ಮಮತಾ ಬ್ಯಾನರ್ಜಿ ತಲೆ ತಂದವರಿಗೆ 11 ಲಕ್ಷ ಎಂದ ಬಿಜೆಪಿ ಯುವ ಮುಖಂಡ

Posted By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 12: ಬಂಗಾಳದಲ್ಲಿ ಬಿಜೆಪಿ ಯುವ ಘಟಕದ ನಾಯಕರಾಗಿರುವ ಯೋಗೇಶ್ ವರ್ಷ್ನೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬೆದರಿಕೆ ಹಾಕಿದ್ದು, ಆಕೆಯ ತಲೆಗೆ 11 ಲಕ್ಷ ರುಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. ಬಿಜೆಪಿಯ ಯುವ ಮೋರ್ಚಾ ಸದಸ್ಯ ಆಗಿರುವ ವರ್ಷ್ನೆ ತಮ್ಮ ಕೋಪ ವ್ಯಕ್ತಪಡಿಸಿದ ಬಗೆ ಇದು.

ಕೋಲ್ಕತ್ತಾದಿಂದ 180 ಕಿ.ಮೀ. ದೂರವಿರುವ ಬಿರ್ಭುಮ್ ನಲ್ಲಿ ಹನುಮಾನ್ ಜಯಂತಿ ಸಂದರ್ಭದಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಪೊಲೀಸರ ನಡವಳಿಕೆ ವಿರುದ್ಧ ಆಕ್ರೋಶಗೊಂಡಿರುವ ವರ್ಷ್ನೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆಗೆ 11 ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ.[ಗಡುವು ಮುಗೀತಾ ಬಂತು, ರಾಜೀನಾಮೆ ನೀಡಿ: ಮೋದಿಗೆ ಮಮತಾ ಚಾಲೆಂಜ್]

'11 Lakh Reward For Beheading Mamata Banerjee', Says Bengal BJP Youth Leader

ಕಾರ್ಯಕ್ರಮದ ವೇಳೆ ಪೊಲೀಸರು ಜನರನ್ನು ಮನಬಂದಂತೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಮತಾ ಬ್ಯಾನರ್ಜಿ ಅವರನ್ನು 'ರಾಕ್ಷಸಿ' ಎಂದಿರುವ ವರ್ಷ್ನೆ, "ನಾನು ಆ ವಿಡಿಯೋ ನೋಡಿದಾಗ ಬಂದದ್ದು ಒಂದೇ ಆಲೋಚನೆ. ಯಾರಾದರೂ ಬ್ಯಾನರ್ಜಿ ತಲೆ ತಂದರೆ ಅವರಿಗೆ 11 ಲಕ್ಷ ರುಪಾಯಿ ಕೊಡ್ತೀನಿ" ಎಂದು ಹೇಳಿದ್ದಾರೆ.[ಮಮತಾ ಬ್ಯಾನರ್ಜಿಗೆ ಜೀವಬೆದರಿಕೆ, 50 ಲಕ್ಷ ರುಪಾಯಿಗೆ ಬೇಡಿಕೆ]

ಅಲ್ಲಿದ್ದ ಭಕ್ತರು 'ಜೈ ಶ್ರೀರಾಮ್' ಎಂಬ ಘೋಷಣೆ ಕೂಗಿದರು. ಅದರೆ ಅವರು ಯಾವುದೇ ಪಕ್ಷಕ್ಕೆ ಸೇರಿದ್ದವರಲ್ಲಿ ಎಂದು ವರ್ಷ್ನೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A leader of the BJP's youth wing in Bengal, Yogesh Varshney, has threatened Chief Minister Mamata Banerjee, announcing an "11 lakh rupee reward" for her head.
Please Wait while comments are loading...