ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಕಾ ಕ್ರೇನ್ ದುರಂತ : ಚಿತ್ರಗಳು, ಸಹಾಯವಾಣಿ ಸಂಖ್ಯೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 12 : ಮೆಕ್ಕಾದ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಕ್ರೇನ್ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ಇಬ್ಬರು ಭಾರತೀಯ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಮೆಕ್ಕಾದ ಮುಖ್ಯ ಮಸೀದಿ ಮಸ್ಜಿದ್‌ ಅಲ್‌ ಹರಾಮ್‌ ಪಕ್ಕದಲ್ಲಿ ನಿರ್ಮಾಣ ಕಾಮಗಾರಿಗೆ ಅಳವಡಿಸಲಾಗಿದ್ದ ಕ್ರೇನ್ ಕುಸಿದು ಬಿದ್ದು ಈ ದುರಂತದ ಸಂಭವಿಸಿದೆ. ದುರಂತದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 107. 200ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. [ಮೆಕ್ಕಾದಲ್ಲಿ ದುರಂತ, ಕುಸಿದು ಬಿದ್ದ ಕ್ರೇನ್]

ಭಾರತದ ಹಜ್‌ ಸಮಿತಿಯಿಂದ ಯಾತ್ರೆಗೆ ಹೊರಟಿದ್ದ 11 ಮಂದಿ ಹಾಗೂ ಇತರೆ 4 ಮಂದಿ ಭಾರತೀಯ ಯಾತ್ರಿಗಳು ಈ ದುರಂತದಲ್ಲಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್ ಮಾಡಿದ್ದಾರೆ.

ಮೆಕ್ಕಾದಲ್ಲಿ 24/7 ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ವಿಕಾಸ್ ಸ್ವರೂಪ್ ಅವರು ಹೇಳಿದ್ದು, ಅದರ ನಂಬರ್‌ಗಳನ್ನು ನೀಡಿದ್ದಾರೆ. ಸಹಾಯವಾಣಿ ಸಂಖ್ಯೆಗಳು 00966125458000 ಮತ್ತು 00966125496000. ಕ್ರೇನ್ ದುರಂತದ ಚಿತ್ರಗಳು ಇಲ್ಲಿವೆ..... [ಪಿಟಿಐ ಚಿತ್ರಗಳು]

ಯಾತ್ರಾರ್ಥಿಗಳ ಪ್ರಾಣ ತೆಗೆದ ಕ್ರೇನ್

ಯಾತ್ರಾರ್ಥಿಗಳ ಪ್ರಾಣ ತೆಗೆದ ಕ್ರೇನ್

ಮೆಕ್ಕಾದ ಮುಖ್ಯ ಮಸೀದಿ ಮಸ್ಜಿದ್‌ ಅಲ್‌ ಹರಾಮ್‌ ಪಕ್ಕದಲ್ಲಿ ನಿರ್ಮಾಣ ಕಾಮಗಾರಿಗೆ ಅಳವಡಿಸಲಾಗಿದ್ದ ಕ್ರೇನ್ ಶುಕ್ರವಾರ ಕುಸಿದು ಬಿದ್ದು ಭಾರೀ ದುರಂತ ಸಂಭವಿದೆ. ಈ ದುರಂತದಲ್ಲಿ ಇದುವರೆಗೂ 107 ಜನರು ಮೃತಪಟ್ಟಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. [ಅಕ್ಟೋಬರ್ 10ರ ಚಿತ್ರ]

ಮಳೆಯಿಂದ ಕುಸಿದು ಬಿದ್ದ ಕ್ರೇನ್

ಮಳೆಯಿಂದ ಕುಸಿದು ಬಿದ್ದ ಕ್ರೇನ್

ಮಸೀದಿ ಸುತ್ತಲೂ ಹಲವು ಕ್ರೇನ್‌ಗಳನ್ನು ಅಳವಡಿಸಲಾಗಿದೆ. ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ಕ್ರೇನ್‌ ಕುಸಿದು ಬಿದ್ದಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಇಬ್ಬರು ಭಾರತೀಯರ ದುರ್ಮರಣ

ಇಬ್ಬರು ಭಾರತೀಯರ ದುರ್ಮರಣ

ಮೆಕ್ಕಾದಲ್ಲಿ ನಡೆದ ದುರಂತದಲ್ಲಿ 2 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಹಜ್‌ ಸಮಿತಿಯಿಂದ ಯಾತ್ರೆಗೆ ಹೊರಟಿದ್ದ 11 ಮಂದಿ ಹಾಗೂ ಇತರೆ 4 ಮಂದಿ ಭಾರತೀಯ ಯಾತ್ರಿಗಳು ಈ ದುರಂತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಖರ ಮಾಹಿತಿ ಇನ್ನೂ ತಿಳಿದಿಲ್ಲ

ನಿಖರ ಮಾಹಿತಿ ಇನ್ನೂ ತಿಳಿದಿಲ್ಲ

ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಮತ್ತು ಗಾಯಗೊಂಡವರ ಗುರುತು ಇನ್ನೂ ಪತ್ತೆಯಾಗಿಲ್ಲ. ಭಾರತೀಯ ಮೂಲದ ವೈದ್ಯರನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್ ಮಾಡಿದ್ದಾರೆ.

ಸಹಾಯವಾಣಿ ಆರಂಭ

ಸಹಾಯವಾಣಿ ಆರಂಭ

ದುರಂತದ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಂಖ್ಯೆಗಳು 00966125458000 ಮತ್ತು 00966125496000.

ವಿಕಾಸ್‌ ಸ್ವರೂಪ್‌ ಟ್ವೀಟ್

ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್

English summary
At least 2 Indians were killed and 15 other injured in Mecca crane accident at the Grand Mosque, Saudi Arabia. 107 pilgrims killed and 200 other injured in accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X