ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 1ರಿಂದ ಕೇಂದ್ರ ಸರಕಾರಿ ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ

|
Google Oneindia Kannada News

ನವದೆಹಲಿ, ಜನವರಿ 24: ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಫೆಬ್ರವರಿ 1ರಿಂದಲೇ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇಕಡಾ 10ರಷ್ಟು ಮೀಸಲಾತಿ ಅನ್ವಯ ಆಗಲಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ, ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಜಾರಿಗೆ ಅನುಸರಿಸ ಬೇಕಾದ ನಿಯಮದ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುವುದು.

"ಈ ಮೂಲಕ ತಿಳಿಸುವುದೇನೆಂದರೆ, ಕೇಂದ್ರ ಸರಕಾರದ ಉದ್ಯೋಗ ಹಾಗೂ ಸೇವೆಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತದೆ. ಫೆಬ್ರವರಿ 1, 2019 ಹಾಗೂ ನಂತರ ಅಧಿಸೂಚನೆ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೆ ಅನ್ವಯ ಆಗುತ್ತದೆ" ಎಂದು ತಿಳಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಜಾರಿಗೆ ತಂದ ಗುಜರಾತ್ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಜಾರಿಗೆ ತಂದ ಗುಜರಾತ್

ಸಾಮಾನ್ಯ ವರ್ಗದಲ್ಲಿನ ಬಡವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ನೀಡುವುದಕ್ಕೆ ಸಂವಿಧಾನ (124ನೇ ತಿದ್ದುಪಡಿ) ಮಸೂದೆಗೆ ಜನವರಿ 9ರಂದು ಸಂಸತ್ ನಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು.

10 percent reservation in government recruitment from February 1: Central government

ಸದ್ಯಕ್ಕೆ ಜಾರಿಯಲ್ಲಿರುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಇರುವ ಮೀಸಲಾತಿ ಅಡಿಯಲ್ಲಿ ಬಾರದಿರುವ ಹಾಗೂ ಯಾವ ಕುಟುಂಬದ ಆದಾಯ ವಾರ್ಷಿಕ ಎಂಟು ಲಕ್ಷಕ್ಕಿಂತ ಕಡಿಮೆ ಇರುತ್ತದೋ ಅಂಥವರನ್ನು ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಅಡಿಯಲ್ಲಿ ಫಲಾನುಭವಿಗಳಾಗಿ ಪರಿಗಣಿಸಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ಜಯ: ಮೋದಿಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ಜಯ: ಮೋದಿ

ಇನ್ನು ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ, ಸಾವಿರ ಚದರಡಿ ಮೇಲ್ಪಟ್ಟ ವಸತಿ ಗೃಹ, ಅಧಿಸೂಚನೆಯಲ್ಲಿರುವ ನಗರ ಪಾಲಿಕೆಗಳಲ್ಲಿ ವಸತಿ ಯೋಗ್ಯ ಭೂಮಿ ನೂರು ಚದರ ಯಾರ್ಡ್, ಅಧಿಸೂಚನೆ ಹೊರಡಿಸದ ಪಾಲಿಕೆ ವ್ಯಾಪ್ತಿಯೊಳಗಾದರೆ ಇನ್ನೂರು ಚದರ ಯಾರ್ಡ್ ಭೂಮಿ ಇರುವವರನ್ನು ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯಿಂದ ಹೊರಗಿಡಲಾಗುವುದು.

ಮೀಸಲಾತಿ ಪಡೆಯಲು ಬಯಸುವ ಕುಟುಂಬ ಆಸ್ತಿ ಹಾಗೂ ಆದಾಯವನ್ನು ತಹಸೀಲ್ದಾರ್ ಹುದ್ದೆಗೆ ಕಡಿಮೆ ಇಲ್ಲದಂತೆ ಇರುವ ಅಧಿಕಾರಿಗಳು ದೃಢಪಡಿಸಬೇಕು. ಸಂಬಂಧಪಟ್ಟ ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದೆ.

ಇನ್ನು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿನ ಮೀಸಲಾತಿ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸೂಚನೆಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

English summary
All central government posts will be filled after factoring in the recently approved 10% reservation for economically weaker sections (EWS), according to an official order. The Ministry of Personnel in the order said that detailed instructions regarding the procedure for the implementation of the EWS quota will be issued separately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X