ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್ ಟಿವಿ ಜತೆ ಕಿತ್ತಾಟ, ಮುಸ್ಲಿಂ ವಿವಿ ವಿದ್ಯಾರ್ಥಿಗಳ ವಿರುದ್ಧ ಕೇಸ್

|
Google Oneindia Kannada News

ನವದೆಹಲಿ, ಫೆಬ್ರವರಿ 13: ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಚಾನೆಲ್ ತಂಡ ಹಾಗೂ ಆಲಿಘರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ, ಹೊಡೆದಾಟ, ಬಡಿದಾಟ ವಿಕೋಪಕ್ಕೆ ತಿರುಗಿದೆ. ಹಲವು ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ. ಈ ಘಟನೆ ಬಳಿಕ ಆಲಿಘರ್ ಮುಸ್ಲಿಮ್ ವಿವಿಯ 14 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖ್ಯಸ್ಥ ಮುಕೇಶ್ ಲೋಧಿ ಅವರು ನೀಡಿದ ದೂರನ್ನು ಸ್ವೀಕರಿಸಿರುವ ಸ್ಥಳೀಯ ಪೊಲೀಸರು, ವಿದ್ಯಾರ್ಥಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಆಲಿಘರ್ ಮುಸ್ಲಿಮ್ ವಿವಿಯನ್ನು 'ಭಯೋತ್ಪಾಕರ ಯುನಿವರ್ಸಿಟಿ' ಎಂದು ಕರೆಯುತ್ತಾ ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯ ತಂಡ ಕ್ಯಾಂಪಸ್ ನಲ್ಲಿ ಚಿತ್ರೀಕರಣ ನಡೆಸುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಟ್ವೀಟ್ ಮಾಡಿದ್ದು, ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.

14 Aligarh Muslim University students booked for sedition fracas with Republic TV crew

ಸುನಂದಾ ಪುಷ್ಕರ್ ಕೇಸ್ : ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲು?ಸುನಂದಾ ಪುಷ್ಕರ್ ಕೇಸ್ : ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲು?

ಕೆಟ್ಟ ಉದ್ದೇಶ, ಪೂರ್ವಗ್ರಹ ಪೀಡಿತರಾಗಿರುವ ರಿಪಬ್ಲಿಕ್ ಟಿವಿ ತಂಡಕ್ಕೆ ಆರೆಸ್ಸೆಸ್ ಹಾಗೂ ಬಿಜೆಪಿಯ ಸಾಥ್ ಸಿಕ್ಕಿದೆ. ಕ್ಯಾಂಪಸ್ ನೊಳಕ್ಕೆ ಚಿತ್ರೀಕರಣಕ್ಕೆ ತಂಡ ಬಂದಿದೆ ಎಂದು ವಿವಿಯ ವಿದ್ಯಾರ್ಥಿ ಯೂನಿಯನ್ ಆರೋಪಿಸಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾದ ಎಫ್ ಐಆರ್ 'ಸುಳ್ಳು ಮತ್ತು ದುರುದ್ದೇಶಪೂರಿತ" ಎಂದು ವಿದ್ಯಾರ್ಥಿ ಸಂಘಟನೆ ಖಂಡಿಸಿವೆ.

ಎಎಂಯುಗೆ ದೇಶವಿರೋಧಿ ಚಟುವಟಿಕೆಯ ಹಣೆಪಟ್ಟಿ ಕಟ್ಟಲು ಯತ್ನಿಸಲಾಗುತ್ತಿದೆ. ನಾವು ಈಗ ಉಗ್ರಗ್ರಾಮಿಗಳ ವಿವಿಯ ಮುಂದೆ ನಿಂತಿದ್ದೇವೆ ಎಂದು ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದಾಗ, ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ನಮ್ಮ ಕ್ಯಾಂಪಿಸಿಗೆ ಬಂದು ಈ ರೀತಿ ಹೇಳಲು ಯಾರು ಅನುಮತಿ ನೀಡಿದರು ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಿಪಬ್ಲಿಕ್ ಟಿವಿ ಪತ್ರಕರ್ತರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುನಿಯನ್ ಅಧ್ಯಕ್ಷ ಸಲ್ಮಾನ್ ಇಮ್ತಿಯಾಝ್ ಆರೋಪಿಸಿದ್ದಾರೆ.

English summary
Fourteen students of Aligarh Muslim University in Uttar Pradesh were booked for sedition on Tuesday evening after clashes that followed a confrontation with journalists from news channel Republic TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X