ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ವರ್ಷಗಳಲ್ಲಿ 170 ಕಾಂಗ್ರೆಸ್, 18 ಬಿಜೆಪಿ ಶಾಸಕರ ನಿಷ್ಠೆ ಬದಲಾಗಿದೆ: ಎಡಿಆರ್ ಸಮೀಕ್ಷೆ

|
Google Oneindia Kannada News

ನವದೆಹಲಿ, ಮಾರ್ಚ್ 11: ನಾಲ್ಕು ವರ್ಷಗಳಲ್ಲಿ 170 ಕಾಂಗ್ರೆಸ್ ಶಾಸಕರ ನಿಷ್ಠೆ ಬದಲಾಗಿದೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ 18 ಬಿಜೆಪಿ ಶಾಸಕರು ಕೂಡ ಪಕ್ಷ ತೊರೆದು ಬೇರೆ ಪಕ್ಷಗಳನ್ನು ಸೇರಿಕೊಂಡಿದ್ದಾರೆ ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ ವರದಿ ಮಾಡಿದೆ.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ! ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೌನ ಮುರಿದ ಮಧು ಬಂಗಾರಪ್ಪ!

2016-2020ರ ಅವಧಿಯಲ್ಲಿ ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 16 ಮಂದಿ ರಾಜ್ಯಸಭಾ ಸದಸ್ಯರಲ್ಲಿ 10 ಮಂದಿ ಬಿಜೆಪಿ ಸೇರಿದ್ದಾರೆ. ಪಕ್ಷಗಳನ್ನು ಬದಲಿಸಿದ 12 ಲೋಕಸಭಾ ಸದಸ್ಯರಲ್ಲಿ ಐವರು 2019ರ ಲೋಕಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

170 MLAs Left Congress To join Other Parties During Elections Held Between 2016-2020: ADR

ಈ ಅವಧಿಯಲ್ಲಿ ಪಕ್ಷ ಬದಲಿಸಿದ 405 ಶಾಸಕರಲ್ಲಿ 182 ಮಂದಿ ಬಿಜೆಪಿ ಸೇರಿದರೆ, 38 ಮಂದಿ ಕಾಂಗ್ರೆಸ್‌ಗೆ ಸೇರಿದ್ದಾರೆ. 25 ಮಂದಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ವರದಿ ತಯಾರಿಕೆಗಾಗಿ ಎಡಿಆರ್ ಸಂಸ್ಥೆ, ಚುನಾವಣಾ ಆಯೋಗದಲ್ಲಿನ 443 ಸಂಸದರು ಮತ್ತು ಶಾಸಕರ ಸ್ವಯಂ ದೃಢೀಕರಣ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ಒಟ್ಟು ಐದು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರಿದರು.

2016-2020ರ ಸಮಯದಲ್ಲಿ ರಾಜ್ಯಸಭೆಗೆ ಅಯ್ಕೆಯಾಗಿದ್ದ ಏಳು ಕಾಂಗ್ರೆಸ್ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಸೇರಿದ್ದಾರೆ.

ಶಾಸಕರ ಪಕ್ಷಾಂತರದಿಂದಾಗಿ ಕರ್ನಾಟಕ, ಅರುಣಾಚಲಪ್ರದೇಶ, ಮಣಿಪುರ, ಗೋವಾ, ಮಧ್ಯಪ್ರದೇಶ ಸರ್ಕಾರಗಳು ಪತನಗೊಂಡಿವೆ ಎಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ವರದಿ ಹೇಳಿದೆ.

English summary
As many as 170 MLAs left the Congress to join other parties during the elections held between 2016-2020, while only 18 BJP legislators switched parties to contest the polls in this period, according to a report by poll rights group Association for Democratic Reforms (ADR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X