ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೂಧಿಯಾನಾ ವಿಮಾನ ನಿಲ್ದಾಣದಿ 170 ಕೆಜಿ ಚಿನ್ನ ವಶ

By Mahesh
|
Google Oneindia Kannada News

ಎಂದು ತೆರಿಗೆ ಇಲಾಖೆ ಆಯುಕ್ತ ರಿಷಿಪಾಲ್ ಹೇಳಿದ್ದಾರೆ.
ಲೂಧಿಯಾನಾ, ಸೆ. 20: ಇಲ್ಲಿನ ಸಹ್ನೆವಾಲ್ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಚಿನ್ನ, ವಜ್ರಾಭರಣಗಳನ್ನು ಪಂಜಾಬ್ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯ ಅಧಿಕಾರಿಗಳು ವಜ್ರಖಚಿತ ಆಭರಣ ಹಾಗೂ ಚಿನ್ನಾಭರಣಗಳನ್ನು ಅಕ್ರಮವಾಗಿ ಚಾರ್ಟೆಡ್ ವಿಮಾನದ ಮೂಲದ ಸಾಗಿಸುವಾಗ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಸುಮಾರು 170 ಕೆಜಿ ತೂಗುವ ಆಭರಣಗಳ ಸಾಗಾಣಿಕೆ ಬಗ್ಗೆ ಅಗತ್ಯ ದಾಖಲೆ ಒದಗಿಸುವಂತೆ ಅಧಿಕಾರಿಗಳು ಕೇಳಿದ್ದಾರೆ. ಆದರೆ, ಖಾಸಗಿ ಸಂಸ್ಥೆ ಪ್ರತಿನಿಧಿಗಳು ಕೊಟ್ಟ ದಾಖಲೆಗಳು ಪೂರಕವಾಗಿಲ್ಲದ ಕಾರಣ, ಎಲ್ಲವನ್ನು ವಶಪಡಿಸಿಕೊಳ್ಳಬೇಕಾಯಿತು. ವಶಪಡಿಸಿಕೊಂಡ ಚಿನ್ನ, ವಜ್ರಾಭರಣಗಳನ್ನು ಸರ್ಕಾರಿ ಟ್ರೇಷರಿಯಲ್ಲಿ ದಾಖಲಿಸಲಾಗಿದೆ ಎಂದು ತೆರಿಗೆ ಇಲಾಖೆ ಆಯುಕ್ತ ರಿಷಿಪಾಲ್ ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಖಾಸಗಿ ಕಂಪನಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ನಾವು ಈ ರೀತಿ ಭಾರಿ ಪ್ರಮಾಣದ ಚಿನ್ನಾಭರಣ ಸಾಗಿಸಬೇಕಾಯಿತು, ಲೂಧಿಯಾನಾದಲ್ಲಿ ಹೊಸ ಶೋರೂಮ್ ಆರಂಭಿಸಲಾಗುತ್ತಿದೆ ಎನ್ನಲಾಗಿದೆ.

ಆದರೆ, ಸರಿಯಾದ ದಾಖಲೆ ಪ್ರಮಾಣ ಪತ್ರ ಒದಗಿಸಿದ ಹೊರತೂ ಚಿನ್ನಾಭರಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಸೂಕ್ತ ದಾಖಲೆ ನೀಡದಿದ್ದರೆ ಸುಮಾರು 32 ಕೋಟಿ ರು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಒಂದು ವೇಳೆ ಸೂಕ್ತ ದಾಖಲೆ ಒದಗಿಸಿದರೆ ಸರಕಿನ ಒಟ್ಟು ಮೌಲ್ಯದ ಶೇಕಡ ಒಂದು ಭಾಗ ತೆರಿಗೆ ರೂಪದಲ್ಲಿ ಹಾಕಲಾಗುತ್ತದೆ ಎಂದು ರಿಷಿಪಾಲ್ ಹೇಳಿದ್ದಾರೆ.

ಈ ಆಭರಣಗಳು ಮೊದಲಿಗೆ ತ್ರಿಚ್ಚೂರು, ಕೊಯಮತ್ತೂರು ಹಾಗೂ ಅಹಮದಾಬಾದಿಗೆ ಸಾಗಿ ನಂತರ ವಿಮಾನ ಮೂಲಕ ಲೂಧಿಯಾನ ತಲುಪಿತ್ತು.

ಪ್ರತಿಷ್ಠಿತ ಆಭರಣ ಮಳಿಗೆಗೆ ಈ ಆಭರಣಗಳು ಸೇರಿದೆ ಎನ್ನಲಾಗಿದೆ. ಈ ವಾರಾಂತ್ಯದಲ್ಲಿ ಲೂಧಿಯಾನಾದಲ್ಲಿ ಬಾಲಿವುಡ್ ನಟಿಯೊಬ್ಬರು ಹೊಸ ಆಭರಣ ಮಳಿಗೆ ಉದ್ಟಾಟನೆ ಮಾಡಬೇಕಾಗಿತ್ತು. (ಪಿಟಿಐ)

English summary
A massive amount of gold and diamond jewellery weighing 170 kgs has been seized by sleuths of Punjab Taxation Department at Sahnewal airport in Ludhiana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X