ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗ ಸಮಾನತೆ ಶ್ರೇಯಾಂಕ; ಭಾರತಕ್ಕೆ 135ನೇ ಸ್ಥಾನ

|
Google Oneindia Kannada News

ನವದೆಹಲಿ, ಜುಲೈ 15; ವಿಶ್ವ ಆರ್ಥಿಕ ವೇದಿಕೆಯು ಇಂದು ಲಿಂಗ ಸಮಾನತೆ ಕುರಿತು ಜಿನೀವಾದಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ದೇಶವು ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣೆಯಲ್ಲಿ ಅಭಿವೃದ್ಧಿಯನ್ನ ಕಾಣುತ್ತಿದೆ.

ಇದರ ಹೊರತಾಗಿಯೂ ಲಿಂಗ ಸಮಾನತೆಯ ಶ್ರೇಯಾಂಕದಲ್ಲಿ 135ನೇ ಸ್ಥಾನಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 146 ರಾಷ್ಟ್ರಗಳಿವೆ. ಐಸ್‌ಲ್ಯಾಂಡ್ ವಿಶ್ವದ ಮೊದಲ ಸ್ಥಾನದಲ್ಲಿದ್ದರೆ, ನಂತರದ ಫಿನ್‌ಲ್ಯಾಂಡ್, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್ ದೇಶಗಳು ಕೊನೆಯ 5 ಸ್ಥಾನಗಳಲ್ಲಿ ಇವೆ.

ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

11 ದೇಶಗಳು ಲಿಂಗ ಸಮಾನತೆಯಲ್ಲಿ ಭಾರತಕ್ಕಿಂತ ಕೆಳಗಿವೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಕಾಂಗೋ, ಇರಾನ್ ಮತ್ತು ಚಾಡ್ ರಾಷ್ಟ್ರಗಳು ಕೆಳ ಹಂತದ ಸ್ಥಾನದಲ್ಲಿವೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವುದರಿಂದ ಶ್ರೇಯಾಂಕ ಏರಿಕೆಯಾಗಲು ಕಾರಣವಾಗಿದೆ.

135th Rank For India In Gender Equality

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಭಾರತದಲ್ಲಿ 16 ವರ್ಷಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಶ್ರೇಯಾಂಕ ಏರಿಕೆಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಸುಮಾರು 662 ಮಿಲಿಯನ್ ಮಹಿಳೆಯರಿದ್ದಾರೆ. 2021ರವರೆಗೆ ಭಾರತವು ಆರ್ಥಿಕತೆಯಲ್ಲಿ ಚೇತರಿಸಿಕೊಳ್ಳುತ್ತಾ ಬಂದಿದೆ. ಜಾಗತಿಕವಾಗಿ ಭಾಗವಹಿಸುವಿಕೆ ಮತ್ತು ಅವಕಾಶಗಳ ಮೇಲೆ ಕಾರ್ಯಕ್ಷಮತೆಯಲ್ಲಿ ಮಹತ್ವದ ಬದಲಾವಣೆಯನ್ನು ಕಂಡುಕೊಂಡಿದೆ.

ಯಾವುದೇ ಅಸಮಾನತೆ ಇಲ್ಲದಂತೆ ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ವ್ಯವಸ್ಥಾಪಕರ ಕ್ಷೇತ್ರದಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಶೇಕಡಾ 14.6 ರಿಂದ ಶೇಕಡಾ 17.6ಕ್ಕೆ ಏರಿದೆ. ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಉದ್ಯೋಗಿಗಳಾಗಿ ಮಹಿಳೆಯರ ಪಾಲು ಶೇಕಡಾ 29.2 ರಿಂದ ಶೇಕಡಾ 32.9ಕ್ಕೆ ಏರಿಕೆಯಾಗಿದೆ. ರಾಜಕೀಯ ಸಬಲೀಕರಣದ ಕ್ಷೇತ್ರದಲ್ಲಿ ಭಾರತವು ಶ್ರೇಯಾಂಕದಲ್ಲಿ 48ನೇ ಸ್ಥಾನದಲ್ಲಿದೆ. ಕತಾರ್, ಪಾಕಿಸ್ತಾನ, ಅಜೆರ್ಬೈಜಾನ್ ಮತ್ತು ಚೀನಾದಲ್ಲೂ ಲಿಂಗ ಅಸಮಾನತೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಭಾರತ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ದಾಖಲಾತಿ ಪ್ರಮಾನ ಏರಿಕೆಯಾಗುತ್ತಿದೆ. ಆದ್ದರಿಂದ ಭಾರತವು ಜಾಗತಿಕವಾಗಿ ಅಭಿವೃದ್ಧಿಯಾಗುತ್ತಿದೆ. ದಕ್ಷಿಣ ಏಷ್ಯಾದಲ್ಲಿ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಭೂತಾನ್ ನಂತರ ಭಾರತವು 6ನೇ ಶ್ರೇಯಾಂಕವನ್ನ ಕಾಪಾಡಿಕೊಂಡು ಬಂದಿದೆ.

135th Rank For India In Gender Equality

ಇನ್ನು ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭಾರತಕ್ಕಿಂತ ಕೆಳಮಟ್ಟದಲ್ಲಿವೆ. 2021ರಿಂದ ಹಲವು ದೇಶಗಳು ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಹಂತದಲ್ಲಿವೆ. ಇಂತಹ ಪ್ರದೇಶದಲ್ಲಿ ಲಿಂಗ ಅಸಮಾನತೆ ನಿರ್ಮೂಲನೆಯಾಗಲು 197 ವರ್ಷಗಳು ಬೇಕಾಗುತ್ತದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿಯಲ್ಲಿ ಉಲ್ಲೇಖವಾಗಿದೆ.

ಭಾರತ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಕೆಲ ದೇಶಗಳಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಹೆಚ್ಚಾಗುತ್ತಿದೆ. ಹೀಗೆ ಮಹಿಳೆಯರರನ್ನು ಆರ್ಥಿಕ ಕ್ಷೇತ್ರಕ್ಕೆ ಮರಳಲು ಬೆಂಬಲಿಸಿದರೆ ಆರ್ಥಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿ ಅಭಿವೃದ್ಧಿಯನ್ನು ಕಾಣಬಹುದು. ಆರೋಗ್ಯ ಕ್ಷೇತ್ರದಲ್ಲಿಯೂ ಹೆಚ್ಚಾಗಿ ಅಭಿವೃದ್ಧಿಗಳು ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕತೆಗೆ ತುಂಬಾ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದೆ.

English summary
The world economic forum released a report on gender equality in Geneva, India is seeing progress in improving economic sectors. Despite this, it has risen to 135th position in the gender equality ranking. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X