ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13 ತೃತೀಯ ಲಿಂಗಿಗಳನ್ನು ನಿಯೋಜಿಸಿಕೊಂಡ ಛತ್ತೀಸ್‌ಗಡ ಪೊಲೀಸ್ ಇಲಾಖೆ

|
Google Oneindia Kannada News

ರಾಯ್‌ಪುರ, ಮಾರ್ಚ್ 03: ಹದಿಮೂರು ತೃತೀಯ ಲಿಂಗಿಗಳನ್ನು ಕಾನ್‌ಸ್ಟೆಬಲ್‌ಗಳಾಗಿ ನಿಯೋಜಿಸಿಕೊಳ್ಳುವ ಮೂಲಕ ಛತ್ತೀಸ್‌ಗಡ ಪೊಲೀಸ್‌ ಇಲಾಖೆ ಸಮಾಜಕ್ಕೆ ಮಾದರಿಯಾಗಿದೆ.

ಸೋಮವಾರವಷ್ಟೇ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಛತ್ತೀಸ್‌ಗಡದ ನಾಲ್ಕು ಜಿಲ್ಲೆಗಳಿಗೆ 13 ತೃತೀಯ ಲಿಂಗಿಗಳನ್ನು ಕಾನ್‌ಸ್ಟೆಬಲ್‌ಗಳಾಗಿ ನಿಯೋಜಿಸಲಾಗಿದೆ.

ಕೇರಳದ ಸರ್ಕಾರಿ ಅರ್ಜಿಗಳಲ್ಲಿ ತೃತೀಯ ಲಿಂಗದವರಿಗೆ ಪ್ರತ್ಯೇಕ ಆಯ್ಕೆ ಕೇರಳದ ಸರ್ಕಾರಿ ಅರ್ಜಿಗಳಲ್ಲಿ ತೃತೀಯ ಲಿಂಗದವರಿಗೆ ಪ್ರತ್ಯೇಕ ಆಯ್ಕೆ

ನೇಮಕಗೊಂಡಿರುವ ಈ ಹದಿಮೂರು ಮಂದಿಯಲ್ಲಿ ಒಂಬತ್ತು ಮಂದಿ ರಾಯ್‌ಪುರದವರಾಗಿದ್ದಾರೆ. ರಾಯ್‌ಪುರದಲ್ಲಿ ಒಟ್ಟು 20 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ತೃತೀಯ ಲಿಂಗಿಗಳನ್ನು ಪೊಲೀಸ್ ಇಲಾಖೆಗೆ ನೇಮಿಸಿಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

13 Transgenders Appointed As Constables In Chhattisgarh

ಈವರೆಗೂ ಛತ್ತೀಸ್‌ಗಡದ ಹೊರತಾಗಿ ಇಡೀ ದೇಶದಲ್ಲಿ ಇಬ್ಬರು ತೃತೀಯ ಲಿಂಗಿಗಳನ್ನು ಕಾನ್‌ಸ್ಟೆಬಲ್ ಆಗಿ ನೇಮಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಒಬ್ಬರು ಹಾಗೂ ರಾಜಸ್ಥಾನದಲ್ಲಿ ಒಬ್ಬರು ತೃತೀಯ ಲಿಂಗಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಹಾರ ಸರ್ಕಾರವೂ ಈಚೆಗೆ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ತಮ್ಮನ್ನು ಸರ್ಕಾರಿ ಸೇವೆಗೆ ನಿಯೋಜಿಸಿಕೊಂಡಿರುವುದಕ್ಕೆ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಅವಕಾಶಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇವೆ. ಇದೆಲ್ಲಾ ಸಾಧ್ಯವಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಂವಿಧಾನದಲ್ಲಿ ತೃತೀಯ ಲಿಂಗಿಗಳಿಗೆ ಮೂಲಭೂತ ಹಕ್ಕುಗಳ ಮೇಲೆ ಸಮಾನ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ 2014ರಲ್ಲಿ ಘೋಷಿಸಿತ್ತು. ಇದಾಗ್ಯೂ ಸಮಾಜದಲ್ಲಿ ಅವರಿಗೆ ಸಮಾನ ಅವಕಾಶ ನೀಡುವ ಉದಾಹರಣೆಗಳು ವಿರಳವೇ ಆಗಿದ್ದವು.

English summary
Chhattisgarh police have recruited 13 transgenders as constables in four districts of Chhattisgarh,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X