ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಬೇತಿಗೆ ತೆರಳಿದ್ದ 10 ಬಿಎಸ್ ಎಫ್ ಯೋಧರು ನಿಗೂಢವಾಗಿ ನಾಪತ್ತೆ

|
Google Oneindia Kannada News

Recommended Video

ತರಬೇತಿಗೆ ತೆರಳಿದ್ದ 10 ಯೋಧರು ನಿಗೂಢವಾಗಿ ನಾಪತ್ತೆ | Oneindia Kannada

ಮುಘಲ್ಸರೈ(ಉತ್ತರ ಪ್ರದೇಶ), ಜೂನ್ 28: ಜಮ್ಮು ಕಾಶ್ಮೀರಕ್ಕೆ ವಿಶೇಷ ತರಬೇತಿಗೆಂದು ತೆರಳುತ್ತಿದ್ದ 10 ಜನ ಭದ್ರತಾ ಪಡೆಯ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಉತ್ತರ ಪ್ರದೇಶದ ಬರ್ಧಾಮನ್ ಮತ್ತು ದಂಬಾದ್ ರೈಲ್ವೇ ಯಲ್ಲಿ ತೆರಳುತ್ತಿದ್ದ ಈ 10 ಜನ ಮುಘಲ್ಸರೈ ಎಂಬಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಈ ಕುರಿತು ಈಗಾಗಲೇ ಮುಘಲ್ಸರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 'ಒಟ್ಟು 83 ಯೋಧರು ವಿಶೇಷ ತರಬೇತಿಗಾಗಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದ ಸಂದರ್ಭದಲ್ಲಿ ಹತ್ತು ಜನ ನಾಪತ್ತೆಯಾಗಿದ್ದಾರೆ. ತಮ್ಮ ಕಮಾಂಡರ್ ಗೆ ಯಾವುದೇ ರೀತಿಯಲ್ಲೂ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು' ಎಂದು ದೂರಿನಲ್ಲಿ ಹೇಳಲಾಗಿದೆ.

10 BSF Jawans going to J-K on army special train go missing

83 ಯೋಧರೂ ಪಶ್ಚಿಮ ಬಂಗಾಳದವರಾಗಿದ್ದು, ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಅವರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿತ್ತು. ಈ ಕುರಿತು ಪೊಲೀಸರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.ಯೋಧರನ್ನು ಅಪಹರಿಸಲಾಗಿದೆಯೇ ಎಂಬ ಕುರಿತೂ ಅನುಮಾನ ವ್ಯಕ್ತವಾಗಿದೆಯಾದರೂ, 10 ಜನರನ್ನು ಏಕಾಏಕಿ ಅಪಹರಿಸುವ ಸಂಭವ ಕಡಿಮೆಯಾದ್ದರಿಂದ ಘಟನೆ ಕುರಿತು ಯಾವುದೇ ಶಂಕೆ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.

ಇತ್ತೀಚೆಗಷ್ಟೇ, ಜಮ್ಮುಕಾಶ್ಮೀರದಲ್ಲಿ ಔರಂಗಜೇಬ್ ಎಂಬ ಯೋಧನನ್ನು ಉಗ್ರರು ಅಪಹರಿಸಿ ಕೊಂದಿದ್ದರು. ಈ ಕುರಿತು ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

English summary
Ten Border Security Force (BSF) soldiers on Wednesday went missing from a special army train between Bardhaman and Dhanbad railway stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X