ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣ ಆಸ್ಪತ್ರೆಯಿಂದ 1710 ಡೋಸ್ ಕೊರೊನಾ ಲಸಿಕೆ ಕಳವು

|
Google Oneindia Kannada News

ಹರ್ಯಾಣ, ಏಪ್ರಿಲ್ 22: ಹರ್ಯಾಣದ ಆಸ್ಪತ್ರೆಯೊಂದರಿಂದ ಸುಮಾರು 1710 ಕೊರೊನಾ ಲಸಿಕೆ ಡೋಸ್‌ಗಳನ್ನು ಕಳ್ಳತನ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬುಧವಾರವಷ್ಟೇ ಹರ್ಯಾಣದಲ್ಲಿ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ ಕಳ್ಳತನವಾಗಿರುವ ಘಟನೆ ನಡೆದಿತ್ತು.

1270 ಡೋಸ್ ಗಳಷ್ಟು ಕೋವಿಶೀಲ್ಡ್ ಹಾಗೂ 440 ಕೋವ್ಯಾಕ್ಸಿನ್ ಡೋಸ್ ಗಳನ್ನು ಕಳ್ಳತನ ಮಾಡಲಾಗಿದೆ. ಅಷ್ಟೇ ಅಲ್ಲದೇ ಪ್ರಮುಖವಾದ ಕೆಲವು ಕಡತಗಳೂ ಕಳುವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರದ ಉಸ್ತುವಾರಿ ದೂರು ನೀಡಿದ್ದು, ಪೊಲೀಸ್ ತನಿಖೆ ಪ್ರಾರಂಭವಾಗಿದೆ.

ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕಳವುಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕಳವು

ಇದಕ್ಕೂ ಮುನ್ನ ಹರ್ಯಾಣದಲ್ಲಿ ಆಕ್ಸಿಜನ್ ಟ್ಯಾಂಕರ್‌ನ್ನು ಲೂಟಿ ಮಾಡಲಾಗಿತ್ತು, ಪಾಣಿಪತ್ ನಿಂದ ಫರೀದಾಬಾದ್‌ಗೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಿದ್ದ ಘಟನೆ ನಡೆದಿತ್ತು.

1,710 Doses Of Covid Vaccine Stolen From Jind Civil Hospital

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹರ್ಯಾಣ ಸಚಿವ ಅನಿಲ್ ವಿಜ್, ದೆಹಲಿ ಸರ್ಕಾರ ಆಕ್ಸಿಜನ್ ಟ್ಯಾಂಕರ್ ಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ್ದರು. ಹರ್ಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಲ್ಲಿ 1,710 ಡೋಸ್ ಗಳಷ್ಟು ಕೋವಿಡ್-19 ಲಸಿಕೆಯನ್ನು ಕಳುವು ಮಾಡಲಾಗಿದೆ.

ಬುಧವಾರ ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿರುವ ಘಟನೆ ವರದಿಯಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ವರಿಷ್ಠಾಧಿಕಾರಿಗಳು, ಆಕ್ಸಿಜನ್ ಸಿಲಿಂಡರ್ ಗಳ ಲೂಟಿಯಾಗಿರುವುದು ನಿಜ, ಆದರೆ ಇದರಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ. ಆಸ್ಪತ್ರೆಯಲ್ಲಿ ಸಾಕಷ್ಟು ಆಕ್ಸಿಜನ್ ಸಿಲಿಂಡರ್‌ಗಳ ದಾಸ್ತಾನಿದೆ.

English summary
As many as 1,710 doses of Covid-19 vaccines, comprising 440 doses of Covaxin and 1,270 of Covishield, were stolen from the Civil Hospital in Jind at 12.44am on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X