ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯವರ್ಗದವರಿಗೂ ಮೀಸಲಾತಿ ವಿಧೇಯಕ, ಲೋಕಸಭೆಯಲ್ಲಿ ಪಾಸ್

|
Google Oneindia Kannada News

ನವದೆಹಲಿ, ಜನವರಿ 08: ಸಾಮಾನ್ಯವರ್ಗದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ(ಜನವರಿ 08)ದಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

'ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್'​ ಎಂಬುದನ್ನು ಈ ಮಸೂದೆ ಪೂರ್ಣಗೊಳಿಸುತ್ತದೆ. ಸಮಾನತೆಗೆ ಹಾಗೂ ಸಮಾಜದ ಉನ್ನತಿಗೆ ಈ ಮಸೂದೆ ಅವಶ್ಯಕ ಎಂದು ವಿತ್ತ ಸಚಿವ ಅರುಣ್​ ಜೇಟ್ಲಿ ಸಮರ್ಥಿಸಿಕೊಂಡರು.

ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?

ಮಸೂದೆ ಕುರಿತಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಭಾರಿ ಚರ್ಚೆ ನಡೆಸಿದವು. ಭಾರಿ ಚರ್ಚೆ ನಂತರ ಅಂತಿಮವಾಗಿ ಲೋಕಸಭೆಯಲ್ಲಿ ಮಸೂದೆಗೆ ಸಮ್ಮತಿ ದೊರೆಯಿತು.

10% quota for economically weak in general category cleared by Lok Sabha

ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿ

ವಿಧೇಯಕ ಅಂಗೀಕಾರವಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 8 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಇದು ಸಾಕಷ್ಟು ಅನುಕೂಲಕಾರಿ. ಕೋಟ್ಯಂತರ ಯುವಕರು ಈ ನಿರ್ಧಾರದಿಂದ ಲಾಭ ಪಡೆಯಲಿದ್ದಾರೆ. ಎಸ್​ಸಿ, ಎಸ್​ಟಿ ಹಾಗೂ ಒಬಿಸಿಗಳಿಗೆ ನೀಡಲಾಗಿರುವ ಶೇ. 50 ರಷ್ಟು ಮೀಸಲಾತಿಗೆ ಇದರಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲ ಎಂದರು.

ಸಂವಿಧಾನದ 15 ಹಾಗೂ 16ನೇ ಪರಿಚ್ಛೇದ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ, ಈ ಸಂಬಂಧ ತಿದ್ದುಪಡಿ ಮಸೂದೆ ಮಂಡಿಸಿತು. ಬಿಜೆಪಿ ಪರ 323 ಮತಗಳು ಲಭಿಸಿದರೆ, 3 ಮತಗಳು ವಿರುದ್ಧ ಬಂದಿವೆ.

ಜಾತಿ ಆಧಾರಿತ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಈ ಮೀಸಲಾತಿ ಪ್ರಮಾಣ ಶೇ10ರಷ್ಟು ಹೆಚ್ಚಳವಾಗಲಿದೆ.

English summary
Lok Sabha on Tuesday passed a Bill for providing 10 per cent reservation for economically weaker sections among unreserved categories by an overwhelming majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X