ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಭಾರತದ 116 ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣ

|
Google Oneindia Kannada News

ನವದೆಹಲಿ, ಏಪ್ರಿಲ್ 24: 2020ರಲ್ಲಿ ಭಾರತದಲ್ಲಿ ತೀವ್ರವಾಗಿ ಕೊರೊನಾ ಸೋಂಕು ಬಾಧಿಸುತ್ತಿತ್ತು. ಈ ಸಂದರ್ಭದಲ್ಲಿ ದೇಶದ 116 ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಶೇ. 83.6 ರಷ್ಟು ಕಡಿಮೆ ಮಾಡುವಲ್ಲಿ ದೇಶವು ಗಮನಾರ್ಹ ಯಶಸ್ಸನ್ನು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದರು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಲೇರಿಯಾ ನಿರ್ಮೂಲನೆ ಕುರಿತು 'ಶೂನ್ಯದೆಡೆಗೆ' ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ವರ್ಧನ್, ಏಪ್ರಿಲ್ 25 ಅನ್ನು ಪ್ರತಿವರ್ಷ ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ನಮ್ಮ ಗುರಿ 'ಶೂನ್ಯದೆಡೆಗೆ ಮಲೇರಿಯಾ'ವನ್ನು ತರುವುದೇ ಆಗಿದೆ ಎಂದರು.

Malaria

2030ರ ವೇಳೆಗೆ ಭಾರತವನ್ನು ಮಲೇರಿಯಾದಿಂದ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು ವಿಶ್ವ ಮಲೇರಿಯಾ ವರದಿಗಳ ಪ್ರಕಾರ 2018, 2019 ಮತ್ತು 2020ರ ಈ ನಿಟ್ಟಿನಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ ಎಂದರು.

ಕೊವಿಡ್ 19 ಜತೆ ಡೆಂಗ್ಯೂ, ಮಲೇರಿಯಾ ಚಿಕಿತ್ಸೆಗೂ ಮಾರ್ಗಸೂಚಿ ಪ್ರಕಟಕೊವಿಡ್ 19 ಜತೆ ಡೆಂಗ್ಯೂ, ಮಲೇರಿಯಾ ಚಿಕಿತ್ಸೆಗೂ ಮಾರ್ಗಸೂಚಿ ಪ್ರಕಟ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಭಾರತದ ಯಶಸ್ಸಿಗೆ ರಾಜಕೀಯ ಬದ್ಧತೆಯನ್ನು ಪ್ರಶಂಸಿಸಿದೆ. ಸರಿಯಾದ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು, ಅದರ ಜೊತೆಗೆ ದೇಶೀಯ ಸಂಪತ್ತು ಕ್ರೋಢಿಕರಣ ಮಾಡಿ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಪರಿಣಾಕಾರಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ ಎಂದರು.

English summary
As many as 116 districts in India reported zero malaria cases in 2020 and the country has been able to achieve remarkable success in reducing the disease burden in terms of cases by 84.5 per cent and deaths by 83.6 per cent, Union Health Minister Harsh Vardhan said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X