ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 17 ಕ್ಕೆ 17ನೇ ಲೋಕಸಭೆಯ ಮೊದಲ ಅಧಿವೇಶನ

|
Google Oneindia Kannada News

ನವದೆಹಲಿ, ಜೂನ್ 13: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 17 ರಂದು ಆರಂಭವಾಗಲಿದೆ. ಇದು ಮೊದಲ ಅಧಿವೇಶನ ಆಗಿದ್ದು, ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ.

ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಸದನದಲ್ಲಿ ಮಂಡನೆ ಆಗಲಿದ್ದು, ಕಾವೇರಿದ ಚರ್ಚೆಯ ಜೊತೆಗೆ ಮೊದಲ ಅಧಿವೇಶನದಲ್ಲಿ ದೇಶಕ್ಕೆ ಪರವಾಗುವ ಯಾವ-ಯಾವ ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸುತ್ತದೆ ಎಂಬ ನಿರೀಕ್ಷೆಯೂ ಇದೆ.

ಬೆಳಿಗ್ಗೆ 9.30ಕ್ಕೆ ಕಚೇರಿಯಲ್ಲಿರಬೇಕು: ಸಚಿವರಿಗೆ ಮೋದಿ ಕಟ್ಟಪ್ಪಣೆ ಬೆಳಿಗ್ಗೆ 9.30ಕ್ಕೆ ಕಚೇರಿಯಲ್ಲಿರಬೇಕು: ಸಚಿವರಿಗೆ ಮೋದಿ ಕಟ್ಟಪ್ಪಣೆ

ಜೂನ್ 17 ರಂದು ದೆಹಲಿಯ ಲೋಕಸಭೆ ಭವನದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಉಭಯ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮತ್ತು ಅದೇ ದಿನ ಹೊಸ ಸಂಸದರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

17th Lok Sabhas first session will start from June 17

ಪ್ರಥಮ ಅಧಿವೇಶನವು ಜೂನ್ 17 ರಿಂದ ಜುಲೈ 26 ರ ವರೆಗೆ ನಡೆಯಲಿದ್ದು, ಜುಲೈ 5 ರಂದು ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.

ಚೀನಾ-ಭಾರತ ಮಾತುಕತೆ ಫಲಪ್ರದ, ಮೋದಿ ಆಹ್ವಾನ ಸ್ವೀಕಾರಚೀನಾ-ಭಾರತ ಮಾತುಕತೆ ಫಲಪ್ರದ, ಮೋದಿ ಆಹ್ವಾನ ಸ್ವೀಕಾರ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರುಗಳನ್ನು ಭೇಟಿ ಆಗಿ ಸುಗಮ ಕಲಾಪಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

English summary
New Lok Sabha's first , lok sabha session will start from June 17 and end on July 26. Triple Talaq and many more bills were going to have discussions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X