ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿ ಹೈಅಲರ್ಟ್: ಸಮುದ್ರದ ಮೂಲಕ ಭಾರತದತ್ತ 15 ಐಎಸ್ ಉಗ್ರರು

|
Google Oneindia Kannada News

ನವದೆಹಲಿ, ಮೇ 26: ಕೇರಳದ ಕರಾವಳಿ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರುವಂತೆ ಸೂಚಿಸಲಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಹದಿನೈದು ಇಸ್ಲಾಮಿಕ್ ಸ್ಟೇಟ್ ಉಗ್ರರು ಲಕ್ಷದ್ವೀಪದ ಮೂಲಕ, ದೇಶಕ್ಕೆ ನುಸುಳಲು ಶ್ರೀಲಂಕಾದಿಂದ ಹೊರಟಿದ್ದಾರೆ.

ಕೇರಳ ಪೊಲೀಸ್, ಕರಾವಳಿ ಭದ್ರತಾ ಪಡೆಗಳಿಗೆ ಮತ್ತು ಮೀನುಗಾರಿಕಾ ಬೋಟ್ ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಶ್ರೀಲಂಕಾದ ಅಧಿಕಾರಿಗಳು ಮೇ 23ರಂದು ನೀಡಿದ ಮಾಹಿತಿಯ ಪ್ರಕಾರ, ಈ ಕಟ್ಟೆಚ್ಚರವನ್ನು ನೀಡಲಾಗಿದೆ.

2016ರಲ್ಲಿ ನಡೆದಿದ್ದೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ2016ರಲ್ಲಿ ನಡೆದಿದ್ದೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಶ್ರೀಲಂಕಾ ಅಧಿಕಾರಿಗಳು ನೀಡಿದ ಎಚ್ಚರಿಕೆಯ ಪ್ರಕಾರ, ಹದಿನೈದು ಇಸ್ಲಾಮಿಕ್ ಸ್ಟೇಟ್ ಉಗ್ರರು ಬೋಟಿನ ಮೂಲಕ, ಲಕ್ಷದ್ವೀಪದತ್ತ ತೆರಳಿದ್ದಾರೆ.

15 IS terrorists set-off to Lakshwadeep, Kerala coastal high alert

ನಮ್ಮ ದೇಶದಲ್ಲಿ ನಡೆದ ಉಗ್ರರ ದಾಳಿಯ ನಂತರ, ನಾವು ಕಟ್ಟೆಚ್ಚರ ವಹಿಸಿದ್ದು, ಯಾವುದೇ ಶಂಕಯಾಸ್ಪದ ಚಟುವಟಿಕೆಯ ವಿರುದ್ದ ತೀವ್ರ ನಿಗಾವಹಿಸಿದ್ದೇವೆ ಎಂದು ಶ್ರೀಲಂಕಾದ ಅಧಿಕಾರಿಗಳು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯ ನಂತರ ಕೇರಳದಲ್ಲಿ ಹೈಅಲರ್ಟ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಭದ್ರತಾ ಏಜೆನ್ಸಿ ನಡೆಸಿದ ತನಿಖೆಯ ಪ್ರಕಾರ, ಕೇರಳದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ.

ಏಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

English summary
15 IS terrorists set-off to Lakshwadeep, Kerala coastal high alert. According to sources, the coastal police stations and coastal district police chiefs have been alerted after reports that a boat with Islamic State has set off from Sri Lanka to Lakshadweep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X