ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು?

|
Google Oneindia Kannada News

ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಕ್ಸಿಜನ್ (ಎಲ್ಎಂಒ) ಸರಬರಾಜಿನಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿ ಪರಿಹಾರವನ್ನು ಒದಗಿಸುತ್ತಿದೆ. ಈವರೆಗೆ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ 884ಕ್ಕೂ ಅಧಿಕ ಟ್ಯಾಂಕರ್ ಗಳ ಮೂಲಕ 14,500 ಎಂಟಿ ಎಲ್ಎಂಒ ಅನ್ನು ಒದಗಿಸಿದೆ.

ಈವರೆಗೆ 224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿ ಹಲವು ರಾಜ್ಯಗಳಿಗೆ ಪರಿಹಾರ ಒದಗಿಸಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಮೇ .23ರ ಮುಂಜಾನೆ ವೇಳೆಗೆ 35 ಟ್ಯಾಂಕರ್ ಗಳನ್ನು ಹೊತ್ತ 8 ಭರ್ತಿಯಾದ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು 563 ಎಂಟಿಗೂ ಅಧಿಕ ಎಲ್ಎಂಒ ಅನ್ನು ಹೊತ್ತು ಸಾಗುತ್ತಿವೆ.

ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು ಇದೀಗ ಪ್ರತಿ ದಿನ ರಾಷ್ಟ್ರಕ್ಕೆ 800 ಎಂಟಿಗೂ ಅಧಿಕ ಎಲ್ಎಂಒ ಅನ್ನು ಪೂರೈಕೆ ಮಾಡುತ್ತಿವೆ. ರಾಜ್ಯಗಳ ಮನವಿ ಮೇರೆಗೆ ಅತ್ಯಲ್ಪ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಲ್ಎಂಒ ಅನ್ನು ಒದಗಿಸಲು ಭಾರತೀಯ ರೈಲ್ವೆ ಅಹರ್ನಿಷಿ ಕಾರ್ಯನಿರ್ವಹಿಸುತ್ತಿದೆ.

14500 MT of Liquid Medical Oxygen by 224 Oxygen Expresses to the Nation

ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿ 13 ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು ಆಮ್ಲಜನಕದ ಪರಿಹಾರವನ್ನು ತಲುಪಿಸುತ್ತಿವೆ.

ಈ ಪ್ರಕಟಣೆ ಹೊರಬೀಳುವ ವೇಳೆಗೆ, ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆ ಸುಮಾರು 3463 ಎಂಟಿ, ಮಧ್ಯಪ್ರದೇಶಕ್ಕೆ 566, ದೆಹಲಿಗೆ 4278, ಹರಿಯಾಣಕ್ಕೆ 1698, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 943, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 769, ಆಂಧ್ರಪ್ರದೇಶಕ್ಕೆ 571, ಪಂಜಾಬ್ ಗೆ 153, ಕೇರಳಕ್ಕೆ 246 ಮತ್ತು ತೆಲಂಗಾಣಕ್ಕೆ 772 ಎಂಟಿ ಆಕ್ಸಿಜನ್ ಒದಗಿಸಲಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು 28 ದಿನಗಳ ಹಿಂದೆ ಮೊದಲು ಏಪ್ರಿಲ್ 24ರಂದು ಮಹಾರಾಷ್ಟ್ರಕ್ಕೆ 126 ಎಂಟಿ ಆಮ್ಲಜನಕ ಪೂರೈಸುವ ಮೂಲಕ ಕಾರ್ಯಾರಂಭ ಮಾಡಿದ್ದು ಇಲ್ಲಿ ಉಲ್ಲೇಖ ಮಾಡಬಹುದು.

14500 MT of Liquid Medical Oxygen by 224 Oxygen Expresses to the Nation

ದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ಭಾರತೀಯ ರೈಲ್ವೆ ಆಮ್ಲಜನಕವನ್ನು ಪಶ್ಚಿಮದ ಹಪಾ, ಬರೋಡಾ, ಮುಂದ್ರಾ ಹಾಗೂ ಪೂರ್ವದ ರೂರ್ಕೆಲಾ, ದುರ್ಗಾಪುರ್, ಟಾಟಾನಗರ್, ಅಂಗುಲ್ ನಿಂದ ಭರ್ತಿ ಮಾಡಿಕೊಂಡು ಆನಂತರ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸಂಕೀರ್ಣ ಕಾರ್ಯಾಚರಣೆ ಮಾರ್ಗಗಳ ಸಾಗಣೆ ಮಾಡುತ್ತಿದೆ.

ಈ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗ ಹೆಚ್ಚಿನ ಸಂದರ್ಭಗಳಲ್ಲಿ 55 ಕ್ಕಿಂತ ಅಧಿಕವಾಗಿರುತ್ತದೆ. ಗರಿಷ್ಠ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಸಂಚರಿಸುವ ಈ ರೈಲುಗಳು ಅತ್ಯಂತ ತುರ್ತು ಮತ್ತು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ನಾನಾ ವಲಯಗಳ ಕಾರ್ಯಾಚರಣೆ ತಂಡಗಳು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ತಲುಪುವುದನ್ನು ಖಾತ್ರಿಪಡಿಸಲು ಹಗಲಿರುಳು ಶ್ರಮಿಸುತ್ತಿವೆ. ನಾನಾ ಮಾರ್ಗಗಳಲ್ಲಿ ಸಿಬ್ಬಂದಿಯ ಬದಲಾವಣೆಗಾಗಿ ತಾಂತ್ರಿಕ ನಿಲುಗಡೆಯಾಗುವ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಲಾಗಿದೆ. ಇನ್ನೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ರಾತ್ರಿಯ ನಂತರ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.

(ರೈಲ್ವೆ ಸಚಿವಾಲಯ ಪ್ರಕಟಣೆ)

English summary
Indian Railways has delivered nearly 14500 MT of LMO in more than 884 tankers to various states across the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X