ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ

By Kiran B Hegde
|
Google Oneindia Kannada News

ಛತ್ತರ್‌ಪುರ, ಡಿ. 18: ಕರ್ನಾಟಕದಲ್ಲಿ ತೆರೆದ ಕೊಳವೆ ಬಾವಿಗೆ ಸಾಕಷ್ಟು ಮಕ್ಕಳು ಬಲಿಯಾದ ಮೇಲೆ ಜಾಗೃತಿ ಕೈಗೊಳ್ಳಲಾಯಿತು. ಲಕ್ಷಾಂತರ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲು ಸರ್ಕಾರವೇ ಆದೇಶ ಹೊರಡಿಸಬೇಕಾಯಿತು.

ಆದರೆ, ಈ ಘಟನೆಯಿಂದ ದೇಶದ ಇತರ ರಾಜ್ಯಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಧ್ಯಪ್ರದೇಶ ರಾಜ್ಯದ ಲಿಧೋರಾ ಗ್ರಾಮದಲ್ಲಿ 14 ತಿಂಗಳು ವಯಸ್ಸಿನ ಕೃಷ್ಣ ಲೋಧಿ ಎಂಬ ಬಾಲಕ ಬುಧವಾರ ಸಂಜೆ ವಿಫಲಗೊಂಡ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ಪ್ರಸ್ತುತ 18ನೇ ಅಡಿ ಆಳದಲ್ಲಿ ಬಾಲಕ ಇದ್ದಾನೆ. ಬಾವಿ 100 ಅಡಿ ಉದ್ದವಾಗಿರುವ ಕಾರಣ ಬಾಲಕ ಇನ್ನಷ್ಟು ಆಳಕ್ಕೆ ಜಾರುವ ಆತಂಕ ಎದುರಾಗಿದೆ. [ಕೊಳವೆ ಬಾವಿ ದುರಂತ : ದುನಿಯಾ ವಿಜಯ್ ಹೇಳಿದ್ದು]

borewell

ಜಿಲ್ಲಾಡಳಿತ ಈಗಾಗಲೇ ಬಾಲಕನ ರಕ್ಷಣಾ ಕಾರ್ಯ ಆರಂಭಿಸಿದೆ. ಕೊಳವೆ ಬಾವಿಯ ಪಕ್ಕದಲ್ಲಿ ಮತ್ತೊಂದು ಬಾವಿಯನ್ನು ಜೆಸಿಬಿ ಮೂಲಕ ತೆರೆಯಲಾಗುತ್ತಿದೆ. ಕೊಳವೆ ಬಾವಿಯೊಳಗೆ ನಿರಂತರವಾಗಿ ಆಮ್ಲಜನಕ ಪೂರೈಸಲಾಗುತ್ತಿದೆ. [ದುರಂತ ತಡೆಯಲು ಮಾರ್ಗಸೂಚಿ]

ಈ ಕೊಳವೆ ಬಾವಿಯನ್ನು ಎರಡು ತಿಂಗಳ ಹಿಂದಷ್ಟೇ ತೆರೆಯಲಾಗಿತ್ತು. ಆದರೆ, ನೀರು ಬರದ ಹಿನ್ನೆಲೆಯಲ್ಲಿ ಜಮೀನು ಮಾಲೀಕ ಈ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A 14-month-old boy fell into a open bore well at Lidhora village in Madhya Pradesh and was trapped at a depth of 18-feet inside it. A rescue operation has been launched by the district officials to save the child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X