಕರಣಗಳು 80,53,965. ತಾಜಾ ಪ್ರಕರಣಗಳು 1,862, ಸಾವಿನ ಸಂಖ್ಯೆ 1,48,124. ಚೇತರಿಕೆ 78,93,764. ಸಕ್ರಿಯ ಪ್ರಕರಣಗಳು 12,077. ಒಟ್ಟು ಪರೀಕ್ಷೆಗಳು 8,33,21,005.

ಮುಂಗಾರು ಮಳೆ ಆರಂಭವಾದಾಗಿನಿಂದ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿವೆ. ದೇಶದಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು ಈ ನಡುವೆ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,551 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಕೋವಿಡ್-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,35,364 ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಮುಂಗಾರು ಮಳೆ ಆರಂಭವಾದಾಗಿನಿಂದ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿವೆ. ದೇಶದಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು ಈ ನಡುವೆ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,551 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಕೋವಿಡ್-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,35,364 ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

English summary
Since the onset of monsoon, the number of corona cases in India is gradually increasing. 20,551 new cases of Covid-19 have been reported in India in the last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X