• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಪಾಸ್‌ಪೋರ್ಟ್ ಹೊಂದಿರುವವರಿಗೆ 16 ದೇಶಗಳಿಗೆ ವೀಸಾ ಮುಕ್ತ ಪ್ರವೇಶ

|

ನವದೆಹಲಿ, ಸೆಪ್ಟೆಂಬರ್ 23: ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ 16 ದೇಶಗಳು ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯಸಭೆಯಲ್ಲಿ ಸಚಿವ ವಿ ಮುರಳೀಧರನ್ ಈ ಕುರಿತು ಮಾಹಿತಿ ನೀಡಿದ್ದಾರೆ. ನೇಪಾಳ, ಮಾಲ್ಡೀವ್ಸ್, ಭೂತಾನ್, ಮಾರಿಷಸ್ ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಶಾ ಇಲ್ಲದೆ ದೇಶಕ್ಕೆ ಬರಲು ಅನುಮತಿ ನೀಡಿದೆ.

ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸೆಪ್ಟೆಂಬರ್ 30ರವರೆಗೂ ರದ್ದುಪಡಿಸಲಾಗಿದೆ.ಇದೀಗ ಭಾರತದಿಂದ 13 ದೇಶಗಳ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ, ಮಾಲ್ಡೀವ್ಸ್, ಯುಎಇ, ನೈಜೀರಿಯಾ, ಯುಕೆ, ಯುಎಸ್, ಅಫ್ಘಾನಿಸ್ತಾನ, ಬಹ್ರೇನ್, ಕೆನಡಾ, ಫ್ರಾನ್ಸ್, ಜರ್ಮನಿಗೆ ವಿಮಾನ ಹಾರಾಟ ಮಾಡಲಿದೆ.

ಭಾರತದಿಂದ 13 ದೇಶಗಳಿಗೆ ಪ್ರಯಾಣಕ್ಕೆ ಅನುಮತಿ, ಮಾರ್ಗಸೂಚಿಯಲ್ಲೇನಿದೆ?

ಹಲವು ನಿರ್ಬಂಧಗಳ ಜೊತೆಗೆ ವಿಮಾನ ಹಾರಾಟ ನಡೆಸಲಿದೆ. ಒಟ್ಟಿನಲ್ಲಿ ಎರಡೂ ದೇಶಗಳು ಸಮಾನ ಪ್ರಯೋಜನಗಳನ್ನು ಪಡೆಯಲಿವೆ. ಕನಿಷ್ಠ ಒಂದು ತಿಂಗಳ ಮಾನ್ಯತೆ ಹೊಂದಿರುವ ಭಾರತೀಯ ನಾಗರಿಕರು ಈ ದೇಶಗಳಿಗೆ ಪ್ರಯಾಣಿಸಬಹುದು. ಇದಲ್ಲದೆ ಒಸಿಐ ಕಾರ್ಡುದಾರರು ಈಗ ಭಾರತಕ್ಕೆ ಬರಬಹುದಾಗಿದೆ.

16 ದೇಶಗಳು ಯಾವುವು?

16 ದೇಶಗಳು ಯಾವುವು?

-ಬಾರ್ಬಡೋಸ್

-ಭೂತಾನ್

-ಡೊಮಿನಿಕಾ

-ಗ್ರೆನೆಡಾ

-ಹೈತಿ

-ಹಾಂಗ್‌ ಕಾಂಗ್ ಎಸ್‌ಎಆರ್

-ಮಾಲ್ಡೀವ್ಸ್

-ಮಾರಿಷಸ್

-ಮಾಂಟ್ಸೆರಾಟ್

-ನೇಪಾಳ

-ನಿಯೂ ಐಲ್ಯಾಂಡ್

-ಸಮೋಆ

-ಸೆನೆಗಲ್

-ಟ್ರಿನಿಡಾಡ್ ಹಾಗೂ ಟೊಬ್ಯಾಗೊ

-ಸೇಂಟ್ ವಿನ್ಸೆಂಟ್ ಹಾಗೂ ಗ್ರೆನೆಡೀನ್ಸ್

-ಸರ್ಬಿಯಾ

ವೀಸಾ ಆನ್ ಅರೈವಲ್

ವೀಸಾ ಆನ್ ಅರೈವಲ್

43 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ ಒದಗಿಸಲಾಗುತ್ತಿದೆ. 36 ದೇಶಗಳು ಭಾರತದ ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ಸೌಲಭ್ಯವನ್ನು ಒದಗಿಸುತ್ತದೆ.

ಇ-ವೀಸಾ ಸೌಲಭ್ಯ ಕಲ್ಪಿಸುತ್ತಿರುವ ದೇಶಗಳು

ಇ-ವೀಸಾ ಸೌಲಭ್ಯ ಕಲ್ಪಿಸುತ್ತಿರುವ ದೇಶಗಳು

ವೀಸಾ ಆನ್ ಅರೈವಲ್ ಸೌಲಭ್ಯವನ್ನು ಇರಾನ್, ಇಂಡೋನೇಷ್ಯಾ ಮತ್ತು ಮಯನ್ಮಾರ್ ಒದಗಿಸುತ್ತಿವೆ. ಶ್ರೀಲಂಕಾ, ನ್ಯೂಜಿಲೆಂಡ್, ಮತ್ತು ಮಲೇಷ್ಯಾ ಇ-ವೀಸಾ ಸೌಲಭ್ಯ ಹೊಂದಿರುವ 26 ದೇಶಗಳ ಗುಂಪಿಗೆ ಸೇರಿವೆ.

ಶೀಘ್ರ ಮತ್ತಷ್ಟು ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶ

ಶೀಘ್ರ ಮತ್ತಷ್ಟು ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶ

ಸಾಕಷ್ಟು ದೇಶಗಳೊಡನೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶವಿರಲಿದೆ ಎಂದು ವಿ ಮುರಳೀಧರನ್ ತಿಳಿಸಿದ್ದಾರೆ. ಇ-ವೀಸಾ, ವೀಸಾ ಆನ್ ಅರೈವಲ್ ಸೌಲಭ್ಯ ನೀಡಿದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಲಿದೆ.

  Modi ವಿದೇಶಿ ಪ್ರವಾಸದ ಗುಟ್ಟು ರಟ್ಟು | Oneindia Kannada
  ಭಾರತದಿಂದ ಅಮೆರಿಕಕ್ಕೆ ಹಾರಾಟ

  ಭಾರತದಿಂದ ಅಮೆರಿಕಕ್ಕೆ ಹಾರಾಟ

  ಯುಎಸ್ ನಾಗರಿಕರು, ಕಾನೂನು ಬದ್ಧ ಶಾಶ್ವತ ನಿವಾಸಿಗಳು ಮತ್ತು ಮಾನ್ಯ ಯುಎಸ್‌ ವೀಸಾಗಳನ್ನು ಹೊಂದಿರುವ ವಿದೇಶಿ ಪ್ರಜೆಗಳು

  -ಯಾವುದೇ ರೀತಿಯ ಮಾನ್ಯ ಯುಎಸ್ ವೀಸಾ ಹೊಂದಿರುವ ಯಾವುದೇ ಭಾರತೀಯ ಪ್ರಜೆ ಟಿಕೆಟ್, ಬೋರ್ಡಿಂಗ್ ಪಾಸ್ ನೀಡುವ ಮೊದಲು ನಿರ್ದಿಷ್ಟ ವೀಸಾ ವಿಭಾಗದಲ್ಲಿ ಅಮೆರಿಕಕ್ಕೆ ಪ್ರಯಾಣಿಸಬಹುದಾಗಿದೆ.

  ಅಮೆರಿಕದಿಂದ ಭಾರತ

  -ಅಮೆರಿಕದಲ್ಲಿ ಸಿಲುಕಿರುವ ಭಾರತೀಯರು

  -ಒಸಿಐ ಕಾರ್ಡ್‌ದಾರರು

  -ಜೂನ್‌ 30 ರಂದು ಮಾಡಿರುವ ತಿದ್ದುಪಡಿಯಂತೆ ಮಾರ್ಗಸೂಚಿಗಳ ಪ್ರಕಾರ ಭಾರತಕ್ಕೆ ಪ್ರವೇಶಿಸಲು ಅರ್ಹರಾಗಿರುವ ವಿದೇಶಿಯರು.

  English summary
  The Rajya Sabha was informed on Tuesday that a total of 16 countries including Nepal, the Maldives, Bhutan and Mauritius provide visa-free entry to Indian passport holders.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X