ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಬರೆಯಲಿದ್ದಾರೆ 15.97 ಲಕ್ಷ ವಿದ್ಯಾರ್ಥಿಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಭಾನುವಾರ ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಯಲಿದೆ. ದೇಶಾದ್ಯಂತೆ 15 ಲಕ್ಷ ವಿದ್ಯಾರ್ಥಿಗಳು ಕೋವಿಡ್ ಭೀತಿಯ ನಡುವೆಯೇ ಪರೀಕ್ಷೆ ಬರೆಯುತ್ತಿದ್ದಾರೆ.

ಹಲವಾರು ಸುತ್ತಿನ ಚರ್ಚೆಗಳ ಬಳಿಕ ಅಂತಿಮವಾಗಿ ಭಾನುವಾರ ನೀಟ್ ಪರೀಕ್ಷೆ ನಡೆಯಲಿದೆ. ಕೋವಿಡ್ ಪರಿಸ್ಥಿತಿಯಲ್ಲಿ ನೀಟ್ ಪರೀಕ್ಷೆ ನಡೆಸುವುದು ಬೇಡ ಎಂಬ ಚರ್ಚೆ ಜೋರಾಗಿತ್ತು. 15.97 ಲಕ್ಷ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ.

ನೀಟ್ ಪರೀಕ್ಷೆ ಬರೆಯಲು ಕೊವಿಡ್-19 ಸೋಂಕಿತರಿಗೆ ಅನುಮತಿಯಿಲ್ಲ ನೀಟ್ ಪರೀಕ್ಷೆ ಬರೆಯಲು ಕೊವಿಡ್-19 ಸೋಂಕಿತರಿಗೆ ಅನುಮತಿಯಿಲ್ಲ

ಕೋವಿಡ್ ಪರಿಸ್ಥಿತಿಯಲ್ಲಿ ಪರೀಕ್ಷಗಳನ್ನು ನಡೆಸಲಾಗುತ್ತಿದೆ. ಎನ್‌ಟಿಎ ಸಾಮಾಜಿಕ ಅಂತರವನ್ನು ಕಾಪಾಡಲು ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 2,546ರಿಂದ 3,843ಕ್ಕೆ ಏರಿಕೆ ಮಾಡಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಬಹುದಾಗಿದೆ.

ಕೋಲ್ಕತ್ತಾದಲ್ಲಿ ನೀಟ್ ಪರೀಕ್ಷಾರ್ಥಿಗಳಿಗಾಗಿ 66 ವಿಶೇಷ ಮೆಟ್ರೋ ರೈಲು ಕೋಲ್ಕತ್ತಾದಲ್ಲಿ ನೀಟ್ ಪರೀಕ್ಷಾರ್ಥಿಗಳಿಗಾಗಿ 66 ವಿಶೇಷ ಮೆಟ್ರೋ ರೈಲು

15.97 Lakh Students Registered For NEET Exam 2020

ನೀಟ್ ಪರೀಕ್ಷೆ 2020 ಮಧ್ಯಾಹ್ನ 2ಗಂಟೆಗೆ ಆರಂಭವಾದಲಿದೆ. ಒಟ್ಟು 3 ಗಂಟೆಗಳ ಕಾಲ ಪರೀಕ್ಷೆ ಬರೆಯಲು ಅವಕಾಶವಿದೆ. ಪರೀಕ್ಷೆ ಬರೆಯುವವರು ಸಾಧಾರಣ ಚಪ್ಪಲಿಗಳನ್ನು ಧರಿಸಬೇಕು. ಶೂ ಧರಿಸುವಂತಿಲ್ಲ, ಅರ್ಧ ಕೈಯ ಅಂಗಿಯನ್ನು ಧರಿಸುವಂತೆ ಸೂಚಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಭರಣಗಳನ್ನು ಧರಿಸುವಂತಿಲ್ಲ.

ನೀಟ್ ಪರೀಕ್ಷೆಗೆ ಹಾಜರಾಗುವ ಮುನ್ನ ಈ ನಿಯಮಗಳನ್ನು ಓದಿ ನೀಟ್ ಪರೀಕ್ಷೆಗೆ ಹಾಜರಾಗುವ ಮುನ್ನ ಈ ನಿಯಮಗಳನ್ನು ಓದಿ

English summary
A total of 15.97 lakh students have registered for the National Eligibility-cum-Entrance Test (NEET) exam 2020. NEET 2020 will begin at 2 pm and the duration for the examination will be 3 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X