• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು ಕಾಶ್ಮೀರ ಪ್ರವಾಹದಲ್ಲಿ ಸಿಲುಕಿರುವ 200 ಕನ್ನಡಿಗರು

|

ಶ್ರೀನಗರ, ಸೆ. 9: ಜಮ್ಮು-ಕಾಶ್ಮೀರ ಜಲಪ್ರಳಯದಲ್ಲಿ ಒಟ್ಟು 200 ಜನ ಕನ್ನಡಿಗರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ರಾಜಾಜಿನಗರದ ದಂಪತಿ ಸೇರಿದಂತೆ ಗುಲ್ಬರ್ಗದ 11 ಜನ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಮಳೆ ನಿಂತಿದ್ದರೂ ಪ್ರವಾಹ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾಗಿಲ್ಲ.

ಬೆಂಗಳೂರಿನ ರಾಜಾಜಿನಗರ ನಿವಾಸಿ ಸ್ಟೇಟ್‌ ಬ್ಯಾಂಕ್‌ ನೌಕರ ಜಿ.ಎಲ್‌.ನಟರಾಜ್‌ ಮತ್ತು ಅನಿತಾ ದಂಪತಿ ಪ್ರವಾಹದಲ್ಲಿ ಸಿಲುಕಿ ಆತಂಕದಲ್ಲಿದ್ದಾರೆ. ಸೆ. 4 ರಂದು ಸೈಟ್‌ ಸೀಯಿಂಗ್‌ಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ದಂಪತಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಇಲ್ಲಿಯವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಮತ್ತೊಂದೆಡೆ ವೈಷ್ಣೋದೇವಿ ಪ್ರವಾಸಕ್ಕೆ ತೆರಳಿದ್ದ ಗುಲ್ಬಗರ್ಗಾದ ಒಂದೇ ಕುಟುಂಬದ 11 ಜನ ಜಲ ಪ್ರಳಯಕ್ಕೆ ಸಿಲುಕಿದ್ದಾರೆ.

ಗುಲ್ಬರ್ಗಾದ ಚಪ್ಪಲ್‌ ಬಜಾರ್‌ ನಿವಾಸಿಗಳಾದ ನಗರದ ಗುಬ್ಬಿ ಬನ್ನೂರ್‌ಕರ್‌, ಅಮರ್‌ ಬನ್ನೂರ್‌ಕರ್‌, ಉಮಾ, ಶರಣು, ಶಿಲ್ಪಾ, ಅಭೀಷೇಕ, ಶಿವಾನಿ, ರಾಹುಲ್‌ ಸೇರಿದಂತೆ ಇಡೀ ಬನ್ನೂರ್‌ಕರ್‌ ಕುಟುಂಬ ಪ್ರವಾಹಕ್ಕೆ ಸಿಲುಕಿದೆ.

ವೈಷ್ಣೋದೇವಿ ಪ್ರವಾಶ ಮುಗಿಸಿ ಹಿಂದಿರುಗುತ್ತಿದ್ದ ಕುಟುಂಬ ನೀರಿನಡಿ ಸಿಕ್ಕಿಹಾಕಿಕೊಂಡಿತು ಎಂದು ಹೇಳಲಾಗಿದೆ.

ಹನಿಮೂನ್‌ಗೆ ತೆರಳಿದ್ದ ದಂಪತಿ ಸೇಫ್‌

ಹನಿಮೂನ್‌ಗೆ ತೆರಳಿದ್ದ ಮೈಸೂರಿನ ದಂಪತಿಯನ್ನು ರಕ್ಷಣೆ ಮಾಡಲಾಗಿದೆ. ಮಧುಚಂದ್ರಕ್ಕೆಂದು ತೆರಲಿದ್ದ ಮೈಸೂರು ಇಲವಾಲ ನಿವಾಸಿ ರಾಘವೇಂದ್ರ ಪ್ರಸಾದ್‌ ಮತ್ತು ಅವರ ಹೆಂಡತಿ ನಂದಿನಿ ಅವರನ್ನು ಸೇನಾಪಡೆ ರಕ್ಷಿಸಿದೆ. ಸದ್ಯ ಶ್ರೀನಗರದ ಶಿಬಿರದಲ್ಲಿ ಅವರ ಆಶ್ರಯ ನೀಡಲಾಗಿದೆ.(ಪ್ರವಾಹ ಪರಿಹಾರಕ್ಕೆ ಸದಾ ನಿರತ ಭಾರತೀಯ ಸೇನೆ)

ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಸೇನಾ ಪಡೆ ಅವರನ್ನು ರಕ್ಷಣೆ ಮಾಡಿದೆ. ಮನೆಯವರಿಗೆ ದೂರವಾಣಿ ಕರೆ ಮಾಡಿ ತಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂದು ರಾಘವೇಂದ್ರ ಪ್ರಸಾದ್‌ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್‌ 6 ರಂದು ಹನಿಮೂನ್‌ಗೆ ತೆರಳಿದ್ದ ದಂಪತಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು.

ಸುಮಾರು ನಾಲ್ಕು ನೂರಕ್ಕೂ ಅಧಿಕ ಜನ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತಿದ್ದು ಜಮ್ಮು ಕಾಶ್ಮೀರ ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿದೆ.

ಅಂತೂ ಎಚ್ಚೆತ್ತ ರಾಜ್ಯ ಸರ್ಕಾರ

ಅಂತೂ ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದು ಶ್ರೀನಗರದಲ್ಲಿ ಹೆಲ್ಪ್‌ ಡೆಸ್ಕ್‌ ಆರಂಭಿಸಿದೆ. ಟೋಲ್‌ ಫ್ರೀ ಸಂಖ್ಯೆ 1070 ಮತ್ತು ಸಜಹಾಯವಾಣಿ 080-22340676ಕ್ಕೆ ಕರೆ ಮಾಡಿ ಸಮಸ್ಯೆ ತಿಳಿಸಬಹುದಾಗಿದೆ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಸರೋಜಮ್ಮ ತಿಳಿಸಿದ್ದಾರೆ.

ಅಲ್ಲದೇ ಎರಡು ಜನ ಅಧಿಕಾರಿಗಳನ್ನು ಕಳುಹಿಸಲಾಗಿದ್ದು ರಕ್ಷಣೆ ಮಾಡಿದ ಕನ್ನಡಿಗರನ್ನು ದೆಹಲಿ ಮಾರ್ಗದ ಮೂಲಕ ಕರೆತರುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

English summary
A familay of Gulbarga and a Bangalorien couple suffering from flood attack at Jammu and Kashmir. Total 13 people facing trouble in rain fall. 
 13 People of Karnataka facing troube in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X