ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE: 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಲ್ಲ

|
Google Oneindia Kannada News

ನವದೆಹಲಿ, ಮೇ 23: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ 12ನೇ ತರಗತಿ ಅಂತಿಮ ಪರೀಕ್ಷೆಗಳ ಅವಧಿ ಕಡಿತಗೊಳಿಸಲಾಗಿದೆ. ಅರ್ಧ ಗಂಟೆಗಳಲ್ಲೇ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಶಿಕ್ಷಣ ಮಂಡಳಿ ಚಿಂತನೆ ನಡೆಸಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ರಾಜ್ಯಗಳು ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದವು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದುಗೊಳಿಸುವುದಕ್ಕೆ ಪ್ರತಿಪಾದಿಸಿದ್ದವು. ಈ ಹಿನ್ನೆಲೆ ಕೇಂದ್ರ ಮಂಡಳಿ 12ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಿದೆ.

 ಸಿಬಿಎಸ್ಇ ಪರೀಕ್ಷೆ ಭವಿಷ್ಯ ನಿರ್ಧಾರ, ರಾಜನಾಥ್ ನೇತೃತ್ವದಲ್ಲಿ ಸಭೆ ಸಿಬಿಎಸ್ಇ ಪರೀಕ್ಷೆ ಭವಿಷ್ಯ ನಿರ್ಧಾರ, ರಾಜನಾಥ್ ನೇತೃತ್ವದಲ್ಲಿ ಸಭೆ

12ನೇ ತರಗತಿ ವಿದ್ಯಾರ್ಥಿಗಳಿಗೆ 3 ಗಂಟೆಗಳ ಬದಲಿಗೆ ಅರ್ಧ ಗಂಟೆಗಳಲ್ಲೇ ಪರೀಕ್ಷೆ ನಡೆಸುವುದು ಒಂದು ಆಯ್ಕೆಯಾಗಿದೆ. ರಾಜ್ಯಗಳಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ನಡೆಸುವ ಬಗ್ಗೆ ಆಯಾ ರಾಜ್ಯ ಸರ್ಕಾರದ ಶಿಕ್ಷಣ ಮಂಡಳಿಯು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಎರಡನೇ ಆಯ್ಕೆಯನ್ನು ನೀಡಲಾಗಿದೆ.

ಪದವಿ ಪೂರ್ವ ಪರೀಕ್ಷೆ ನಡೆಸಲು ಎರಡು ಆಯ್ಕೆ

ಪದವಿ ಪೂರ್ವ ಪರೀಕ್ಷೆ ನಡೆಸಲು ಎರಡು ಆಯ್ಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ನಡುವೆ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯ ಮತ್ತು ವಿಧಾನಕ್ಕೆ ಹೊಂದಿಕೊಂಡು ಪರೀಕ್ಷೆ ನಡೆಸುವುದು ಅಥವಾ ಪರೀಕ್ಷೆಗಳನ್ನು ಮುಂದೂಡುವುದು ಸೇರಿದಂತೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಎರಡು ಆಯ್ಕೆಗಳನ್ನು ನೀಡಿದೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ನೀಡಿದ ಮೊದಲ ಆಯ್ಕೆ?

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ನೀಡಿದ ಮೊದಲ ಆಯ್ಕೆ?

12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಎರಡು ಆಯ್ಕೆಗಳನ್ನು ನೀಡಿದೆ. ಈ ಪೈಕಿ ಮೊದಲ ಆಯ್ಕೆ 3 ತಿಂಗಳ ಅವಧಿಯಲ್ಲೇ ಎಲ್ಲ ರೀತಿ ಪರೀಕ್ಷೆಗಳನ್ನು ನಡೆಸುವುದು. ಮೊದಲ ತಿಂಗಳು ಪರೀಕ್ಷಾ ಪೂರ್ವ ಚಟುವಟಿಕೆ ಹಾಗೂ ಉಳಿದ ಎರಡು ತಿಂಗಳಿನಲ್ಲಿ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಿಸುವುದು ಆಗಿದೆ. 30 ದಿನಗಳಲ್ಲಿ ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಉಳಿದ ಸಾಮಾನ್ಯ ವಿಷಯಗಳಿಗೆ ವಿದ್ಯಾರ್ಥಿಯ ಕಾರ್ಯಕ್ಷಮತೆ ಮೇಲೆ ಅಂಕಗಳನ್ನು ನೀಡುವುದು. ಬಹುಶಃ ಆಗಸ್ಟ್ ತಿಂಗಳಿನಲ್ಲಿ ಈ ಪರೀಕ್ಷೆಗಳು ನಡೆಯಲಿದ್ದು, ಸಪ್ಟೆಂಬರ್ ವೇಳೆಗೆ ಎಲ್ಲ ಪರೀಕ್ಷೆಗಳು ಅಂತ್ಯಗೊಳ್ಳಲಿವೆ ಎಂದು ಮಂಡಳಿ ತಿಳಿಸಿದೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ನೀಡಿದ ಎರಡನೇ ಆಯ್ಕೆ?

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ನೀಡಿದ ಎರಡನೇ ಆಯ್ಕೆ?

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ನೀಡಿರುವ ಎರಡನೇ ಆಯ್ಕೆಯಲ್ಲಿ ಪ್ರಮುಖವಾದ 19 ವಿಷಯಗಳಿಗೆ ಸಂಬಂಧಿಸಿದಂತೆ 90 ನಿಮಿಷಗಳ ಪರೀಕ್ಷೆ ನಡೆಸುವುದಾಗಿದೆ. ಒಂದು ಭಾಷೆ ಮತ್ತು ಆಯ್ಕೆ ಮಾಡಿಕೊಂಡಿರುವ ಮೂರು ವಿಷಯಗಳ ಮೇಲಿನ ಪರೀಕ್ಷೆಗೆ ಮಾತ್ರ ವಿದ್ಯಾರ್ಥಿಗಳು ಹಾಜರಾಗತಕ್ಕದ್ದು. ವಿದ್ಯಾರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಐದು ಮತ್ತು ಆರನೇ ವಿಷಯಗಳಿಗೆ ಅಂಕವನ್ನು ನೀಡಲಾಗುವುದು. ಈ ಪರೀಕ್ಷೆಗಳು ವ್ಯವಸ್ಥಿತ ಹಾಗೂ ಸೀಮಿತ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ನಡೆಸುವುದಕ್ಕೆ ಅವಕಾಶ ನೀಡಲಾಗಿದೆ.

ಎರಡು ಬಾರಿ ಪರೀಕ್ಷೆ ನಡೆಸುವುದಕ್ಕೆ ಅವಕಾಶ

ಎರಡು ಬಾರಿ ಪರೀಕ್ಷೆ ನಡೆಸುವುದಕ್ಕೆ ಅವಕಾಶ

ಎರಡನೇ ಆಯ್ಕೆಯಲ್ಲಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸೂಕ್ತ ಎಂದು ಎನಿಸಿರುವ ದಿನಾಂಕದಂದೇ ನಡೆಸುವುದಕ್ಕೆ ಸೂಚಿಸಲಾಗಿದೆ. ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಎರಡನೇ ಬಾರಿ ಪರೀಕ್ಷೆ ಬರೆಯುವುದಕ್ಕೆ ಅನುಮತಿ ನೀಡಲಾಗಿದೆ. ಜುಲೈ 15ರಂದು ಮೊದಲ ಹಂತದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ 2ನೇ ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮವಾಗಿ ಸಪ್ಟೆಂಬರ್ 5ರಂದು ಪರೀಕ್ಷಾ ಫಲಿತಾಂಶ ಹೊರಬೀಳಲಿದೆ. ಈ ಹಿಂದೆ ಮೇ 4 ರಿಂದ ಜೂನ್ 14ರವರೆಗೂ ನಡೆಯಬೇಕಿದ್ದ 12ನೇ ತರಗತಿ ಪರೀಕ್ಷೆಗಳಿಗೆ 14,30,247 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

English summary
12th Class Students Examination: CBSE Exams Not Cancelled, Here Govt Gives Two Options To Conduct Exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X