India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 1 ಲಕ್ಷ ಮೀರಿದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ

|
Google Oneindia Kannada News

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜನಜಾಗೃತಿ ಹೆಚ್ಚಿಸಲಾಗುತ್ತಿದೆ. ಕಳೆದ ದಿನಕ್ಕೆ ಹೋಲಿಸಿದರೆ ಇಂದು ದೇಶದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,819 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಸೋಂಕಿನಿಂದ 39 ಸಾವುಗಳು ಸಂಭವಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ (ಜೂನ್ 30) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 13,827 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ಚೇತರಿಕೆಯ ದರ ಸುಮಾರು 98.56 ಪ್ರತಿಶತವಿದೆ. ನಿನ್ನೆ 99,602 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು ಭಾರತದಲ್ಲಿಂದು COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 1,04,555 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ.

ಮಾರ್ಚ್ 2020 ರಲ್ಲಿ ಕೊರೊನಾ ಮೊದಲ ಸಾವು

ಮಾರ್ಚ್ 2020 ರಲ್ಲಿ ಕೊರೊನಾ ಮೊದಲ ಸಾವು

24 ಗಂಟೆಗಳ ಅವಧಿಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 4,953ರಷ್ಟು ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು 0.23 ಪ್ರತಿಶತ ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ. ಡೇಟಾ ಪ್ರಕಾರ, ಫೆಬ್ರವರಿ 28 ರಂದು ಕೋವಿಡ್ ಸಕ್ರಿಯ ಪ್ರಕರಣಗಳು 1,02,601 ರಷ್ಟಿದೆ. ಮಾರ್ಚ್ 1 ರಂದು ಈ ಸಂಖ್ಯೆ 92,472ಕ್ಕೆ ಕುಸಿದಿದೆ. ಭಾರತದಲ್ಲಿ ಮಾರ್ಚ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,25,116 ರಷ್ಟಿದೆ.

ದೆಹಲಿ ಕೋವಿಡ್ ಪ್ರಮಾಣ

ದೆಹಲಿ ಕೋವಿಡ್ ಪ್ರಮಾಣ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂನ್ 29 ರವರೆಗೆ COVID-19 ಗಾಗಿ 86,23,75,489 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಬುಧವಾರ 4,52,430 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ನವದೆಹಲಿಯಲ್ಲಿ ಬುಧವಾರ 1,109 ಕೊರೊನವೈರಸ್ ಪ್ರಕರಣಗಳು ದಾಖಲಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ 1,000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಸಕಾರಾತ್ಮಕತೆಯ ದರವು 5.87 ಪ್ರತಿಶತದಷ್ಟಿದೆ. ಹಿಂದಿನ ದಿನ ನಡೆಸಿದ ಪರೀಕ್ಷೆಗಳಲ್ಲಿ ಬುಧವಾರ 18,886 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೆಹಲಿಯ ಪ್ರಕರಣಗಳ ಸಂಖ್ಯೆ 19,34,009 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 26,261ಕ್ಕೆ ತಲುಪಿದೆ.

ಕೆಲ ದಿನಗಳ ಅಂಕಿ ಅಂಶ ಇಲ್ಲಿದೆ

ಕೆಲ ದಿನಗಳ ಅಂಕಿ ಅಂಶ ಇಲ್ಲಿದೆ

ಮಂಗಳವಾರ ದೆಹಲಿಯಲ್ಲಿ 874 ಹೊಸ COVID-19 ಪ್ರಕರಣಗಳು ಮತ್ತು ಸೋಂಕಿನಿಂದ ನಾಲ್ಕು ಸಾವುಗಳು ದಾಖಲಾಗಿವೆ. ಆದರೆ ಸಕಾರಾತ್ಮಕ ದರವು ಶೇಕಡಾ 5.18 ರಷ್ಟಿದೆ. ರಾಷ್ಟ್ರ ರಾಜಧಾನಿ ಸೋಮವಾರ 628 ಕೋವಿಡ್ ಪ್ರಕರಣಗಳು ಮತ್ತು ವೈರಲ್ ಕಾಯಿಲೆಯಿಂದ ಮೂರು ಸಾವುಗಳನ್ನು ವರದಿ ಮಾಡಿದೆ. ಆದರೆ ಧನಾತ್ಮಕ ದರವು ಶೇಕಡಾ 8.06 ರಷ್ಟಿದೆ.

ಶನಿವಾರ, ನಗರವು ಕೋವಿಡ್‌ನಿಂದ ಆರು ಸಾವುಗಳನ್ನು ಕಂಡರೆ, ಧನಾತ್ಮಕ ಪ್ರಮಾಣವು ಶೇಕಡಾ 7.8 ರಷ್ಟಿತ್ತು. ಶುಕ್ರವಾರ ನಗರದಲ್ಲಿ 1,447 ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ದಾಖಲಾಗಿದ್ದರೆ, ಧನಾತ್ಮಕ ಪ್ರಮಾಣವು ಶೇಕಡಾ 5.98 ರಷ್ಟಿತ್ತು. ದೆಹಲಿಯಲ್ಲಿ ಗುರುವಾರ 1,934 ಕೋವಿಡ್ ಪ್ರಕರಣಗಗಳು ದಾಖಲಾಗಿದ್ದರೆ ಯಾವುದೇ ಸಾವು ದಾಖಲಾಗಿರಲಿಲ್ಲ. ಸಕಾರಾತ್ಮಕ ಪ್ರಮಾಣವು ಶೇಕಡಾ 8.1 ರಷ್ಟಿತ್ತು.

ರೋಗ ಲಕ್ಷಣಗಳ ತೀವ್ರತೆ ಕಡಿಮೆ

ರೋಗ ಲಕ್ಷಣಗಳ ತೀವ್ರತೆ ಕಡಿಮೆ

ನಗರದ ಆಸ್ಪತ್ರೆಗಳಲ್ಲಿನ ಕೋವಿಡ್ ರೋಗಿಗಳ 9,497 ಹಾಸಿಗೆಗಳಲ್ಲಿ 273 ಹಾಸಿಗಳು ಭರ್ತಿಯಾಗಿವೆ. ಆದರೆ ಕೋವಿಡ್ ಕೇರ್ ಸೆಂಟರ್‌ಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿನ ಹಾಸಿಗೆಗಳು ಖಾಲಿಯಾಗಿವೆ ಎಂದು ಇಲಾಖೆ ತಿಳಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಆಸ್ಪತ್ರೆಗಳು ದಾಖಲಾತಿಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಆದರೆ ಹೆಚ್ಚಿನ ರೋಗಿಗಳು ಕಠಿಣ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿಲ್ಲ ಎಂದು ವೈದ್ಯರು ಹೇಳುತ್ತಾರೆ.

   ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕ್ಷಣಗಣನೆ | *Poltics | OneIndia
   English summary
   India recorded 18,819 new cases of the novel coronavirus, along with 39 deaths due to the infection in the past 24 hours and the number of active cases has crossed 1 lakh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X