ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ : ಹಿಮಕುಸಿತದಲ್ಲಿ ಒಬ್ಬ ಯೋಧ ಸಾವು

|
Google Oneindia Kannada News

ನವದೆಹಲಿ, ಫೆಬ್ರವರಿ 20 : ಹಿಮಾಚಲ ಪ್ರದೇಶದ ನಮ್ಗ್ಯಾ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಒಬ್ಬ ಯೋಧ ಮೃತಪಟ್ಟಿದ್ದಾನೆ. ಪಹರೆ ಕಾಯುತ್ತಿದ್ದ ಐವರು ಹಿಮದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಿನ್ನೂರು ಜಿಲ್ಲೆಯಲ್ಲಿ ಬರುವ ನಮ್ಗ್ಯಾ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಮಕುಸಿತವಾಗಿದೆ. ಒಟ್ಟು ಆರು ಯೋಧರು ಹಿಮದಡಿ ಸಿಲುಕಿದ್ದರು. ಒಬ್ಬನನ್ನು ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟರು.

111 ಹುದ್ದೆಯ ಸೇನಾ ನೇಮಕಾತಿಗೆ ಕನಿಷ್ಠ 2500 ಕಾಶ್ಮೀರಿ ಯುವಕರು ಭಾಗಿ111 ಹುದ್ದೆಯ ಸೇನಾ ನೇಮಕಾತಿಗೆ ಕನಿಷ್ಠ 2500 ಕಾಶ್ಮೀರಿ ಯುವಕರು ಭಾಗಿ

ಭಾರತ-ಚೀನಾ ಗಡಿ ಪ್ರದೇಶದ ಶಿಪ್ಕಿ ಸೆಕ್ಟರ್‌ನ ಭದ್ರತೆಗೆ 16 ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಪಹರೆ ಕಾಯುತ್ತಿದ್ದಾಗ ದಿಢೀರ್ ಹಿಮಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಿಮಕುಸಿತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ

1 Armyman Killed, 5 Trapped after avalanche in Himachal Pradesh

ಹಿಮದಡಿಯಲ್ಲಿ ಸಿಲುಕಿರುವ ಯೋಧರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಿನ್ನೂರು ಜಿಲ್ಲಾ ಪೊಲೀಸರು 150 ಯೋಧರೊಂದಿಗೆ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಹರೆ ಕಾಯುತ್ತಿರುವ ಯೋಧರು ಆಗಾಗ ಹಿಮಕುಸಿತದಲ್ಲಿ ಸಿಲುಕುತ್ತಾರೆ.

English summary
One army jawan has died and five others are trapped after an avalanche hit the Namgya region of Himachal Pradesh. Six armymen trapped one of them was rescued who died on the way to the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X