• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ IISC ಬೆಂಗಳೂರು ಸೇರಿ 12 ಶಿಕ್ಷಣ ಸಂಸ್ಥೆಗಳ ಹೆಸರು

|
Google Oneindia Kannada News

ನವದೆಹಲಿ, ಮಾರ್ಚ್ 05: ಭಾರತ ಸರ್ಕಾರ ಉನ್ನತ ಶಿಕ್ಷಣದಲ್ಲಿ ಮಾಡಿರುವ ಸುಧಾರಣೆಯಿಂದಾಗಿ ಭಾರತೀಯ ಸಂಸ್ಥೆಗಳಿಗೆ ವಿಶ್ವಮನ್ನಣೆ ಸಿಕ್ಕಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.

ವಿಶ್ವ ಶ್ರೇಯಾಂಕದಲ್ಲಿ ಭಾರತದ 12 ಶಿಕ್ಷಣ ಸಂಸ್ಥೆಗಳು ಮನ್ನಣೆ ಗಳಿಸಿವೆ. 100 ಕ್ಯೂಎಸ್ ವಿಶ್ವ ವಿದ್ಯಾಲಯ ಶ್ರೇಯಾಂಕದಲ್ಲಿ 12 ಭಾರತೀಯ ಸಂಸ್ಥೆಗಳು ಕೂಡ ಸೇರಿವೆ.

2 ತಿಂಗಳಿನಲ್ಲಿ ಧಾರವಾಡ ಐಐಐಟಿ ನೂತನ ಕಟ್ಟಡ ಪೂರ್ಣ 2 ತಿಂಗಳಿನಲ್ಲಿ ಧಾರವಾಡ ಐಐಐಟಿ ನೂತನ ಕಟ್ಟಡ ಪೂರ್ಣ

ಅದರಲ್ಲಿ ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಮದ್ರಾಸ್, ಐಐಟಿ ಖರಗ್‌ಪುರ್, ಐಐಎಸ್‌ಸಿ ಬೆಂಗಳೂರು, ಐಐಟಿ ಗುವಾಹಟಿ, ಐಐಎಂ ಬೆಂಗಳೂರು, ಐಐಎಂ ಅಹಮದಾಬಾದ್, ಜವಾಹರ್‌ಲಾಲ್ ನೆಹರೂ ಯೂನಿವರ್ಸಿಟಿ, ಅಣ್ಣಾ ಯೂನಿವರ್ಸಿಟಿ, ದೆಹಲಿ ಯೂನಿವರ್ಸಿಟಿ ಹಾಗೂ ಒಪಿ ಜಿಂದಾಲ್ ಯೂನಿವರ್ಸಿಟಿ ವಿಶ್ವ ಮನ್ನಣೆ ಪಡೆದಿವೆ.

ಇದರಲ್ಲಿ ವಿಶ್ವದ ಪೆಟ್ರೋಲಿಯಂ ಎಂಜಿನಿಯರಿಂಗ್ ಪೈಕಿ ಐಐಟಿ ಮದ್ರಾಸ್ 30ನೇ ಸ್ಥಾನ ಗಳಿಸಿದೆ. ಐಐಟಿ ಬಾಂಬೆ 41 ನೇ ಸ್ಥಾನ, ಐಐಟಿ ಖರಗ್‌ಪುರ್ 44ನೇ ಸ್ಥಾನ ಪಡೆದಿದೆ.

ದೆಹಲಿ ವಿಶ್ವವಿದ್ಯಾಲಯವು ವಿಶ್ವದ ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ 50ನೇ ಸ್ಥಾನ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಇದೇ ಈ ಶಿಕ್ಷಣ ಸಂಶ್ಥೆಗಳ ವಿಶ್ವ ಮನ್ನಣೆಗೆ ಕಾರಣವಾಗಿದೆ.

ಜೆಎನ್‌ಯು ಹೆಸರು ಬದಲಾವಣೆ ಕುರಿತು ಯಾವುದೇ ಪ್ರಸ್ತಾವವಿಲ್ಲ:ರಮೇಶ್ ಪೋಖ್ರಿಯಾಲ್ಜೆಎನ್‌ಯು ಹೆಸರು ಬದಲಾವಣೆ ಕುರಿತು ಯಾವುದೇ ಪ್ರಸ್ತಾವವಿಲ್ಲ:ರಮೇಶ್ ಪೋಖ್ರಿಯಾಲ್

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಂದು ಭಾರತವು ವಿಶ್ವದಾದ್ಯಂತ ಅತಿ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಉನ್ನತ ಶಿಕ್ಷಣ ದಾಖಲಾತಿ ವಿಷಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

English summary
Union Education Minister Ramesh Pokhriyal on Thursday said the reforms made by the government in higher education has improved representation of Indian institutions in globally acclaimed rankings. This year, 12 Indian institutions have made it to the top 100 of the QS World University Rankings by Subject 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X