ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕಾಸರಗೋಡಿನ 11 ಮಂದಿ ಕಾಣೆ, ಉಗ್ರರ ಜೊತೆ ಸೇರಿರುವ ಶಂಕೆ

By Manjunatha
|
Google Oneindia Kannada News

ಕಾಸರಗೋಡು, ಜೂನ್ 28: ಎರಡು ವರ್ಷದ ಹಿಂದೆ ಕಾಸರಗೋಡಿನಿಂದ 21 ಮಂದಿ ಕಾಣೆಯಾಗಿದ್ದ ದೇಶವ್ಯಾಪಿ ಸುದ್ದಿಯಾಗಿತ್ತು. ಈಗ ಮತ್ತೆ ಅದೇ ಕಾಸಗೋಡಿನ ಮೂಲ ನಿವಾಸಿಗಳಾದ 11 ಜನ ದುಬೈನಿಂದ ಕಾಣೆಯಾಗಿದ್ದಾರೆ.

ಕಳೆದ ಬಾರಿ ಕಾಣೆಯಾದವರಂತೆ ಇವರೂ ಕೂಡ ಭಯೋತ್ಪಾದಕರ ಗುಂಪು ಸೇರಿದ್ದಾರೆ ಎಂದೇ ಅನುಮಾನಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಎರಡು ಕುಟುಂಬದ ಒಟ್ಟು 11 ಮಂದಿ ದುಬೈನಿಂದ ನಾಪತ್ತೆಯಾಗಿದ್ದಾರೆ ಕುಟುಂಬದ ಸಂಪರ್ಕಕ್ಕೂ ಸಿಗುತ್ತಿಲ್ಲ.

ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ

ಈ ಬಗ್ಗೆ ಕಾಸರಗೋಡಿನಲ್ಲಿ ಎಂ.ಅಬ್ದುಲ್ ಹಮೀದ್ ಎಂಬುವರು ದೂರು ನೀಡಿದ್ದು, ಅವರ ಮಗಳು ನಸೀರಾ, ಆಕೆಯ ಗಂಡ ಮೊಗ್ರಲಿನಾ ಸವಾದ್ ಇವರ ಮಕ್ಕಳಾದ ಮೂಸಬ್, ಮರ್ಜಾನಾ ಮತ್ತು ಮುಖಬಿಲ್ ಮತ್ತು ಸವಾದ್‌ನ ಮೊದಲ ಪತ್ನಿ ದುಬೈನಿಂದ ಕಾಣೆಯಾಗಿದ್ದಾರೆ ಎಂದಿದ್ದಾರೆ.

11 Kasagodu people missing from Dubai

ದುಬೈನಲ್ಲಿ ಸುಗಂಧ ದ್ರವ್ಯ ಮಾರಾಟ ಮಾಡುತ್ತಿದ್ದ ಮೊಗ್ರಲಿನಾ ಸವಾದ್ ಜುಲೈ 15ರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅಬ್ದುಲ್ ಹಮೀದ್ ಅವರು ದುಬೈಗೆ ಹೋಗಿ ವಿಚಾರಿಸಿ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೇ ಕುಟುಂಬದ ಜೊತೆ ಕಾಸರಗೋಡುವರೇ ಆದ ದುಬೈನಲ್ಲಿ ವಾಸಿಸುತ್ತಿದ್ದ ಅನ್ವರ್, ಆತನ ಪತ್ನಿ ಜೀನತ್ ಮತ್ತು ಮೂರು ಮಕ್ಕಳು ಕಾಣೆಯಾಗಿದ್ದಾರೆ ಎನ್ನಲಾಗಿದ್ದು, ಕಾಣೆಯಾಗಿರುವ ಎರಡೂ ಕುಟುಂಬಗಳು ಒಟ್ಟಿಗೆ ಇದ್ದಾರೆ ಎಂದು ಅಬ್ದುಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ವಿಡಿಯೋ: ಬಿಜೆಪಿಗೆ ಕಾಂಗ್ರೆಸ್ ತಪರಾಕಿಸರ್ಜಿಕಲ್ ಸ್ಟ್ರೈಕ್ ವಿಡಿಯೋ: ಬಿಜೆಪಿಗೆ ಕಾಂಗ್ರೆಸ್ ತಪರಾಕಿ

ಮೊಗ್ರಲಿನಾ ಸವಾದ್ ದೂರುದಾರ ಅಬ್ದುಲ್‌ಗೆ ಮಾಡಿದ್ದ ಕೊನೆಯ ಆಡಿಯೋ ಸಂದೇಶದಲ್ಲಿ ಕೋರ್ಸ್‌ ಒಂದನ್ನು ಕಲಿಯಲು ಯೆಮನ್‌ಗೆ ತೆರಳುತ್ತಿರುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಎರಡು ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ತ್ರಿಕರಿಪುರ, ಪಡನ್ನದಿಂದ 17 ಮಂದಿ ಮುಸ್ಲಿಮರು ನಾಪತ್ತೆಯಾಗಿ ಎಸ್ಲಾಮಿಕ್ ಸ್ಟೇಟ್ ಸೇರಿದ್ದರು.

English summary
11 Kasaragodu people living in Dubai missing doubted that they were joined Terrorist group. Two years back 17 people missing from Kasagodu all joined dangerous Islamic State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X