ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಪರೀಕ್ಷೆಗೆ 'ಟಾಟಾ-ಎಂಡಿ ಚೆಕ್' ಆವಿಷ್ಕಾರ

|
Google Oneindia Kannada News

ನವದೆಹಲಿ, ನವೆಂಬರ್.09: ಕೊರೊನಾವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಟಾಟಾ ಮೆಡಿಕಲ್ ಆಂಡ್ ಡಯಾಗ್ನಸ್ಟಿಕ್ ಸಂಸ್ಥೆಯು ಹೊಸ ತಪಾಸಣಾ ವಿಧಾನವನ್ನು ಸಂಶೋಧಿಸಿದೆ. ಭಾರತದಲ್ಲಿ ಕೊವಿಡ್-19 ಪರೀಕ್ಷೆ ವೇಗವನ್ನು ಹೆಚ್ಚಿಸುವುದಕ್ಕೆ ಈ ವಿಧಾನವು ಸರಳ, ಸುಲಭ, ಸುರಕ್ಷಿತ ಹಾಗೂ ಪರಿಣಾಮಕಾರಿ ಎನಿಸಿದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆಫ್ ಜೆನಾಮಿಕ್ಸ್ ಆಂಡ್ ಇಂಟಿಗ್ರೆಟಿವ್ ಬಯಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಟಾಟಾ ಕಂಪನಿಯು ಟಾಟಾ-ಎಂಡಿ ಚೆಕ್ ಸಾಧನವನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?

ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಹಾಗೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ಪಡೆದುಕೊಂಡಿರುವ ಟಾಟಾ-ಎಂಡಿ ಚೆಕ್ ಸಾಧನವು ಶೀಘ್ರದಲ್ಲೇ ಭಾರತದ ಡಯಾಗ್ನಸ್ಟಿಕ್ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ ಎಂದು ಟಾಟಾ ಕಂಪನಿಯು ಹೇಳಿದೆ.

ಪ್ರಾಥಮಿಕವಾಗಿ 10 ಲಕ್ಷ ಕಿಟ್ ಉತ್ಪಾದನೆ ಗುರಿ

ಪ್ರಾಥಮಿಕವಾಗಿ 10 ಲಕ್ಷ ಕಿಟ್ ಉತ್ಪಾದನೆ ಗುರಿ

ದೇಶಾದ್ಯಂತ ನಾವು ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸಬೇಕಿದೆ. ಈ ಹಿನ್ನೆಲೆ ಪ್ರಾಥಮಿಕ ಹಂತದಲ್ಲಿ ಟಾಟಾ-ಎಂಡಿ ಚೆಕ್ ಸಾಧನವನ್ನು ಚೆನ್ನೈನ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಒಂದು ತಿಂಗಳಲ್ಲಿ 10 ಲಕ್ಷ ಪರೀಕ್ಷಾ ಸಾಧನಗಳನ್ನು ಉತ್ಪಾದಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ಯಾವ ಡಯಾಗ್ನಸ್ಟಿಕ್ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ ಜೊತೆಗೆ ಸಹಭಾಗಿತ್ವವನ್ನು ಹೊಂದಬೇಕು ಎನ್ನುವುದರ ಕುರಿತು ಕಂಪನಿಯು ಚರ್ಚಿಸುತ್ತಿದೆ.

ಕೊವಿಡ್-19 ಪರೀಕ್ಷೆ ಮೊದಲಿಗಿಂತ ಪರಿಣಾಮಕಾರಿ

ಕೊವಿಡ್-19 ಪರೀಕ್ಷೆ ಮೊದಲಿಗಿಂತ ಪರಿಣಾಮಕಾರಿ

"ನಾವು ಆರಂಭದಿಂದ ಕೊನೆಯ ಹಂತದ ಪರೀಕ್ಷಾ ಅನುಭವದೊಂದಿಗೆ ಸಮಸ್ಯೆಗೆ ಪರಿಹಾರದ ಜೊತೆಗೆ ಬಂದಿದ್ದೇವೆ. ಇದೀಗ ಕೊವಿಡ್-19 ಪರೀಕ್ಷೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹಗೊಳಿಸುತ್ತಿದ್ದೇವೆ. ಬಹುತೇಕ ಪ್ರದೇಶಗಳಲ್ಲಿ ಈ ಪರೀಕ್ಷೆಯು ಲಭ್ಯವಾಗಿರುತ್ತದೆ. ಅದಕ್ಕಿಂತ ಮೇಲಾಗಿ ಈ ಸಾಧನವನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ" ಎಂದು ಟಾಟಾ ಮೆಡಿಕಲ್ ಆಂಡ್ ಡಯಾಗ್ನಸ್ಟಿಕ್ ಲಿಮಿಟೆಡ್ ಸಿಇಓ ಗಿರೀಶ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಫೆಲುಡಾ ಮಾದರಿಯ ಪರೀಕ್ಷೆ ಬಗ್ಗೆ ಸಂಶೋಧನೆ

ಫೆಲುಡಾ ಮಾದರಿಯ ಪರೀಕ್ಷೆ ಬಗ್ಗೆ ಸಂಶೋಧನೆ

ಕೊರೊನಾವೈರಸ್ ಸೋಂಕು ಪತ್ತೆಗಾಗಿ ಕಳೆದ ಜೂನ್ ತಿಂಗಳಿನಲ್ಲಿ ಸಿಎಸ್ಐಆರ್ ಮತ್ತು ಐಜಿಐಬಿ ಹೊಸ ಆವಿಷ್ಕಾರದೊಂದಿಗೆ ಬಂದಿದ್ದವು. ಅನುವಂಶೀಯ ಧಾತುವಿನ ಸಂಶೋಧನೆಗೆ ಉಪಯುಕ್ತ ಎನಿಸಿರುವ ಫೆಲುಡಾ ಮಾದರಿಯಲ್ಲಿ ಕೊವಿಡ್-19 ಸೋಂಕು ಪತ್ತೆಗೆ ಕ್ರಿಸ್ಪರ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಐಜಿಐಬಿ ಜೊತೆಗೆ ನಾವು ಕಾರ್ಯವನ್ನು ಮಾಡಿದ್ದೇವೆ. ವೈಜ್ಞಾನಿಕ ಅಂಶಗಳ ಮಾಹಿತಿಯನ್ನೆಲ್ಲ ಸಂಗ್ರಹಿಸಿದ್ದು, ಈ ವ್ಯವಸ್ಥೆಯನ್ನು ರೂಪಿಸುವುದಕ್ಕೆ ನಾವು 100 ದಿನಗಳ ಕಾಲ ತುಂಬಾ ಶ್ರಮವಹಿಸಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಗಿರೀಶ್ ಕೃಷ್ಣಮೂರ್ತಿ ಹೇಳಿದ್ದಾರೆ.

ಫೆಲುಡಾ ಮಾದರಿಯ ತಪಾಸಣೆ ಎಂದರೇನು?

ಫೆಲುಡಾ ಮಾದರಿಯ ತಪಾಸಣೆ ಎಂದರೇನು?

ಕೊರೊನಾವೈರಸ್ ಸೋಂಕು ತಪಾಸಣೆ ಹಾಗೂ ಫಲುಡಾ ಮಾದರಿಯ ಪರೀಕ್ಷೆ ನಡುವಿನ ಮಾಹಿತಿ ಇಲ್ಲಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಸಂಕ್ಷಿಪ್ತ ರೂಪವನ್ನು ಎಫ್ಎನ್ ಸಿಎಎಸ್-9 ಎಂದು ಗುರುತಿಸಲಾಗಿದೆ. ಸಾರ್ಸ್ ಕೊವಿಡ್-2 ನಲ್ಲಿ ಇರುವ ಅನುವಂಶೀಯ ಧಾತುಗಳ ಪತ್ತೆಗೆ ಫಲುಡಾ ಮಾದರಿಯ ತಪಾಸಣೆ ನಡೆಸಲಾಗುತ್ತದೆ. ಕಾಗದವನ್ನು ಆಧಾರವಾಗಿಟ್ಟುಕೊಂಡು ಈ ತಪಾಸಣೆ ನಡೆಸಲಾಗುತ್ತಿದೆ. ಕೊವಿಡ್-19 ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಾದರಿಯ ತಪಾಸಣೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.

ಟಾಟಾ-ಎಂಡಿ ಚೆಕ್ ಮಾದರಿಯ ತಪಾಸಣೆ ಹೇಗಿರುತ್ತದೆ?

ಟಾಟಾ-ಎಂಡಿ ಚೆಕ್ ಮಾದರಿಯ ತಪಾಸಣೆ ಹೇಗಿರುತ್ತದೆ?

ಕಾಗದವನ್ನು ಬಳಸಿಕೊಂಡು ಟಾಟಾ-ಎಂಡಿ ಚೆಕ್ ಮಾದರಿಯ ತಪಾಸಣೆ ನಡೆಸಲಾಗುತ್ತದೆ. ಅದರ ಫಲಿತಾಂಶವು ಚಿತ್ರದ ಸಮೇತವಾಗಿ ಲಭ್ಯವಾಗುತ್ತದೆ. ಪ್ರಮಾಣಿತ ಪ್ರಯೋಗಾಲಯದ ಉಪಕರಣಗಳು ಸೇರಿದಂತೆ ಸಣ್ಣ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ 45 ರಿಂದ 50 ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶವು ಗೊತ್ತಾಗಲಿದೆ. ಆರ್ಎನ್ಎ ಹೆಚ್ಚುವರಿ ತಪಾಸಣೆ ನಡೆಸಿದ್ದಲ್ಲಿ 75 ನಿಮಿಷಗಳಲ್ಲಿ ಫಲಿತಾಂಶ ಹೊರಬೀಳಲಿದೆ.

ದೇಶದ ಯಾವುದೇ ಮೂಲೆಯಲ್ಲಿ ಸಾಮಾನ್ಯ ವೈದ್ಯಕೀಯ ಪರಿಣಿತಿ ಪಡೆದಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ಉತ್ತಮ ಗುಣಮಟ್ಟದ ಪ್ರಮಾಣಿತ ಪ್ರಯೋಗಾಲಯದ ಉಪಕರಣಗಳಿಂದ ತಪಾಸಣೆ ನಡೆಸಲಾಗುತ್ತದೆ. ಕ್ಷಿಪ್ರಗತಿಯಲ್ಲಿ ಫಲಿತಾಂಶವನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಟಾಟಾ ಮೆಡಿಕಲ್ ಆಂಡ್ ಡಯಾಗ್ನಸ್ಟಿಕ್ ಲಿಮಿಟೆಡ್ ಸಿಇಓ ಗಿರೀಶ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

ದೊಡ್ಡ ಪ್ರಮಾಣದ ಯಂತ್ರಗಳ ಅಗತ್ಯವಿಲ್ಲ

ದೊಡ್ಡ ಪ್ರಮಾಣದ ಯಂತ್ರಗಳ ಅಗತ್ಯವಿಲ್ಲ

ಭಾರತದಲ್ಲಿ ಕೊವಿಡ್-19 ಸೋಂಕಿನ ಪರೀಕ್ಷೆಗೆ ಈಗ ಬಳಸುತ್ತಿರುವ ವಿಧಾನ ಮತ್ತು ಪ್ರಯೋಗಾಲಯಕ್ಕಿಂತ ಹೊಸ ಮಾದರಿಯು ಹೆಚ್ಚು ಉಪಯುಕ್ತವಾಗಿರಲಿದೆ. ಈ ಮಾದರಿ ಪರೀಕ್ಷೆಗೆ ಸಂಕೀರ್ಣ ಯಂತ್ರಗಳು, ದೊಡ್ಡ ಪ್ರಯೋಗಾಲಯಗಳ ಅಗತ್ಯವಿಲ್ಲ. ಕಡಿಮೆ ಹಂತಗಳ ತಪಾಸಣೆಯಿಂದಲೇ ಸ್ಪಷ್ಟ ಫಲಿತಾಂಶವನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಗಿರೀಶ್ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

Recommended Video

ಚುನಾವಣೆ ಸೋಲೇ ವಿಚ್ಛೇದನಕ್ಕೆ ಕಾರಣನಾ? | Melaina to divorce Donald Trump? | Oneindia Kannada

English summary
110 Lakh Covid-19 Tests Will To Be Done By TataMD Check In A Single Month At India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X