ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುತೇಕ ಕೊರೊನಾ ಸೋಂಕಿತರಲ್ಲಿ ಕೂದಲು ಉದುರುವ ಸಮಸ್ಯೆ

|
Google Oneindia Kannada News

ನವದೆಹಲಿ, ಜುಲೈ 29: ಬಹುತೇಕ ಕೊರೊನಾ ಸೋಂಕಿತರಲ್ಲಿ ಕೂದಲು ಉದುರುವ ಸಮಸ್ಯೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಕೊರೊನಾವೈರಸ್ ರೋಗಿಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆಗಳಲ್ಲಿ ಶೇ. 100 ರಷ್ಟು ಏರಿಕೆ ಕಂಡುಬಂದಿದೆ ಎಂದು ವೈದ್ಯರು ಗುರುವಾರ ತಿಳಿಸಿದ್ದಾರೆ. ವಕ್ತಾರರ ಪ್ರಕಾರ, ಸಾಮಾನ್ಯವಾಗಿ ದಕ್ಷಿಣ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ವಾರದಲ್ಲಿ ನಾಲ್ಕರಿಂದ ಐದು ಕೂದಲು ಉದುರುವಿಕೆ ಸಮಸ್ಯೆ ದಾಖಲಾಗಿದೆ.

ಆಹಾರ ಪದ್ಧತಿಯಲ್ಲಿನ ಬದಲಾವಣೆ, ಸೋಂಕಿನ ಸಮಯದಲ್ಲಿ ಜ್ವರ, ಒತ್ತಡ, ಆತಂಕ, ಹಠಾತ್ ಹಾರ್ಮೋನುಗಳ ಬದಲಾವಣೆಗಳು ಮತ್ತು ಕೋವಿಡ್ ನಂತರದ ಉರಿಯೂತದ ಪ್ರತಿಕ್ರಿಯೆಗಳು ತಾತ್ಕಾಲಿಕ ಕೂದಲು ಉದುರುವಿಕೆಗೆ ಕಾರಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

Corona

ಆದಾಗ್ಯೂ, ಕೂದಲು ಉದುರುವಿಕೆ ಪ್ರಕರಣಗಳು ಮೇ ಮಧ್ಯ ಭಾಗದಿಂದ ಹೆಚ್ಚಾಗುವುದು ಆರಂಭವಾಗಿದೆ.ತದನಂತರ ಈ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಸಾಮಾನ್ಯವಾಗಿ ಕಾಯಿಲೆಯಿಂದ ಚೇತರಿಸಿಕೊಂಡ ತಿಂಗಳ ಬಳಿಕ ಕೋವಿಡ್-19 ರೋಗಿಗಳಲ್ಲಿ ಕೂದಲು ಉದುರುವಿಕೆ ಅನುಭವವಾಗಿದೆ. ಕೆಲ ಪ್ರಕರಣಗಳಲ್ಲಿ ಸೋಂಕಿನ ಅವಧಿಯಲ್ಲೂ ಸಹ ಕೂದಲು ಉದರುವಿಕೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

English summary
Delhi's Indraprastha Apollo Hospital has seen a 100% rise in complaints of hair loss among coronavirus patients, doctors said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X