ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋ-ಪಾಕ್ ಯುದ್ಧಕ್ಕೆ 50 ವರ್ಷ, ಯೋಧರಿಗೆ ಮೋದಿ ನಮನ

|
Google Oneindia Kannada News

ನವದೆಹಲಿ, ಆಗಸ್ಟ್. 28: ಅದು 1965. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಕಾಲ. ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ನಮ್ಮ ಯೋಧರು ಭಾರತಕ್ಕೆ ಜಯವನ್ನು ತಂದಿದ್ದರು. ಕಾಶ್ಮೀರದ ಗಡಿಯೊಳಗೆ ನುಸುಳದಂತೆ ಎಚ್ಚರಿಕೆಯನ್ನು ನೀಡಿದ್ದರು.

ಇಂದಿಗೆ ಯುದ್ಧ ಗೆದ್ದ ಸಂಭ್ರಮಕ್ಕೆ 50 ವರ್ಷ ತುಂಬಿದೆ. ಸಾಮಾಜಿಕ ತಾಣಗಳಲ್ಲಿ ವೀರ ಯೋಧರ ಸಾಧನೆಯನ್ನು ನೆನಪು ಮಾಡಿಕೊಳ್ಳಲಾಗುತ್ತಿದ್ದು ನಮನ ಸಲ್ಲಿಸಲಾಗುತ್ತಿದೆ.[ಭಾರತದ ವಿರುದ್ಧ ಸೈಬರ್ ಯುದ್ಧ ಆರಂಭಿಸಿದ ಪಾಕ್]

india

1965 ರ ಏಪ್ರಿಲ್ ಮತ್ತು ಆಗಸ್ಟ್ ಅವಧಿಯಲ್ಲಿ ನಡೆದ ಯುದ್ಧ ಆತಂಕ ಸೃಷ್ಟಿ ಮಾಡಿತ್ತು. ಇದನ್ನು ಎರಡನೇ ಕಾಶ್ಮೀರ್ ಯುದ್ಧ, ಹಜಿಪುರ್ ಯುದ್ಧ ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಕಾಶ್ಮೀರ ಮಾರ್ಗವಾಗಿ ಭಾರತದೊಳಕ್ಕೆ ಯೋಧರನ್ನು ನುಗ್ಗಿಸುವ ಯತ್ನ ಮಾಡಿದ್ದು ಯುದ್ಧಕ್ಕೆ ನಾಂದಿಯಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ವೀರ ಯೋಧರಿಗೆ ನಮನ ಸಲ್ಲಿಕೆ ಮಾಡಿದ್ದಾರೆ. ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ನಾಯಕತ್ವವೇ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ವೀರ ಯೋಧರ ಸಾಹಸ ಮತ್ತು ಶೌರ್ಯಗಳನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಇಂದಿನ ಕರ್ತವ್ಯ.

English summary
Today(Auguest 28, 2015) is a remarkable day, golden jubilee of battle of Hajipur. Hajipur is a strategic pass which served as a vital link between saboteurs operating in Poonch and their bases in Pakistan occupied Kashmir, and it was captured by the Indian Army on 28th August at 10 am. lets take you to the flash back and talk about the history of this war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X