ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ದರ್ಬಾನ್ ತಲುಪಿದ್ದ ಹಡಗಿನ 14 ಸಿಬ್ಬಂದಿಗೆ ಕೊರೊನಾ ಸೋಂಕು

|
Google Oneindia Kannada News

ನವದೆಹಲಿ, ಮೇ 5: ಭಾರತದಿಂದ ದಕ್ಷಿಣ ಆಫ್ರಿಕಾದ ದರ್ಬಾನ್‌ ತಲುಪಿದ್ದ ಕಾರ್ಗೊ ಹಡಗಿನ ಹದಿನಾಲ್ಕು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಬಂದರು ಪ್ರಾಧಿಕಾರ ಮಾಹಿತಿ ನೀಡಿದೆ.

ಭಾನುವಾರ ದರ್ಬಾನ್‌ಗೆ ಹಡಗು ತಲುಪಿದ ನಂತರ ಸಿಬ್ಬಂದಿಯನ್ನು ಪರೀಕ್ಷೆ ನಡೆಸಲಾಗಿದ್ದು, ಹದಿನಾಲ್ಕು ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅವರೆಲ್ಲರನ್ನೂ ಐಸೊಲೇಷನ್‌ನಲ್ಲಿರಿಸಲಾಗಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಕೊರೊನಾಗೆ ಚುಚ್ಚಿದ ಮದ್ದು; ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಲೆಕ್ಕ!?ಕೊರೊನಾಗೆ ಚುಚ್ಚಿದ ಮದ್ದು; ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಲೆಕ್ಕ!?

ಹಡಗನ್ನೇ ಐಸೊಲೇಷನ್ ಕೇಂದ್ರವಾಗಿ ಮಾಡಿಕೊಳ್ಳಲಾಗಿದೆ. ಇಲ್ಲಿಂದ ಯಾರೂ ಹೋಗಲು ಹಾಗೂ ಬರಲು ಅವಕಾಶವಿಲ್ಲ. ಈ ಹಡಗಿನಲ್ಲಿ ಸುಮಾರು 200 ಸಿಬ್ಬಂದಿಯಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

14 Crew Members Of Cargo Ship From India Test Corona Positive At South Africa

ಈ ಹಡಗು ಭಾರತದಿಂದ ನೇರವಾಗಿ ಬಂದಿದೆ. ಹಡಗಿನ ಎಲ್ಲಾ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ರೂಪಾಂತರ ಸೋಂಕು ದಕ್ಷಿಣ ಆಫ್ರಿಕಾಗೂ ಕಾಲಿಟ್ಟಿತೇ ಎಂಬ ಆತಂಕ ಆರಂಭವಾಗಿದೆ.

English summary
14 crew members of a cargo ship that sailed to Durban from India have tested positive for COVID-19, South Africa's Transnet National Port Authority informed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X