ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ ಹತ್ಯಾಕಾಂಡ ಕೇಸ್ ರೀಓಪನ್: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್‌ಗೆ ಸಂಕಷ್ಟ

|
Google Oneindia Kannada News

ನವದೆಹಲಿ, ಜೂನ್ 15: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. 1984ರ ಸಿಖ್ ಹತ್ಯಾಕಾಂಡದ ಹಳೆಯ ಮುಚ್ಚಿದ ಪ್ರಕರಣಗಳನ್ನು ಮತ್ತೆ ತೆರೆಯಲು ಗೃಹ ಸಚಿವಾಲಯ ಅನುಮತಿ ನೀಡಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿರುದ್ಧದ 1984ರ ಸಿಖ್ ವಿರೋಧಿ ಗಲಭೆಯ ಮುಚ್ಚಿದ ಕೇಸುಗಳನ್ನು ಪುನಃ ತೆರೆದು ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಸ್‌ಐಟಿಗೆ ಸೂಚನೆ ನೀಡಿದೆ ಎಂದು ಶಿರೋಮಣಿ ಅಕಾಲಿದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ? 1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?

ಗಾಂಧಿ ಕುಟುಂಬದಿಂದಾಗಿ ಜೆಡ್ ಪ್ಲಸ್ ಭದ್ರತೆಯಲ್ಲಿ ಎಂಜಾಯ್ ಮಾಡುತ್ತಿದ್ದ ಸಜ್ಜನ್ ಕುಮಾರ್ ಅವರಂತೆಯೇ ಕಮಲ್ ನಾಥ್ ಅವರೂ ಈ ಪ್ರಕರಣದ ಪುನರ್ ತನಿಖೆಯಿಂದ ಖಂಡಿತವಾಗಿಯೂ ಜೈಲು ಸೇರಲಿದ್ದಾರೆ. ಅವರ ವಿರುದ್ಧದ ಹೊಸ ತನಿಖೆ ಪೂರ್ಣಗೊಂಡ ಬಳಿಕ 1984ರ ಸಿಖ್ ವಿರೋಧಿ ಗಲಭೆಯಲ್ಲಿ ಅವರ ಪಾಲ್ಗೊಳ್ಳುವಿಕೆ ನ್ಯಾಯಾಲಯದಲ್ಲಿ ಸಾಬೀತಾಗಲಿದೆ ಎಂದು ಹೇಳಿದ್ದಾರೆ.

'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'! 'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!

2019ರ ಏಪ್ರಿಲ್ 9ರಂದು ಗೃಹ ಸಚಿವಾಲಯ ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿ ಸಿರ್ಸಾ ಈ ಹೇಳಿಕೆ ನೀಡಿದ್ದಾರೆ.

ಮುಚ್ಚಿದ ಪ್ರಕರಣಗಳಿಗೆ ಮರುಜೀವ

ಮುಚ್ಚಿದ ಪ್ರಕರಣಗಳಿಗೆ ಮರುಜೀವ

1984ರ ಗಲಭೆಗೆ ಸಂಬಂಧಿಸಿದಂತೆ ರಾಜಧಾನಿ ದೆಹಲಿಯ ಪ್ರದೇಶದಲ್ಲಿ ದಾಖಲಾಗಿದ್ದ ಗಂಭೀರ ಅಪರಾಧ ಪ್ರಕರಣಗಳು ಮತ್ತು ಮುಚ್ಚಿಹೋದ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವಂತೆ ಎಸ್‌ಐಟಿಗೆ ಅದೇಶಿಸಲಾಗಿದೆ. ಈ ಆದೇಶದ ಅನ್ವಯ ಎಸ್‌ಐಟಿ ದಾಖಲೆಗಳನ್ನು ಹೊಸದಾಗಿ ಸಿದ್ದಪಡಿಸಿ ತನಿಖೆ ಆರಂಭಿಸಬೇಕಿದೆ.

ಕಮಲ್ ನಾಥ್ ಹೆಸರು ಉಲ್ಲೇಖಿಸಿರಲಿಲ್ಲ

ಕಮಲ್ ನಾಥ್ ಹೆಸರು ಉಲ್ಲೇಖಿಸಿರಲಿಲ್ಲ

ಗುರುದ್ವಾರ ರಕಬ್ ಗಂಜ್ ಸಾಹಿಬ್‌ನಲ್ಲಿ ಇಬ್ಬರು ಸಿಖ್ಖರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ 1984 ನವೆಂಬರ್ 1ರಂದು ದಾಖಲಾದ ಎಫ್‌ಐಆರ್‌ನಲ್ಲಿ ಕಮಲ್ ನಾಥ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿರಲಿಲ್ಲ ಎಂದು ಸಿರ್ಸಾ ಆರೋಪಿಸಿದ್ದಾರೆ.

ಸಿಖ್ ದಂಗೆ, ಭೋಪಾಲ್ ದುರಂತಕ್ಕೆ ಯಾರು ನ್ಯಾಯ ಕೊಡುತ್ತಾರೆ?: ಮೋದಿ ಪ್ರಶ್ನೆಸಿಖ್ ದಂಗೆ, ಭೋಪಾಲ್ ದುರಂತಕ್ಕೆ ಯಾರು ನ್ಯಾಯ ಕೊಡುತ್ತಾರೆ?: ಮೋದಿ ಪ್ರಶ್ನೆ

ಮನವಿ ಮಾಡಿದ್ದ ಡಿಎಸ್‌ಜಿಎಂಸಿ

ಮನವಿ ಮಾಡಿದ್ದ ಡಿಎಸ್‌ಜಿಎಂಸಿ

ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಕಮಲ್ ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಎಸ್‌ಐಟಿಯನ್ನು ಸಂಪರ್ಕಿಸಿತ್ತು. ಆದರೆ, ತಾಂತ್ರಿಕ ಕಾರಣವೊಡ್ಡಿ ಎಫ್‌ಐಆರ್ ದಾಖಲು ಮಾಡಿರಲಿಲ್ಲ. ಈಗ ಕಮಲ್ ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಲು ಗೃಹ ಸಚಿವಾಲಯ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಗೇಟ್ ಮುಂದೆ ಇದ್ದ ಕಮಲ್ ನಾಥ್

ಗೇಟ್ ಮುಂದೆ ಇದ್ದ ಕಮಲ್ ನಾಥ್

ಹಿರಿಯ ಪತ್ರಕರ್ತ ಸಂಜಯ್ ಸೂರಿ ಮತ್ತು ಡಿಎಸ್‌ಜಿಎಂಸಿಯ ನಿವೃತ್ತ ಉದ್ಯೋಗಿ ಮುಖ್ತಿಯಾರ್ ಸಿಂಗ್ ಈ ಪ್ರಕರಣದಲ್ಲಿ ಸಾಕ್ಷಿಗಳಾಗುವ ಸಾಧ್ಯತೆ ಇದೆ. ಗುಂಪೊಂದು ಇಬ್ಬರು ಸಿಖ್ಖರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಕಮಲ್ ನಾಥ್ ಗುರುದ್ವಾರ ರಕಬ್ ಗಂಜ್ ಸಾಹಿಬ್ ಪ್ರವೇಶದ ಮುಂಭಾಗದಲ್ಲಿದ್ದರು ಎಂದು ಸಾಕ್ಷ್ಯ ಹೇಳಲು ಇಬ್ಬರೂ ಸಿದ್ಧರಿದ್ದಾರೆ ಎಂದು ಸಿರ್ಸಾ ಹೇಳಿದ್ದಾರೆ.

ತಿಹಾರ್ ಬದಲಿಗೆ ಮಂಡೋಲಿ ಕಾರಾಗೃಹಕ್ಕೆ ಸಜ್ಜನ್ ಕುಮಾರ್ ತಿಹಾರ್ ಬದಲಿಗೆ ಮಂಡೋಲಿ ಕಾರಾಗೃಹಕ್ಕೆ ಸಜ್ಜನ್ ಕುಮಾರ್

English summary
Shiromani Akali Dal leader Manjinder Singh Sirsa said that, the Home Ministry has asked the SIT to reinvestigate the closed cases of 1984 Sikh riots. Madhya Pradesh CM Kamal Nath will surely go to jail, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X