ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿಯಲ್ಲಿ 2 ಲಸಿಕೆಗಳು ತುರ್ತು ಬಳಕೆಗೆ ಲಭ್ಯ

|
Google Oneindia Kannada News

ನವದೆಹಲಿ, ಡಿಸೆಂಬರ್ 5: ದೇಶದಲ್ಲಿ ಎರಡು ಕೊರೊನಾ ವೈರಸ್ ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿದ್ದು, 2021ರ ಜನವರಿ ವೇಳೆಗೆ ತುರ್ತುಬಳಕೆಗೆ ಅರ್ಹತೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬ್ರಿಟನ್, ಫೈಜರ್ ಇಂಕ್ ಮತ್ತು ಬಯೋಎನ್‌ಟೆಕ್ ಕಂಪೆನಿಯ ಫೈಜರ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ್ದು, ಬಹರೇನ್ ಕೂಡ ಫೈಜರ್‌ನ ತುರ್ತು ಬಳಕೆಗೆ ಅನುಮತಿ ನೀಡಿದೆ. ಹೀಗಾಗಿ ಭಾರತ ಕೂಡ ತನ್ನಲ್ಲಿ ತಯಾರಾಗುತ್ತಿರುವ ಲಸಿಕೆಗಳು ಮೂರನೇ ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿದ ಮತ್ತು ಕೋವಿಡ್ 19ರ ವಿರುದ್ಧ ಅವು ಪರಿಣಾಮಕಾರಿ ಎಂದು ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವರಿಕೆಯಾದ ಕೂಡಲೇ ಭಾರತದಲ್ಲಿ ಕೂಡ ಲಸಿಕೆಗಳು ತುರ್ತು ಬಳಕೆಗೆ ಲಭ್ಯವಾಗಬಹುದು ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್‌ ವಿಜ್‌ಗೆ ಕೊರೊನಾ ಸೋಂಕು ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್‌ ವಿಜ್‌ಗೆ ಕೊರೊನಾ ಸೋಂಕು

ಭಾರತದಲ್ಲಿನ ತುರ್ತು ಬಳಕೆ ಅನುಮೋದನೆ (ಇಯುಎ) ಪ್ರಕ್ರಿಯೆಯು ಐರೋಪ್ಯ ಒಕ್ಕೂಟ, ಬ್ರಿಟನ್ ಮತ್ತು ಅಮೆರಿಕದಲ್ಲಿ ನಡೆಯುವ ಪ್ರಕ್ರಿಯೆಯಂತೆಯೇ ಇರಲಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ-ಭಾರತೀಯ ಸುಸಂಯೋಜನಾತ್ಮಕ ಔಷಧ ಸಂಸ್ಥೆಯ ರಾಮ್ ವಿಶ್ವಕರ್ಮ ಹೇಳಿದ್ದಾರೆ. ಮುಂದೆ ಓದಿ.

ಭಾರತದಲ್ಲಿ ಶೀಘ್ರವೇ ಅನುಮತಿ

ಭಾರತದಲ್ಲಿ ಶೀಘ್ರವೇ ಅನುಮತಿ

'ಫೈಜರ್ ಕಂಪೆನಿ ಭಾರತದ ಔಷಧ ನಿಯಂತ್ರಕರ ಬಳಿ ಲಸಿಕೆಯ ತುರ್ತು ಬಳಕೆಯ ಅನುಮತಿ ಕೇಳಿದರೆ ಇಲ್ಲಿ ಕೆಲವೇ ದಿನಗಳಲ್ಲಿ ಅನುಮೋದನೆ ದೊರಕಬಹುದು. ಇದು ಔಷಧ ನಿಯಂತ್ರಕರು ಸಂಸ್ಥೆ ಒದಗಿಸುವ ದತ್ತಾಂಶದ ಕುರಿತು ತೃಪ್ತಿಯಾಗುವುದರ ಮೇಲೆ ಅವಲಂಬಿತ. ಪರಿಸ್ಥಿತಿ ಬೇಡಿದರೆ ನಿಯಂತ್ರಕರು ಇನ್ನಷ್ಟು ಪರೀಕ್ಷೆಗಳಿಗೆ ಶಿಫಾರಸು ಮಾಡಬಹುದು ಅಥವಾ ಕೂಡಲೇ ಬಳಕೆಗೆ ಅನುಮತಿ ನೀಡುವ ಅಧಿಕಾರವನ್ನೂ ಹೊಂದಿದೆ. ಅದಕ್ಕೆ ಭಾರತದಲ್ಲಿ ಪ್ರಯೋಗದ ಫಲಿತಾಂಶದ ದತ್ತಾಂಶಗಳ ಅಗತ್ಯ ಬೀಳುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.

ಯಾರಿಗೆ ಮೊದಲು ಲಸಿಕೆ?

ಯಾರಿಗೆ ಮೊದಲು ಲಸಿಕೆ?

ರಾಷ್ಟ್ರೀಯ ಕೋವಿಡ್ -19 ನಿರ್ವಹಣಾ ಕಾರ್ಯಪಡೆಯ ಸದಸ್ಯರೂ ಆಗಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, 'ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಕೊರೊನಾ ವೈರಸ್ ಲಸಿಕೆಗಳು 2021ರ ಜನವರಿಯಲ್ಲಿ ತುರ್ತು ಬಳಕೆಗೆ ಲಭ್ಯವಾಗಬಹುದು. ಅದು ಸಾಧ್ಯವಾದರೆ ಅವುಗಳನ್ನು ತೀವ್ರ ಅನಾರೋಗ್ಯಕ್ಕೆ ಒಳಗಾದವರು ಮತ್ತು 2020ರ ಆರಂಭದಿಂದಲೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ' ಎಂದಿದ್ದಾರೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾರಿಗೆ ಹಾಗೂ ಎಷ್ಟು ಮಂದಿಗೆ ಸಿಗುತ್ತೆ?ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾರಿಗೆ ಹಾಗೂ ಎಷ್ಟು ಮಂದಿಗೆ ಸಿಗುತ್ತೆ?

ಮಾರುಕಟ್ಟೆಯಲ್ಲಿ ಸಿಗಲು ಇನ್ನೂ ಒಂದು ವರ್ಷ

ಮಾರುಕಟ್ಟೆಯಲ್ಲಿ ಸಿಗಲು ಇನ್ನೂ ಒಂದು ವರ್ಷ

ಇದಕ್ಕೂ ಮುನ್ನ ಗುಲೇರಿಯಾ ಅವರು, ಭಾರತದಲ್ಲಿ 2022ರವರೆಗೂ ಸಾಮಾನ್ಯ ಜನರಿಗೆ ಕೊರೊನಾ ವೈರಸ್ ಲಸಿಕೆಗಳು ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದರು. ಭಾರತದ ಮಾರುಕಟ್ಟೆಯಲ್ಲಿ ಲಸಿಕೆ ಸುಲಭವಾಗಿ ಲಭ್ಯವಾಗಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ ಎಂದಿದ್ದರು.

ಮಾಡರ್ನಾ ಕೊವಿಡ್-19 ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಮಾಡರ್ನಾ ಕೊವಿಡ್-19 ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ

Recommended Video

ಸ್ತಬ್ದವಾಗತ್ತಾ ಕರ್ನಾಟಕ | Oneindia Kannada
ಎಲ್ಲ ವಿವರ ಸಲ್ಲಿಸಬೇಕು

ಎಲ್ಲ ವಿವರ ಸಲ್ಲಿಸಬೇಕು

ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತರೆ, ಕಂಪೆನಿಗಳು ಬಿಕ್ಕಟ್ಟನ್ನು ತಗ್ಗಿಸಲು ಸೀಮಿತ ಅವಧಿಯಲ್ಲಿ ಕೊರೊನಾ ವೈರಸ್ ಸಲಿಕೆಯನ್ನು ಬಳಸುವ ಅವಕಾಶ ಪಡೆಯುತ್ತವೆ. ಔಪಚಾರಿಕ ಅನುಮೋದನೆ ಪಡೆಯಲು ಕಂಪೆನಿಯು ತನ್ನ ಔಷಧದ ದಕ್ಷತೆ, ಅಡ್ಡಪರಿಣಾಮಗಳು ಮತ್ತು ಸಮಸ್ಯೆಗಳ ಬಗ್ಗೆ ಎಲ್ಲ ವಿವರಗಳನ್ನೂ ಸಲ್ಲಿಸಬೇಕು.

English summary
AIIMS director Randeep Guleria said 2 coronavirus vaccines could be eligible for emergency use in India by January 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X