ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯ:1525 ಕೆಜಿ ಸ್ಫೋಟಕ, 6 ಸಾವಿರ ಡಿಟೋನೇಟರ್ಸ್ ಪತ್ತೆ, 6 ಮಂದಿ ಸೆರೆ

|
Google Oneindia Kannada News

ಶಿಲ್ಲಾಂಗ್, ಡಿಸೆಂಬರ್ 04: ಭಾರಿ ಪ್ರಮಾಣದ ಸ್ಫೋಟಕಗಳು ಹಾಗೂ ಡಿಟೋನೇಟರ್ಸ್‌ಗಳನ್ನು ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಮೇಘಾಲಯ ಪೊಲೀಸರು ಪತ್ತೆಹಚ್ಚಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೋವಾ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮೇಘಾಲಯಕ್ಕೆ ವರ್ಗಾವಣೆಗೋವಾ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮೇಘಾಲಯಕ್ಕೆ ವರ್ಗಾವಣೆ

ನಾಲ್ವರು ಅಡಗಿಕೊಂಡಿದ್ದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ 51 ಬಾಕ್ಸ್ ಗಳಲ್ಲಿ 1275 ಕೆಜಿ ಸ್ಫೋಟಕ, 5 ಸಾವಿರ ಡಿಟೋನೇಟರ್ಸ್ ಹಾಗೂ ಎಂಟು ಬಂಡಲ್ ಫ್ಯೂಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

1,525 Kg Of Explosives, 6,000 Detonators Seized In Meghalaya, 6 Arrested

ಲಾಡ್ರಿಂಬಾಯ್ ಪೊಲೀಸ್ ಔಟ್‌ಪೋಸ್ಟ್ ಪ್ರದೇಶದಲ್ಲಿ ಅಸ್ಸಾಂ ನೋಂದಣಿಯ ಎಸ್‌ಯುವಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿತ್ತು. ಕಾರಿನೊಳಗೆ ಹತ್ತು ಬಾಕ್ಸ್‌ಗಳಲ್ಲಿ 250 ಕೆಜಿ ಸ್ಫೋಟಕ, ಒಂದು ಸಾವಿರ ಜೀವಂತ ಡಿಟೋನೇಟರ್ಸ್ ಗಳು ಹಾಗೂ ಎಂದು ಬಂಡಲ್ ಫ್ಯೂಸ್ ಪತ್ತೆಯಾಗಿತ್ತು ಎಂದಿ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಜಿಕೆ ಇಂಗ್ರೈ ತಿಳಿಸಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಈ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಬಂಧಿತರು ವಿಚಾರಣೆ ವೇಳೆ ನೀಡಿರುವ ಮಾಹಿತಿ ಮೇರೆಗೆ ಖ್ಲೇರಿಯತ್‌ನಲ್ಲಿ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿ ಅಡಗಿಸಿಕೊಂಡಿದ್ದ ನಾಲ್ವರನ್ನು ಬಂಧಿಸಿರುವುದಾಗಿ ವರದಿ ಮಾಡಿದೆ.

ಒಟ್ಟು 1525 ಕೆಜಿಯಷ್ಟು ಸ್ಫೋಟಕ , 6 ಸಾವಿರ ಡಿಟೋನೇಟರ್ಸ್ಗಳನ್ನು ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲಾಗಿದೆ.

English summary
Six person were arrested in Meghalaya's East Jaintia Hills district with a huge quantity of explosives and detonators, police said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X