ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಾಯುಷಿ ಕಟ್ಟಿದ ಶೌಚಾಲಯಕ್ಕೆ ಎಲ್ಲೆಡೆಯಿಂದ ಬಹುಪರಾಕ್

By Mahesh
|
Google Oneindia Kannada News

ರಾಯ್ ಪುರ(ಚತ್ತೀಸ್ ಗಢ), ಸೆ. 07 : ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ' ಯೋಜನೆಗೆ ಹಲವೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ, ಮನೆಗೊಂದು ಶೌಚಾಲಯ ನಿರ್ಮಾಣದ ಗುರಿ ತಲುಪಲು ಸರ್ಕಾರಗಳು ಶ್ರಮಿಸುತ್ತಲೇ ಇವೆ. ಈ ನಡುವೆ ಇತ್ತೀಚಿಗೆ ಶತಾಯುಷಿ ಮಹಿಳೆಯೊಬ್ಬರು ಶೌಚಾಲಯ ನಿರ್ಮಾಣ ಮಾಡಿರುವ ಕಥೆ ಎಲ್ಲರಿಗೂ ಸ್ಪೂರ್ತಿ ನೀಡುತ್ತಿದೆ.

ರಾಯಪುರ್ ನ ಶತಾಯುಷಿ(102) ಮಹಿಳೆ ಬಯಲಲ್ಲಿ ಶೌಚಕ್ಕೆ ಹೋಗುವ ಮುಜುಗರದಿಂದ ತನ್ನ ಗ್ರಾಮದ ಮಹಿಳೆಯರನ್ನು ಬಚಾವ್ ಮಾಡುವ ಸಲುವಾಗಿ ತನ್ನ ಕುರಿಗಳನ್ನೇ ಮಾರಿ, ಶೌಚಾಲಯ ನಿರ್ವಿುಸಿ, ಇಡಿ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ.

ಛತ್ತೀಸಗಢದ ಧಮ್ರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕೋಟಾಭರಿ ಗ್ರಾಮದ ವೃದ್ಧೆ ಕುವಾರ್​ಬಾಯ್ ಯಾದವ್ ಅವರು ಈ ಗ್ರಾಮದಲ್ಲಿ ಬಯಲು ಶೌಚ ಸಮಸ್ಯೆ ತಡೆಯಲು ಜಿಲ್ಲಾಡಳಿತದಿಂದ ಹಿಡಿದು ಗ್ರಾಮ ಪಂಚಾಯ್ತಿವರೆಗಿನ ಸಂಸ್ಥೆಗಳು ಸಾಕಷ್ಟು ಪ್ರಯತ್ನಿಸಿದ್ದವು. ಆದರೆ ಆ ಪ್ರಯತ್ನಗಳೆಲ್ಲವೂ ವಿಫಲವಾಗಿತ್ತು. [ಶೌಚಾಲಯ ನಿರ್ಮಿಸಿ, ಹೆಣ್ಣು ಮಕ್ಕಳನ್ನು ಉಳಿಸಿ!]

Chhattisgarh: 102-year-old woman succeeds in making her village free from 'open-defecation'

ಅದೇನಾಯಿತೋ. ಒಂದು ದಿನ ಈ ಗ್ರಾಮದ ನಿವಾಸಿ 102 ವರ್ಷದ ವೃದ್ಧೆ ಕುವಾರ್​ಬಾಯ್ ಯಾದವ್ ಎಂಬುವವರು ತಮ್ಮ ಕುರಿಗಳನ್ನು ಮಾರಿ ಶೌಚಾಲಯ ನಿರ್ವಿುಸಲು ನಿರ್ಧರಿಸಿದರು. ಅದರಂತೆ ಅವರು ತಮ್ಮ ಕುರಿಗಳನ್ನು 22 ಸಾವಿರ ರೂ.ಗಳಿಗೆ ಮಾರಾಟ ಮಾಡಿ, ಶೌಚಾಲಯ ನಿರ್ವಿುಸಲು ಮುಂದಾದರು. [ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5 ]

ಈ ವಿಷಯ ತಿಳಿದ ಧಮ್ರಿ ಜಿಲ್ಲಾಡಳಿತ ಕೂಡ ಕುವಾರ್​ಬಾಯ್ ಯಾದವ್ ಅವರ ಬೆಂಬಲಕ್ಕೆ ನಿಂತಿತು. ಕಲೆಕ್ಟರ್ ಭೆಮ್ ಸಿಂಗ್ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREG) ಯಡಿ, ಶೌಚಾಲಯ ನಿರ್ವಣಕ್ಕೆ ಅಗತ್ಯ ಸಬ್ಸಿಡಿಯನ್ನು ಬಿಡುಗಡೆ ಮಾಡಿತು. ವೃದ್ಧೆಯ ಮುತುವರ್ಜಿ ಕಂಡ ಗ್ರಾಮದ 450 ನಿವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದರು.

ಈಗ ಕೋಟಾಭರಿ ಗ್ರಾಮ ಕಳೆದ ಜುಲೈನಲ್ಲಿ ಬಯಲು ಶೌಚ ಮುಕ್ತ ಗ್ರಾಮವೆಂದು ಜಿಲ್ಲಾಡಳಿತದಿಂದ ಘೊಷಿಸಲ್ಪಟ್ಟಿದೆ. (ಒನ್ ಇಂಡಿಯಾ ಸುದ್ದಿ)

English summary
It seems that Prime Minister Narendra Modi's dream of Swachh Bharat is going to be a reality soon.102-year-old woman from Chattisgarh has set an example to the whole country. Kuwarbai Yadav has sold her goats for Rs 22,000 for building a toilet!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X