ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 24 ಗಂಟೆಯಲ್ಲಿ 10,667 ಕೊರೊನಾ ಕೇಸ್, 380 ಸಾವು

|
Google Oneindia Kannada News

ದೆಹಲಿ, ಜೂನ್ 16: ದೇಶದಲ್ಲಿ ಹೊಸದಾಗಿ 10,667 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,091ಕ್ಕೆ ಏರಿಕೆಯಾಗಿದೆ.

Recommended Video

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ‌ ಮಾಡೋರಿಗೆ ಈಗ ಒಳ್ಳೆ ಟೈಮ್ | Pre-owned Cars | Oneindia Kannada

ಕಳೆದ 24 ಗಂಟೆಯಲ್ಲಿ 380 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದು, ಈವರೆಗೂ ದೇಶದಲ್ಲಿ 9,900 ಜನರು ಮೃತಪಪಟ್ಟಿದ್ದಾರೆ.

10667 new COVID19 cases and 380 deaths reported in the last 24 hours in India

3.4 ಲಕ್ಷ ಪ್ರಕರಣಗಳ ಪೈಕಿ 1,80,013 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1,53,178 ರೋಗಿಗಳು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿದಿನ 1 ಲಕ್ಷ ಕೊರೊನಾ ಕೇಸ್: ಮತ್ತೊಮ್ಮೆ ಎಚ್ಚರಿಕೆ ನೀಡಿದ WHOಪ್ರತಿದಿನ 1 ಲಕ್ಷ ಕೊರೊನಾ ಕೇಸ್: ಮತ್ತೊಮ್ಮೆ ಎಚ್ಚರಿಕೆ ನೀಡಿದ WHO

ನಿನ್ನೆ ರಾತ್ರಿ ವೇಳೆಗೆ ತಮಿಳುನಾಡಿನಲ್ಲಿ 1843 ಕೇಸ್, ಮಹಾರಾಷ್ಟ್ರದಲ್ಲಿ 2786 ಪ್ರಕರಣ (ಮುಂಬೈನಲ್ಲಿ 1066), ದೆಹಲಿಯಲ್ಲಿ 1647 ಕೇಸ್, ತೆಲಂಗಾಣದಲ್ಲಿ 219 ಕೇಸ್, ಮಧ್ಯ ಪ್ರದೇಶದಲ್ಲಿ 133 ಕೇಸ್, ರಾಜಸ್ಥಾನದಲ್ಲಿ 287 ಕೇಸ್, ಪಶ್ಚಿಮ ಬಂಗಾಳದಲ್ಲಿ 407 ಕೇಸ್, ಗೋವಾದಲ್ಲಿ 28 ಪ್ರಕರಣಗಳು ವರದಿಯಾಗಿದ್ದವು.

ಹೆಚ್ಚು ಆಕ್ಟಿವ್ ಪ್ರಕರಣಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್, ರಷ್ಯಾ ಬಳಿಕ ಭಾರತದಲ್ಲಿ ಹೆಚ್ಚು ಕೇಸ್‌ಗಳು ಸಕ್ರಿಯವಾಗಿದೆ.

English summary
10,667 new COVID19 cases and 380 deaths reported in the last 24 hours. The total number of positive cases in the country now stands at 343091.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X