ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ

|
Google Oneindia Kannada News

ನವದೆಹಲಿ, ಏಪ್ರಿಲ್.09: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಐಸೋಲೇಟೆಡ್ ವಾರ್ಡ್ ಹಾಗೂ ಬೆಡ್ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ರಾಜ್ಯ ಕಾರ್ಮಿಕರ ವಿಮಾ ನಿಗಮದ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿನ 1,042 ಹಾಸಿಗೆಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಮೀಸಲು ಇರಿಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ಸೂಚನೆ ನೀಡಿದೆ.

 ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

ದೇಶಾದ್ಯಂತ ಸಿಎಸ್ಐಸಿ ಆಸ್ಪತ್ರೆಗಳಲ್ಲಿನ 1,112 ಐಸೋಲೇಟೆಡ್ ಬೆಡ್ ಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬಳಸಲು ಸೂಚಿಸಲಾಗಿದೆ. ಇದರ ಜೊತೆಗೆ 197 ವೆಂಟಿಲೇಟರ್ ಸಹಿತ ತುರ್ತು ನಿಗಾ ಘಟಕಗಳನ್ನು ತೆರೆಯಲಾಗಿದೆ. ಒಟ್ಟು 555 ಐಸಿಯು ವಾರ್ಡ್ ಗಳನ್ನು ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ.

ಭಾರತದಲ್ಲಿ 8 ಆಸ್ಪತ್ರೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲು

ಭಾರತದಲ್ಲಿ 8 ಆಸ್ಪತ್ರೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲು

1. ಗುಜರಾತ್ ಅಂಕೇಶ್ವರದ ಇಎಸ್ಐಸಿ ಆಸ್ಪತ್ರೆ - 100 ಬೆಡ್ ವ್ಯವಸ್ಥೆ

2. ಹರಿಯಾಣ ಗುರುಗ್ರಾಮ್ ನಲ್ಲಿರುವ ಇಎಸ್ಐಸಿ ಆಸ್ಪತ್ರೆ - 80 ಬೆಡ್ ವ್ಯವಸ್ಥೆ

3. ಗುಜರಾತ್ ನ ವಾಪಿ ಪ್ರದೇಶದಲ್ಲಿರುವ ಇಎಸ್ಐಸಿ ಆಸ್ಪತ್ರೆ - 100 ಬೆಡ್ ವ್ಯವಸ್ಥೆ

4. ರಾಜಸ್ಥಾನದ ಉದಯ್ ಪುರ್ ನಲ್ಲಿರುವ ಇಎಸ್ಐಸಿ ಆಸ್ಪತ್ರೆ - 100 ಬೆಡ್ ವ್ಯವಸ್ಥೆ

5. ಜಮ್ಮುವಿನಲ್ಲಿ ಇರುವ ಇಎಸ್ಐಸಿ ಆಸ್ಪತ್ರೆ - 50 ಬೆಡ್ ವ್ಯವಸ್ಥೆ

6. ಹಿಮಾಚಲ ಪ್ರದೇಶ ಬದ್ದಿ ಇಎಸ್ಐಸಿ ಆಸ್ಪತ್ರೆ - 100 ಬೆಡ್ ವ್ಯವಸ್ಥೆ
7. ಜಾರ್ಖಂಡ್ ನ ಆದಿತ್ಯಪುರ್ ನಲ್ಲಿರುವ ಇಎಸ್ಐಸಿ ಆಸ್ಪತ್ರೆ - 42 ಬೆಡ್ ವ್ಯವಸ್ಥೆ

8. ಪಶ್ಚಿಮ ಬಂಗಾಳದ ವೋಕಾ ಪ್ರದೇಶದಲ್ಲಿರುವ ಇಎಸ್ಐಸಿ ಆಸ್ಪತ್ರೆ - 470 ಬೆಡ್ ವ್ಯವಸ್ಥೆ

ಕೊವಿಡ್19 ಔಷಧಿಗಳ ಪೂರೈಕೆಗೆ ಪರ್ಯಾಯ ವ್ಯವಸ್ಥೆ

ಕೊವಿಡ್19 ಔಷಧಿಗಳ ಪೂರೈಕೆಗೆ ಪರ್ಯಾಯ ವ್ಯವಸ್ಥೆ

ಕೊರೊನಾ ವೈರಸ್ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಇಎಸ್ಐಸಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಸೋಂಕಿತರಿಗೆ ಔಷಧಿ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ.

ಸರ್ಕಾರದ ಸಹಭಾಗಿತ್ವ ಹೊಂದಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಸರ್ಕಾರದ ಸಹಭಾಗಿತ್ವ ಹೊಂದಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ದೇಶದ ಕಾರ್ಮಿಕರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಇಎಸ್ಐ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕರು ಸಚಿವಾಲಯವು ಸೂಚಿಸಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಜೊತೆಗೆ ಸರ್ಕಾರಿ ಸಹಭಾಗಿತ್ವದ ಆಸ್ಪತ್ರೆಗಳಲ್ಲೂ ಯಾವುದೇ ಅಡ್ಡಿಯಿಲ್ಲದೇ ಚಿಕಿತ್ಸೆ ಪಡೆಯಬಹುದು. ಅಲ್ಲದೇ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರೆದಿರುವ ಖಾಸಗಿ ಔಷಧಿ ಅಂಗಡಿಗಳಲ್ಲಿ ಅಗತ್ಯವಿರುವ ಔಷಧಿಗಳನ್ನು ಪಡೆಯಬಹುದು ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ.

ಕೊವಿಡ್-19 ವಿರುದ್ಧ ಹೋರಾಡುವುದಕ್ಕೆ ಕ್ರಮ

ಕೊವಿಡ್-19 ವಿರುದ್ಧ ಹೋರಾಡುವುದಕ್ಕೆ ಕ್ರಮ

ದೇಶವನ್ನು ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಸಿಎಸ್ಐಸಿ ಆಸ್ಪತ್ರೆಗಳಲ್ಲೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೂಚಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುತ್ತಿದೆ. ವೈದ್ಯಕೀಯ ಸಿಬ್ಬಂದಿ ಮಾಸ್ಕ್ ಹಾಗೂ ವೈಯಕ್ತಿಕ ಸುರಕ್ಷತಾ ಕಿಟ್ ನ್ನು ಬಳಸಿಕೊಂಡು ಕೊರೊನಾ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಾಜ್ಯ ಪ್ರಾಧಿಕಾರದ ಸಹಕಾರದೊಂದಿಗೆ ಇಎಸ್ಐಸಿ ಆಸ್ಪತ್ರೆಗಳು ಕರ್ತವ್ಯ ನಿರ್ವಹಿಸುತ್ತಿವೆ.

ಇಎಸ್ಐ ಕಾರ್ಡ್ ದಾರರಿಗೆ ಅವಧಿ ಮುಗಿದಿದ್ದರೂ ಚಿಕಿತ್ಸೆ

ಇಎಸ್ಐ ಕಾರ್ಡ್ ದಾರರಿಗೆ ಅವಧಿ ಮುಗಿದಿದ್ದರೂ ಚಿಕಿತ್ಸೆ

ಕೊರೊನಾ ವೈರಸ್ ಹಾವಳಿ ನಡುವೆ ಕೆಲವು ಕಾರ್ಮಿಕರಿಗೆ ನೀಡಿದ್ದ ಇಎಸ್ಐ ಕಾರ್ಡ್ ದಾರರ ಅವಧಿಯು ಮುಗಿದಿದೆ. ಭಾರತ ಲಾಕ್ ಡೌನ್ ಹಿನ್ನೆಲೆ ಕಾರ್ಮಿಕರು ಕಾರ್ಡ್ ರಿನಿವಲ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಂಥ ಕಾರ್ಡ್ ದಾರರಿಗೆ ಅವಧಿ ಮುಗಿದಿದ್ದರೂ ಇಎಸ್ಐ 60 ಮತ್ತು 61ನೇ ಕಾಯ್ದೆ ಪ್ರಕಾರ ಜೂನ್.30ರವರೆಗೂ ವಿಸ್ತರಿಸಲಾಗಿದೆ. ಫೆಬ್ರವರಿಗೆ ಅವಧಿ ಮುಗಿಯುವ ಕಾರ್ಡ್ ದಾರರಿಗೆ ಮಾರ್ಚ್ ವರೆಗೂ ವಿಸ್ತರಿಸಲಾಗಿದೆ. ಅದರಂತೆ ಮಾರ್ಚ್ ನಲ್ಲಿ ಅವಧಿ ಅಂತ್ಯಗೊಳ್ಳುವ ಫಲಾನುಭವಿಗಳಿಗೆ ಏಪ್ರಿಲ್ ವರೆಗೂ ಅವಧಿ ವಿಸ್ತರಿಸಲಾಗಿದೆ.

English summary
1,042 Beds Declared For Coronavirus Patients In 8 ESIC Hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X