ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ:ಶಿವನ್

|
Google Oneindia Kannada News

ನವದೆಹಲಿ, ಜೂನ್ 25: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಚಂದ್ರಯಾನ, ಗಗನಯಾನ ಸೇರಿದಂತೆ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ ಬಿದ್ದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಕೆ ಶಿವನ್ ತಿಳಿಸಿದ್ದಾರೆ.

Recommended Video

ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

ಬಾಹ್ಯಾಕಾಶ ಸಂಸ್ಥೆಯು ಒಟ್ಟು 10 ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಿತ್ತು, ಅದರಲ್ಲಿ ಮಾನವಸಹಿತ ಗಗನಯಾನ ಕೂಡ ಒಂದಾಗಿತ್ತು. ಆದರೆ ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಎಲ್ಲಾ ಯೋಜನಗಳು ತಡವಾಗಲಿವೆ. ಹಾಗೆಯೇ ಈ ವರ್ಷದ ಎಲ್ಲಾ ಯೋಜನೆಗಳನ್ನು ಮುಂದಿನ ವರ್ಷಕ್ಕೆ ಮುಂದೂಡಬೇಕಾದ ಅನಿವಾರ್ಯ ಎದುರಾಗಿದೆ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಸಂಬಂಧಿಸಿದ ಮೊದಲ ಮಾನವ ರಹಿತ ನೌಕೆಯ ಉಡಾವಣೆ 2021ಕ್ಕೆ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಇಸ್ರೋ ತನ್ನ ಯೋಜನೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, ಇದರ ಪರಿಣಾಮ ಗಗನಯಾನ ಯೋಜನೆಯಲ್ಲೂ ವ್ಯತ್ಯಯವಾಗಿದೆ.

10 Launches, Gaganyaan Chandrayaan Disturbed Due To Lockdown

ಅಂದುಕೊಂಡಂತೆ ನಡೆದಿದ್ದರೆ ಈ ವರ್ಷದ ಅಂತ್ಯದಲ್ಲಿ ಗಗನಯಾನ ಯೋಜನೆಯ ಪ್ರಯೋಗಾರ್ಥ ಉಡಾವಣೆ ನಡೆಯಬೇಕಾಗಿತ್ತು. "ನಮಗೆ ನೀಡಿರುವ ಪ್ಲ್ಯಾನ್‌ ಪ್ರಕಾರ ಈ ವರ್ಷದ ಯೋಜನೆಗಳ ಪಟ್ಟಿಯಲ್ಲಿ ಗಗನಯಾನದ ಮಾನವರಹಿತ ಉಡಾವಣೆ ಇಲ್ಲ. ಇತರ ಉಪಗ್ರಹಗಳ ಉಡಾವಣೆಯತ್ತ ಗಮನ ಹರಿಸಲಾಗಿದೆ," ಎಂಬುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಮಾನವರಹಿತ ನೌಕೆಯ ಉಡಾವಣೆ ಮುಂದಕ್ಕೆ ಹೋಗಿರುವುದರಿಂದ ಗಗನಯಾನದ ಒಟ್ಟಾರೆ ವೇಳಾಪಟ್ಟಿಯೂ ಬದಲಾಗುವ ಸಾಧ್ಯತೆ ಇದೆ ಎಂಬುದಾಗಿ ಅವರು ವಿವರಿಸಿದ್ದಾರೆ. ಗಗನಯಾನವು 2022ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಕನಸಿನ ಯೋಜನೆಯಾಗಿದೆ.

ಇಸ್ರೋ ತನ್ನ ಉಡಾವಣೆಗೆ ಉಪಕರಣಗಳನ್ನು ತಯಾರಿಸಲು ಖಾಸಗಿ ವಲಯವನ್ನು ಅವಲಂಬಿಸಿದೆ. ಇಸ್ರೋಗೆ ಉಪಕರಣಗಳನ್ನು ಒದಗಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಲಾಕ್‌ಡೌನ್‌ನಿಂದಾಗಿ ನಿಂತಿವೆ, ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಬಾರಿ ಚಂದ್ರಯಾನ 3ರ ಯೋಜನೆ ಇಸ್ರೋ ರೂಪಿಸಿತ್ತು ಆದರೆ ಎಲ್ಲದಕ್ಕೂ ತಡೆ ಬಿದ್ದಿದೆ ಎಂದು ಕೆ ಶಿವನ್ ವಿವರಿಸಿದ್ದಾರೆ.

English summary
The Indian Space Research Organisation (ISRO) chief K Sivan on Wednesday said that ten space missions being prepared for launch this year have been “disturbed” due to the coronavirus-induced lockdown besides delay in the human space and Moon missions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X