• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹದಿನೈದು ತೃತೀಯ ಲಿಂಗಿ ಜೋಡಿಗಳ ಸಾಮೂಹಿಕ ವಿವಾಹ

|

ರಾಯ್ ಪುರ್ (ಛತ್ತೀಸ್ ಗಢ), ಮಾರ್ಚ್ 31: ತೃತೀಯ ಲಿಂಗಿಗಳಿಗಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಹದಿನೈದು ಜೋಡಿಗಳು ಮದುವೆ ಆಗಿದ್ದಾರೆ. ಹಿಂದೂ ಸಾಂಪ್ರದಾಯಿಕ ಪದ್ಧತಿ ಪ್ರಕಾರವೇ ಮದುವೆ ನಡೆಯಿತು. ಅದಕ್ಕೂ ಮುನ್ನ ಹಿಂದಿನ ದಿನವಾದ ಶುಕ್ರವಾರ ಹಳದಿ, ಮೆಹೆಂದಿ, ನಿಶ್ಚಿತಾರ್ಥ, ಸಂಗೀತ ಕಾರ್ಯಕ್ರಮ ಇತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದು ಬಹಳ ಹಿಂದೆಯೇ ಆಗಬೇಕಿತ್ತು. ನಾವು ತೃತೀಯಲಿಂಗಿಗಳು. ನಮ್ಮ ನೋವು- ನಲಿವು ಹಂಚಿಕೊಳ್ಳಲು ಯಾರೂ ಇಲ್ಲ. ನಮ್ಮ ದುಃಖವನ್ನು ಯಾರೂ ಅರ್ಥ ಮಾಡಿಕೊಳ್ಳಲ್ಲ. ಈ ದಿನ ಸರಕಾರ ಅಂಥ ಒಂದೊಳ್ಳೆ ಯೋಜನೆ ನೀಡಿದೆ. ನಾವು ಮದುವೆ ಆಗಲು ಅವಕಾಶ ನೀಡಿದೆ. ಅವರಿಗೆ ಧನ್ಯವಾದಗಳು ಎಂದು ಈ ವಿವಾಹದಲ್ಲಿ ಭಾಗವಹಿಸಿದ್ದ ತೃತೀಯ ಲಿಂಗಿ ಹಾಗೂ ಛತ್ತೀಸ್ ಗಢದ ರಾಯ್ ಗಢ ಮೇಯರ್ ಮಧು ಕಿನ್ನರ್ ಹೇಳಿದ್ದಾರೆ.

ಮಧುರೈ ಕೇಂದ್ರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ತೃತೀಯ ಲಿಂಗಿ ಅಭ್ಯರ್ಥಿಮಧುರೈ ಕೇಂದ್ರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ತೃತೀಯ ಲಿಂಗಿ ಅಭ್ಯರ್ಥಿ

ಸುಪ್ರೀಂ ಕೋರ್ಟ್ ಐದು ವರ್ಷದ ಹಿಂದೆ ನೀಡಿದ ತೀರ್ಪಿನ ಪ್ರಕಾರ, ತೃತೀಯ ಲಿಂಗಿಗಳನ್ನು ಗುರುತಿಸಿ, ಅವರಿಗೂ ಎಲ್ಲ ಸಾಂವಿಧಾನಿಕ ಹಕ್ಕು ಮತ್ತು ಸ್ವಾತಂತ್ರ್ಯ ಇದೆ ಎಂದು ಘೋಷಿಸಲಾಗಿದೆ.

ಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳುಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳು

ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರಾಯ್ ಪುರ್ ಮೂಲದ ತೃತೀಯ ಲಿಂಗಿ, ಸಾಮಾಜಿಕ ಕಾರ್ಯಕರ್ತರೂ ಆದ ವಿದ್ಯಾ ರಜಪೂತ್ ರೂಪಿಸಿದ್ದರು. ಛತ್ತೀಸ್ ಗಢ ಸೇರಿದಂತೆ ವಿವಿಧ ರಾಜ್ಯದ ಜೋಡಿಗಳು ಭಾಗವಹಿಸಿದ್ದರು.

English summary
15 couples got married in a mass wedding ceremony organized for the transgender community in Chhattisgarh on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X