ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿ

|
Google Oneindia Kannada News

ರೋಹ್ಟಕ್, ಆಗಸ್ಟ್ 28: ಹರ್ಯಾಣದ ಡೇರಾ ಸಚ್ಚಾ ಸೌದಾ ಸ್ಥಾಪಕ, ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಮ್ ಗೆ ಸಿಬಿಐ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Recommended Video

Ram Rahim Sentencing 10 Years Punishment | Oneindia kannada

ಬಾಬಾ ರಾಮ್ ರಹೀಂಗೆ 10 ವರ್ಷ ಜೈಲುಬಾಬಾ ರಾಮ್ ರಹೀಂಗೆ 10 ವರ್ಷ ಜೈಲು

ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿಯೆಂದು ಪರಿಗಣಿಸಲ್ಪಿಟ್ಟಿದ್ದ ರಾಮ್ ರಹೀಮ್ ನನ್ನು ಆಗಸ್ಟ್ 25 ರಂದೇ ಸಿಬಿಐ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿತ್ತಾದರೂ ಶಿಕ್ಷೆ ಪ್ರಕಟಿಸಿರಲಿಲ್ಲ.

ದೇವಮಾನವನನ್ನು ಜೈಲಿಗಟ್ಟಿದ ಕಾಸರಗೋಡಿನ ಸಿಬಿಐ ಅಧಿಕಾರಿ ನಾರಾಯಣನ್ದೇವಮಾನವನನ್ನು ಜೈಲಿಗಟ್ಟಿದ ಕಾಸರಗೋಡಿನ ಸಿಬಿಐ ಅಧಿಕಾರಿ ನಾರಾಯಣನ್

ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಹರ್ಯಾಣ ರಾಜ್ಯದಾದ್ಯಂತ ಹಿಂಸಾಚಾರ ಭುಗಿಲೆದ್ದು 30 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ರಾಮ್ ರಹೀಮ್ ಭಕ್ತರು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿ ಪ್ರತಿಭಟಿಸಿದ್ದರು.

ರಾಮ್ ರಹೀಮ್ಗೆ ಜೀವಾವಧಿ ಶಿಕ್ಷೆಗೆ ಸಂತ್ರಸ್ತೆಯರ ಪಟ್ಟುರಾಮ್ ರಹೀಮ್ಗೆ ಜೀವಾವಧಿ ಶಿಕ್ಷೆಗೆ ಸಂತ್ರಸ್ತೆಯರ ಪಟ್ಟು

ನಂತರ ಎಚ್ಚೆತ್ತುಕೊಂಡ ಹರ್ಯಾಣ ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ಶಿಕ್ಷೆಯ ಪ್ರಮಾಣ ಘೋಷಣೆಯಾಗುವ ದಿನ(ಆಗಸ್ಟ್ 28) ಹೆಚ್ಚಿನ ಬಿಗಿಬಂದೋಬಸ್ತ್ ಕೈಗೊಂಡಿತ್ತು. ಅಷ್ಟಕ್ಕೂ ರಾಮ್ ರಹೀಮ್ ಗೆ ಈ ಪರಿ ಬೆಂಬಲಿಗರು ಇರುವುದಕ್ಕೆ ಕಾರಣವೇನು? ಅವನ ಬಂಧನವಾಗುತ್ತಿದ್ದಂತೆಯೇ ಹಿಂಸಾಚಾರ ಭುಗಿಲೇಳುವ ಮಟ್ಟಿನ ಜನಪ್ರಿಯತೆಗೆ ಕಾರಣವೇನು? ಇಲ್ಲಿದೆ ರಾಮ್ ರಹೀಮ್ ಕುರಿತು ತಿಳಿಯಬೇಕಾದ 10 ಸಂಗತಿ.

ರಾಕ್ ಸಂಗೀತಗಾರ!

ರಾಕ್ ಸಂಗೀತಗಾರ!

ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಒಬ್ಬ ರಾಕ್ ಸಂಗೀತಗಾರ! ಅವನ ಹೈ ವೇ ಲವ್ ಚಾರ್ಜರ್ ಎಂಬ ಆಲ್ಬಮ್ ಬಿಡುಗಡೆಯಾದ ಮೂರೇ ದಿನಗಳಲ್ಲಿ ಮೂರು ಮಿಲಿಯನ್ ಗಿಂತ ಹೆಚ್ಚು ಪ್ರತಿ ಮಾರಾಟವಾಗಿ ದಾಖಲೆ ಬರೆದಿತ್ತು! ನೆಟ್ ವರ್ಕ್ ತೆರೆ ಲವ್ ಕಾ, ಲವ್ ರಬ್ ಸೆ ಮುಂತಾದ ಆಲ್ಬಂ ಅನ್ನು ಶ ಬಿಡುಗಡೆ ಮಾಡಿದ್ದಾರೆ.

ಹೊಸ ಮಾದರಿಯ ಸಂಗೀತ ಪರಿಚಯ

ಹೊಸ ಮಾದರಿಯ ಸಂಗೀತ ಪರಿಚಯ

ಗುರ್ಮೀತ್ ರಾಮ್ ರಹೀಮ್ ಸಿಂಗ್ ಹೊಸ ಮಾದರಿಯ ಸಂಗೀತವನ್ನು ಪರಿಚಯಿಸಿದ್ದನಂತೆ. ಈ ಸಂಗೀತದ ಮೂಲಕ ಯುವಕರಿಗೆ ಧನಾತ್ಮಕ ಸಂದೇಶಗಳನ್ನು ನೀಡಿ ಅವರನ್ನು ಮದ್ಯಪಾನ, ಮಾದಕ ವ್ಯಸನದಂಥ ಚಟಗಳಿಂದ ಮುಕ್ತಗೊಳಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಸಂತಾನಹೀನತೆಗೂ ಚಿಕಿತ್ಸೆ ನೀಡುತ್ತಿದ್ದನಂತೆ.

ಡೇರಾ ದಾಖಲೆ

ಡೇರಾ ದಾಖಲೆ

ಆತನ ನಾಯಕತ್ವದಲ್ಲಿ ಡೇರಾ ಹಲವು ದಾಖಲೆಗಳನ್ನು ಬರೆದಿದೆ. ಒಂದೇ ದಿನದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ದಾಖಲೆ, ಅತೀ ಹೆಚ್ಚು ಗಿಡ ನೆಟ್ಟ ದಾಖಲೆ ಮುಂತಾದ ದಾಖಲೆಗಳು ಈತನ ಹೆಸರಿನಲ್ಲಿವೆ.

ಸಿನೆಮಾ ನಟನಾಗಿ

ಸಿನೆಮಾ ನಟನಾಗಿ

2015 ರಲ್ಲಿ ಬಿಡುಗಡೆಯಾದ MSG: The Messenger ಎಂಬ ಸಿನೆಮಾದಲ್ಲೂ ನಟಿಸಿದ್ದ ರಾಮ್ ರಹೀಮ್, ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕೀರ್ತಿ ಸಂಪಾದಿಸಲು ಉತ್ಸುಕನಾಗಿದ್ದನಂತೆ.

ಬಹುಮುಖ ಪ್ರತಿಭೆ!

ಬಹುಮುಖ ಪ್ರತಿಭೆ!

ಡೇರಾ ವೆಬ್ ಸೈಟ್ ನಲ್ಲಿ ರಾಮ್ ರಹೀಮ್ ನನ್ನು ಲೇಖಕ, ಸಂಶೋಧಕ, ಕೃಷಿಕ, ವಿಜ್ಞಾನಿ, ಕ್ರೀಡಾಪಟು, ಬಹು ಭಾಷಾ ತಜ್ಞ, ವಿದ್ವಾಂಸ, ನಿರ್ದೇಶಕ, ಸಂಗೀತಗಾರ, ಡಿ ಅಡಿಕ್ಷನ್ ಸ್ಪೆಶಲಿಸ್ಟ್ ಎಂದು ಉಲ್ಲೇಖಿಸಲಾಗಿದೆ!

ಡೇರಾ ಪ್ರಚಾರ

ಡೇರಾ ಪ್ರಚಾರ

2015 ರ ಹೊತ್ತಿಗೆ ಡೇರಾಕ್ಕೆ ಸೇರಿದ ಒಟ್ಟು 46 ಆಶ್ರಮಗಳು ದೇಶದಲ್ಲಿ ನಿರ್ಮಾಣವಾಗಿದ್ದು, ದೇಶದ ಮೂಲೆ ಮೂಲೆಗೂ ಈ ಪಂಗಡದ ಪ್ರಚಾರ ಮಾಡಲಾಗುತ್ತಿದೆ.

ಕೋಟಿ ಬೆಂಬಲಿಗರು

ಕೋಟಿ ಬೆಂಬಲಿಗರು

2014 ಡೇರಾ ಮುಖ್ಯಸ್ಥರೇ ಹೇಳಿದ್ದ ಪ್ರಕಾರ ದೇಶದಲ್ಲಿ 5 ಕೋಟಿಗೂ ಹೆಚ್ಚು ಜನ ಡೇರಾ ಅನುಯಾಯಿಗಳಿದ್ದಾರೆ. ಅದರಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ಹರ್ಯಾಣದಲ್ಲಿದ್ದಾರೆ!

ವೋಟ್ ಬ್ಯಾಂಕ್ ರಾಜಕೀಯ

ವೋಟ್ ಬ್ಯಾಂಕ್ ರಾಜಕೀಯ

ಹರ್ಯಾಣದ ಡೇರಾ ಬೆಂಬಲಿಗರು ಬಿಜೆಪಿಯ ವೋಟ್ ಬ್ಯಾಂಕ್ ಗಳು. ಅದಕ್ಕೆಂದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರ್ಮಿತ್ ರಾಮ್ ರಹೀಮ್ ನನ್ನು ಭೇಟಿ ಮಾಡಿ ಬೆಂಬಲವನ್ನೂ ಕೇಳಿದ್ದರು ಎಂಬ ಮಾಹಿತಿಯೂ ಲಭಿಸಿದೆ.

ಸುಸಜ್ಜಿತ ಸೌಲಭ್ಯ

ಸುಸಜ್ಜಿತ ಸೌಲಭ್ಯ

ಡೇರಾ ಸಂಘಟನೆಯ ಕೇಂದ್ರವಾದ ಹರ್ಯಾಣದ ಸಿರ್ಸಾದಲ್ಲಿ ಸುಸಜ್ಜಿತ ನಗರವೇ ತಲೆಯೆತ್ತಿದೆ. 2 ಕಿ.ಮೀ. ದೂರದ ಪ್ರದೇಶ, ಗೃಹ ಸಂಕೀರ್ಣ, ಆಸ್ಪತ್ರೆ, ಕೈಗಅರಿಕೆ, ಕಾರ್ಖಾನೆ ಈ ಎಲ್ಲವೂ ಡೇರಾ ಅನುಯಾಯಿಗಳಿಂದಲೇ ನಡೆಯುತ್ತಿದೆ.

ಗಣ್ಯ ಅನುಯಾಯಿಗಳು

ಗಣ್ಯ ಅನುಯಾಯಿಗಳು

ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಗಣ್ಯಾತಿಗಣ್ಯರೂ ಅನುಯಾಯಿಗಳಾಗಿದ್ದಾರೆ. ಅವರಲ್ಲಿ ಪ್ರಮುಖವಾದವರು ಬಾಲಿವುಡ್ ನಟಿ ಮನಿಷಾ ಕೋಯಿರಾಲ, ಕ್ರಿಕೆಟಿಗ ವಿರಾಟ್ ಕೋಹ್ಲಿ, ಜಹಿರ್ ಖಾನ್, ಆಶಿಶ್ ನೆಹ್ರಾ, ಯೂಸಫ್ ಶಿಖರ್ ಧವನ್ ಮತ್ತು ಪ್ರವೀಣ್ ಕುಮಾರ್ ಸೇರಿದಂತೆ ಘಟಾನುಘಟಿ ಸೆಲೆಬ್ರಿಟಿಗಳೂ ರಾಮ್ ರಹೀಮ್ ನ ಅನುಯಾಯಿಗಳು!

English summary
10 interesting things you need to know about Dera Sacha Sauda chief Baba Ram Rahim who has been convicted in a rape case and gets 20 year jail term as his quantum of punishment by CBI court on August 28, 2017 in Rohtak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X