ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ ವರುಣನ ಆರ್ಭಟ, 16 ಮಂದಿ ಸಾವು

|
Google Oneindia Kannada News

ಡೆಹ್ರಾಡೂನ್, ಅಕ್ಟೋಬರ್ 19: ಉತ್ತರಾಖಂಡದಲ್ಲಿ ವರುಣನ ಆರ್ಭಟ ಜೋರಾಗಿದ್ದು, 16 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೇವಭೂಮಿಯಲ್ಲಿ ಮೇಘಸ್ಫೋಟಕ್ಕೆ ಜಲ ಪ್ರಳಯವಾಗಿದೆ. ಸತತ 40 ಗಂಟೆಗಳ ಕಾಲ ಸುರಿದ ಮಹಾಮಳೆಗೆ 20ಕ್ಕೂ ಹೆಚ್ಚು ಬಲಿಯಾಗಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿಗಳು ಬಂದ್ ಆಗಿವೆ.

ಉತ್ತರಾಖಂಡದಲ್ಲಿ ಭಾರಿ ಮಳೆ, ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ ಉತ್ತರಾಖಂಡದಲ್ಲಿ ಭಾರಿ ಮಳೆ, ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ

ಮೇಘಸ್ಪೋಟಕ್ಕೆ ಉತ್ತರಾಖಂಡ ತತ್ತರಿಸಿ ಹೋಗಿದೆ. ಸತತ 40 ಗಂಟೆಗಳ ಕಾಲ ಸುರಿದ ಮಹಾಮಳೆ ರಸ್ತೆ, ಸೇತುವೆಗಳನ್ನು ಕೊಚ್ಚಿಹಾಕಿದೆ. ಭೂಕುಸಿತ ಉಂಟಾಗಿದ್ದು ಹೆದ್ದಾರಿಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ.

16 Dead As Rain Batters Uttarakhand

ರಸ್ತೆಗಳಲ್ಲಿ ನಿಲ್ಲಿಸಿರೋ ವಾಹನಗಳು ಮಳೆ ನೀರಿನಲ್ಲಿ ಮುಳುಗಿವೆ. 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಅತಂತ್ರರಾಗಿದ್ದಾರೆ. ನೈನಿತಾಲ್​​, ಚಮೋಲಿ, ತೆಹ್ರಿ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ಕೋಸಿ, ಗೌಲ, ಮಂದಾಕಿನಿ ನದಿಗಳು ಉಕ್ಕಿ ಹರಿದು ಭಾರೀ ಪ್ರವಾಹ ಸೃಷ್ಟಿಯಾಗಿದೆ. ಚಾರ್​ ಧಾಮ್​​​​ ಯಾತ್ರೆ ತಾತ್ಕಾಲಿತ ರದ್ದಾಗಿದೆ.

ಜಲಪ್ರಳಯದಿಂದಾಗಿ ಚಾರ್​ ಧಾಮ್​​​​ ಯಾತ್ರೆಯನ್ನು ತಾತ್ಕಾಲಿತ ರದ್ದು ಮಾಡಲಾಗಿದೆ. ರಾಮನಗರದ ರೆಸಾರ್ಟ್​ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಕೇದಾರನಾಥದಲ್ಲಿ 4,000 ಯಾತ್ರಾರ್ಥಿಗಳು ಮತ್ತು ಬದರಿನಾಥ್​ನಲ್ಲಿ 2500 ಯಾತ್ರಾರ್ಥಿಗಳು ಸೇರಿ ಒಟ್ಟು 6500ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆಯಿದೆ.

ಸರಣಿ ಭೂಕುಸಿತ ಪರಿಣಾಮ ಜನಪ್ರಿಯ ಪ್ರವಾಸಿತಾಣವಾಗಿರುವ ನೈನಿತಾಲ್‌ಗೆ ಸಂಪರ್ಕಿಸುವ ಮೂರು ರಸ್ತೆಗಳು ಕುಸಿದಿವೆ. ಇದರಿಂದಾಗಿ ನೈನಿತಾಲ್‌ಗೆ ಇರುವ ಎಲ್ಲಾ ಸಂಪರ್ಕಗಳು ಕಡಿತಗೊಂಡಿವೆ.

ಸೋಮವಾರ ಐದು ಮಂದಿ ಮೃತಪಟ್ಟಿದ್ದರು. ಈವರೆಗೆ ಮಳೆಯ ಕಾರಣಗಳಿಂದ ಉತ್ತರಾಖಂಡದಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೇ ಏರಿಕೆಯಾಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಶೀಘ್ರದಲ್ಲಿ ಭಾರತೀಯ ಸೇನೆಯ ಮೂರು ಹೆಲಿಕಾಪ್ಟರ್‌ಗಳು ಬರಲಿವೆ ಎಂದು ಮುಖ್ಯಮಂತ್ರಿ ಧಾಮಿ ಭರವಸೆ ನೀಡಿದ್ದಾರೆ.

ಚಾರ್ ಧಾಮ್ ಯಾತ್ರಿಕರು ಪ್ರಸ್ತುತ ಇರುವ ಸ್ಥಳದಲ್ಲೇ ಉಳಿಯುವಂತೆ ಪ್ರಕಟಿಸಲಾಗಿದೆ. ವಾತಾವರಣ ಉತ್ತಮಗೊಳ್ಳುವವರೆಗೂ ಪ್ರಯಾಣ ಮುಂದುವರೆಸದಂತೆ ತಿಳಿಸಲಾಗಿದೆ.

ಭಾರಿ ಮಳೆಯಿಂದಾಗಿ ಉಂಟಾಗಿರುವ ಜಾನಿ ಕುರಿತು ಪ್ರಧಾನಿ ಮೋದಿ ಮುಖ್ಯಮಂತ್ರಿ ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ತಿಳಿಸಿದ್ದಾರೆ.

ಹಲ್ದ್ವಾನಿ ಜಿಲ್ಲೆಯ ಗೌಲಾ ನದಿಯ ಮೇಲೆ ಇನ್ನೇನು ಮುರಿದು ಬೀಳುತ್ತಿದ್ದ ಸೇತುವೆಯನ್ನು ದಾಟಲು ಆಚೆ ಕಡೆಯಿಂದ ಬೈಕ್​ನಲ್ಲಿ ಬರುತ್ತಿದ್ದ ಪ್ರಯಾಣಿಕನಿಗೆ ಜನರು ಜೋರಾಗಿ ಕೂಗಿ ಹೇಳುತ್ತಿದ್ದರೂ ಆತನಿಗೆ ಕೇಳಿಸಿಲ್ಲ.

ಹಂದ್ವಾನಿ ಜಿಲ್ಲೆಯ ಗೌಲಾ ನದಿಯ ಸೇತುವೆ ದಾಟುತ್ತಿದ್ದ ಯುವಕರಿಬ್ಬರು ಕೊನೆ ಕ್ಷಣದಲ್ಲಿ ಬೈಕನ್ನು ಹಿಂದಕ್ಕೆ ತಿರುಗಿಸಿದರು. ಬಳಿಕ ಸೇತುವೆ ಮುರಿದು ಬಿದ್ದಿತು. ಕೆಲವೇ ಕ್ಷಣಗಳ ಅಂತರದಲ್ಲಿ ಆ ಬೈಕ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮಳೆಯಲ್ಲಿ ಕೊಚ್ಚಿ ಹೋಗುವಾಗ ಎರಡು ಬಂಡೆಗಳ ನಡುವೆ ಸಿಲುಕಿದ್ದ ಕಾರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬದರೀನಾಥ ರಾಷ್ಟ್ರೀಯ ಹೆದ್ದಾರಿಯ ಬಳಿ ಈ ಘಟನೆ ನಡೆದಿದ್ದು, ಕಾರನ್ನು ಯಾವ ರೀತಿ ಸಿನಿಮೀಯವಾಗಿ ರಕ್ಷಣೆ ಮಾಡಲಾಯಿತು.

ನೈನಿ ಕೆರೆಯ ಸಮೀಪದ ನೈನಿ ದೇವಿ ದೇವಾಲಯ ಮತ್ತು ನೈನಿತಾಲ್ ಮಾಲ್ ರೋಡ್ ಜಲಾವೃತವಾಗಿದೆ. ಭೂಕುಸಿತದಿಂದಾಗಿ ಹಾಸ್ಟೆಲ್ ಕಟ್ಟಡಕ್ಕೆ ಹಾನಿಯಾಗಿದೆ. ನಗರದಿಂದ ಹೊರ ಹೋಗುವ ಎಲ್ಲಾ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ರಾಮನಗರ್-ರಾನಿಖೇತ್ ರಸ್ತೆಯ ಲೆಮನ್ ಟ್ರೀ ರೆಸಾರ್ಟ್‌ನಲ್ಲಿ ಸುಮಾರು 100 ಜನ ಸಿಲುಕಿದ್ದಾರೆ. ಕೋಸಿ ನದಿಯು ಉಕ್ಕಿ ಹರಿಯುತ್ತಿದ್ದು, ರೆಸಾರ್ಟ್‌ನೊಳಗೆ ನೀರು ನುಗ್ಗಿದೆ.

ಎರಡು ಹೆಲಿಕಾಪ್ಟರ್‌ಗಳು ನೈನಿತಾಲ್‌ನತ್ತ ಸಾಗಲಿವೆ ಹಾಗೂ ಒಂದು ಹೆಲಿಕಾಪ್ಟರ್ ಗರ್‌ವಾಲ್‌ ವಲಯದಲ್ಲಿ ಸಿಲುಕಿರುವ ಜನರ ರಕ್ಷಣೆ ನಡೆಸಲಿದೆ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಧಾಮಿ ಹೇಳಿದ್ದಾರೆ.

English summary
Sixteen people are dead as heavy rainfall battered Uttarakhand for a third straight day today, leaving authorities fearing for the lives of people who may be trapped under debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X