ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೌದ್ಧರ ಪುಣ್ಯ ಕ್ಷೇತ್ರ ಬೋಧ್ ಗಯಾದಲ್ಲಿ ಬಾಂಬ್ ಪತ್ತೆ, ಕಟ್ಟೆಚ್ಚರ

By Manjunatha
|
Google Oneindia Kannada News

ಪಟ್ನಾ, ಜನವರಿ 20: ಬೌದ್ಧರ ಪವಿತ್ರ ಕ್ಷೇತ್ರ ಬೋಧ್ ಗಯಾದಲ್ಲಿ ಶುಕ್ರವಾರ ರಾತ್ರಿ ಎರಡು ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬೋಧ್ ಗಯಾದ ಮಹಾಬೋಧಿ ದೇಗುಲದ 4ನೇ ಗೇಟ್‌ ಬಳಿ 10 ಕೆಜಿ ತೂಕದ ಎರಡು ಬಾಂಬ್‌ಗಳು ಪತ್ತೆಯಾಗಿವೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಸದ್ಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಸಿಬ್ಬಂದಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಬಾಂಬ್‌ಗಳು ಪತ್ತೆಯಾದ ಸಮಯದಲ್ಲಿ ಬಿಹಾರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಹ ದೇಗುಲದಲ್ಲಿದ್ದರು. ಅದಲ್ಲದೆ ಟಿಬೆಟನ್ನರ ಧರ್ಮ ಗುರು ದಲೈ ಲಾಮಾ ಅವರು ಧರ್ಮೋಪದೇಶ ನೀಡಿ ತೆರಳಿ ಸ್ವಲ್ಪ ಸಮಯವಷ್ಟೆ ಆಗಿತ್ತು. ತಿಂಗಳ ಕಾಲ ನಡೆಯುವ 'ಕಲ್‌ಚಕ್ರ ಪೂಜಾ' ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು ಈ ಸಮಯದಲ್ಲಿ ಬಾಂಬ್ ಪತ್ತೆ ಆಗಿದ್ದು, ತೀವ್ರ ಆತಂಕವನ್ನು ಉಂಟುಮಾಡಿದೆ.

2 Bombs found in Bodh Gaya

ಬೌದ್ಧ ಗುಡಿಯನ್ನು ಗಡಗಡಿಸಿದ ಸ್ಫೋಟದ ಚಿತ್ರಗಳುಬೌದ್ಧ ಗುಡಿಯನ್ನು ಗಡಗಡಿಸಿದ ಸ್ಫೋಟದ ಚಿತ್ರಗಳು

ಈ ಹಿಂದೆ ಬಾಂಬ್ ದಾಳಿ ನಡೆದಿತ್ತು
ಮಹಾಬೋಧಿ ದೇಗುಲದ ಆವರಣದಲ್ಲಿ 2013ರಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟ ನಡೆದಿತ್ತು. ಆ ಸ್ಪೋಟದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು. ಆಗ 10ಕ್ಕೂ ಹೆಚ್ಚು ಬಾಂಬ್‌ಗಳನ್ನು ದೇಗುಲದ ಆವರಣದಲ್ಲಿ ಹುದುಗಿಸಿಡಲಾಗಿತ್ತು.

English summary
2 crude bombs found in Bodh Gaya yesterday night. Bomb found just hours after Tibetan spiritual leader Dalai Lama had retired for the day. there is a massive bomb blast in 2013 in Bodh Gaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X