ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವತಂತ್ರ ಭಾರತದ ಮೊದಲ ಮತದಾರ ನೇಗಿಯಿಂದ ಮತದಾನ

|
Google Oneindia Kannada News

'ನನ್ನ ಹಾಗೆ ಈ ಪವಿತ್ರ ಮತ್ತು ಜವಾಬ್ದಾರಿಯುತ ಹಕ್ಕನ್ನು ಎಲ್ಲರೂ ಅದರಲ್ಲೂ ಇಂದಿನ ಯುವಕರು ತಪ್ಪದೆ ಚಲಾಯಿಸಬೇಕು' ಎಂದು ಪ್ರತಿ ಬಾರಿ ಕಿವಿಮಾತು ಹೇಳುವ ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರ 102 ವರ್ಷ ವಯಸ್ಸಿನ ಶ್ಯಾಮ್ ಶರಣ್ ನೇಗಿ ಅವರು ಭಾನುವಾರದಂದು ತಮ್ಮ ಹಕ್ಕು ಚಲಾಯಿಸಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಿಮಾಚಲದ ಸೇಬು ತೋಟಗಳ ಮಧ್ಯೆಯಿರುವ ಕಿಣ್ಣಾರ್ ಜಿಲ್ಲೆಯ ಮಂಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ಪ ಗ್ರಾಮದ ನಿವಾಸಿ ಎಸ್ಎಸ್ ನೇಗಿ. ಪತ್ನಿ ಜತೆಗೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ. ಹಾಗೆಯೇ, ಮೊಮ್ಮಕ್ಕಳು ಅನೇಕ ಮರಿಮೊಮ್ಮಕ್ಕಳು ಸಹ ಇದ್ದಾರೆ. ಶಿಮ್ಲಾದಿಂದ 250 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ನೆಲೆಸಿರುವ ಹಿರಿಯಜ್ಜ ತಮ್ಮ ಊರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಒಟ್ಟು 17 ಲೋಕಸಭೆ ಚುನಾವಣೆ ಹಾಗೂ 14 ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದಾರೆ.

ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇವರೇ... ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇವರೇ...

ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಯಲ್ಲಿ ನೇಗಿ ತಮ್ಮ ಮತ ಚಲಾಯಿಸಿದ್ದಾರೆ. 2007ರಲ್ಲಿ ಐಎಎಸ್ ಅಧಿಕಾರಿ ಮನೀಶ್ ನಂದಾ (ಈಗ ಹಿಮಾಚಲ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಅವರು ಮೊದಲ ಬಾರಿಗೆ ನೇಗಿ ಅವರ ಗುರುತು ಪತ್ತೆ ಹಚ್ಚಿ, ಭಾರತದ ಮೊದಲ ಮತದಾರ ಎಂದು ಗುರುತಿಸಿದರು.

102-Year-Old Who Voted In Independent Indias 1st Polls Votes In Himachal

2012ರಲ್ಲಿ ಆಗಿನ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಸ್ವತಃ ನೇಗಿ ಅವರ ಮನೆಗೆ ತೆರಳಿ, ಸನ್ಮಾನ ಕೂಡ ಮಾಡಿದ್ದರು. 2014ರ ಚುನಾವಣೆ ವೇಳೆ ಗೂಗಲ್ ನಿಂದ 'ಮತದಾನಕ್ಕೆ ಬದ್ದ' ಅಭಿಯಾನದ ಭಾಗವಾಗಿ ನೇಗಿ ಅವರ ಬಗ್ಗೆ ವಿಡಿಯೋ ಮಾಡಲಾಗಿತ್ತು.

ಮತದಾನದ ಹಕ್ಕನ್ನು ಚಲಾಯಿಸಿ, ಪ್ರಾಮಾಣಿಕ ನಾಯಕನ ಕೈಗೆ ಸರಕಾರದ ಚುಕ್ಕಾಣಿ ನೀಡುವಂತಾಗಬೇಕು. ಮುಂದೆ, ಭಷ್ಟಾಚಾರವನ್ನು ಕೊನೆಗಾಣಿಸುವುದು ಮತ್ತು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸುವುದು ಆ ಪ್ರಾಮಾಣಿಕ ನಾಯಕನ ಆದ್ಯ ಕರ್ತವ್ಯವಾಗಬೇಕು ಎಂದು ಎಸ್ಎಸ್ ನೇಗಿ ಆಶಿಸಿದ್ದಾರೆ ಎಂದು ಅವರ ಪುತ್ರ ಹೇಳಿದರು.

English summary
Shyam Saran Negi, a 102-year-old voter who also participated in the the country's first general elections in 1951, voted today in a picturesque hamlet in Kinnaur district of Himachal Pradesh where voting is being held in four parliamentary seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X