ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಆರ್‌ಡಿಒ ನ ಆಂಟಿ ಕೋವಿಡ್‌ ಔಷಧ ಮಾರುಕಟ್ಟೆಗೆ: ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಘೋಷಣೆ

|
Google Oneindia Kannada News

ನವದೆಹಲಿ, ಜೂ.28: ಕೊರೊನಾ ಸೋಂಕಿನಿಂದ ಚೇತರಿಕೆಯ ವೇಗವನ್ನು ಹೆಚ್ಚಿಸುವ ಮತ್ತು ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಔಷಧ ತಯಾರಕ ಸಂಸ್ಥೆ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಪ್ರಕಟಿಸಿದೆ.

2-ಡಿಜಿ ಔಷಧಿಗಳ ಕ್ಲಿನಿಕಲ್ ಪ್ರಯೋಗದಲ್ಲಿ ಈ ಔಷಧಿಯು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಡಿಆರ್‌ಡಿಒ ಔಷಧ ಉತ್ಪಾದನೆ ಪರವಾನಗಿಯನ್ನು ಬೇರೆ ಪ್ರಯೋಗಾಲಯಗಳಿಗೆ ಏಕೆ ನೀಡಿಲ್ಲ?ಡಿಆರ್‌ಡಿಒ ಔಷಧ ಉತ್ಪಾದನೆ ಪರವಾನಗಿಯನ್ನು ಬೇರೆ ಪ್ರಯೋಗಾಲಯಗಳಿಗೆ ಏಕೆ ನೀಡಿಲ್ಲ?

ಕೊರೊನಾ ಎರಡನೇ ಅಲೆಯ ಈ ತೀವ್ರತೆಯ ಮಧ್ಯೆ ಔಷಧ ತಯಾರಕ ಸಂಸ್ಥೆ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ 2-ಡಿಜಿ ಔಷಧಿಯು ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಣೆ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

 ಈ ಔಷಧಿ ತಯಾರಕರು ಯಾರು?

ಈ ಔಷಧಿ ತಯಾರಕರು ಯಾರು?

ಈ ಔಷಧಿಯನ್ನು ಹೈದರಾಬಾದ್‌ನ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್) ಅಭಿವೃದ್ಧಿಪಡಿಸಿದೆ.

 ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ: ಎಷ್ಟು ಪರಿಣಾಮಕಾರಿ?

ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ: ಎಷ್ಟು ಪರಿಣಾಮಕಾರಿ?

ಕೋವಿಡ್‌ ಸಂದರ್ಭದಲ್ಲಿ ಹೊಸ ಭರವಷೆಯಾಗಿರುವ ಈ 2-ಡಿಜಿ ಔಷಧವು ಪುಡಿ ರೂಪದಲ್ಲಿ ಲಭ್ಯವಾಗಲಿದ್ದು, ಅದನ್ನು ನೀರಿನಲ್ಲಿ ಹಾಕಿ ಸೇವಿಸಬೇಕು. ಔಷಧವು ಕೋವಿಡ್‌ ವೈರಸ್-ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಂಡು, ವೈರಸ್‌ ಬೆಳವಣಿಗೆಯನ್ನು ತಡೆಯುತ್ತದೆ. ಈ ಔಷಧಿಯು ವೈರಸ್‌ ಹೆಚ್ಚಳವಾಗುವುದನ್ನು ತಡೆಯುತ್ತದೆ.

ಕೊರೊನಿಲ್ ಔಷಧಿಯಲ್ಲ; ಪತಂಜಲಿ ಪ್ರಸ್ತಾವ ತಿರಸ್ಕರಿಸಿದ ಐಎಂಎಕೊರೊನಿಲ್ ಔಷಧಿಯಲ್ಲ; ಪತಂಜಲಿ ಪ್ರಸ್ತಾವ ತಿರಸ್ಕರಿಸಿದ ಐಎಂಎ

 ಡಿಆರ್‌ಡಿಒ ಆಂಟಿ-ಕೋವಿಡ್ ಔಷಧ ಬೆಲೆ ಎಷ್ಟು?

ಡಿಆರ್‌ಡಿಒ ಆಂಟಿ-ಕೋವಿಡ್ ಔಷಧ ಬೆಲೆ ಎಷ್ಟು?

ಪ್ರತಿ ಡಬ್ಬ ಔಷಧಿಗೆ ಗರಿಷ್ಠ ಚಿಲ್ಲರೆ ದರವನ್ನು (ಎಂಆರ್‌ಪಿ) ರೂ. 990 ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಸದ್ಯಕ್ಕೆ ಔಷಧವು ಮಹಾನಗರಗಳು ಮತ್ತು ಶ್ರೇಣಿ 1 ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಶೀಘ್ರದಲ್ಲೇ ಭಾರತದ ಉಳಿದ ಭಾಗಗಳಲ್ಲಿಯೂ ಲಭ್ಯವಾಗಲಿದೆ.

 ಕೋವಿಡ್‌ ರೂಪಾಂತರಗಳ ವಿರುದ್ದ ಈ ಔಷಧಿ ಪರಿಣಾಮವೇನು?

ಕೋವಿಡ್‌ ರೂಪಾಂತರಗಳ ವಿರುದ್ದ ಈ ಔಷಧಿ ಪರಿಣಾಮವೇನು?

ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಈ ಔಷಧಿಯು ವೈರಸ್‌ ಹೆಚ್ಚಳವಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಔಷಧವು ಯಾವುದೇ ರೂಪಾಂತರವನ್ನು ಗುಣಪಡಿಸುವ ಶಕ್ತಿ ಇದೆ ಎಂಬುವುದು ಕೂಡಾ ತಿಳಿದು ಬಂದಿದೆ ಎಂದು ವರದಿಯಾಗಿದೆ. ಎಲ್ಲಾ ರೂಪಾಂತರಗಳ ವಿರುದ್ದ ಈ ಔಷಧಿಯು ಪರಿಣಾಮಕಾರಿ ಎಂದು ಹೇಳಲಾಗಿದೆ.

ಬ್ಲ್ಯಾಕ್‌ ಫಂಗಸ್ ಸೋಂಕಿಗೆ ಮಹಾರಾಷ್ಟ್ರದಲ್ಲಿ ಲಸಿಕೆ ಉತ್ಪಾದನೆ ಆರಂಭಬ್ಲ್ಯಾಕ್‌ ಫಂಗಸ್ ಸೋಂಕಿಗೆ ಮಹಾರಾಷ್ಟ್ರದಲ್ಲಿ ಲಸಿಕೆ ಉತ್ಪಾದನೆ ಆರಂಭ

 ಗೇಮ್ ಚೇಂಜರ್‌ ಆಗುತ್ತಾ ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ?

ಗೇಮ್ ಚೇಂಜರ್‌ ಆಗುತ್ತಾ ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ?

ಡಿಆರ್‌ಡಿಒನ ಆಂಟಿ-ಕೋವಿಡ್ ಔಷಧವು ಗೇಮ್ ಚೇಂಜರ್ ಆಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಈ ಔಷಧಿಯು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಔಷಧಿಯಾಗಿದೆ. ಹಾಗೆಯೇ ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುವ ಔಷಧಿ ಇದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಆರ್‌ಡಿಒ, "2-ಡಿಜಿ ಗಮನಾರ್ಹವಾಗಿ ಹೆಚ್ಚಿನ ರೋಗಿಗಳಲ್ಲಿ ರೋಗಲಕ್ಷಣವನ್ನು ಸುಧಾರಿಸಿದೆ. ಈ ಔಷಧಿ ಪಡೆದವರು ಪೂರಕ ಆಮ್ಲಜನಕ ಅವಲಂಬನೆಯಿಂದ ಮುಕ್ತರಾಗಿದ್ದಾರೆ. ಇದು ಆಮ್ಲಜನಕ ಚಿಕಿತ್ಸೆ / ಅವಲಂಬನೆಯನ್ನು ಕಡಿಮೆ ಮಾಡಲಿದೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಈ ಬದಲಾವಣೆ ಕಂಡು ಬಂದಿದೆ," ಎಂದು ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Drugmaker Dr. Reddy's Laboratories has announced the commercial launch of 2-deoxy-D-glucose (2-DG), an oral drug, found to help speed up recovery and reduce oxygen dependence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X