ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಹಿಮಾಚಲ ಪ್ರದೇಶದಲ್ಲೂ ಹಾರಲಿದೆ ಬಿಜೆಪಿ ಪತಾಕೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಅಕ್ಟೋಬರ್ 25: 2017ರ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು 'ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ' ಸಮೀಕ್ಷೆ ಹೇಳಿದೆ.

ಹಿಮಾಚಲ ಪ್ರದೇಶ: ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಹಿಮಾಚಲ ಪ್ರದೇಶ: ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

68 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 43-47 ಸ್ಥಾನಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ' ಜನಾಭಿಪ್ರಾಯದಲ್ಲಿ ತಿಳಿದು ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿವೆ.

ಕಾಂಗ್ರೆಸ್ 21-25 ಸ್ಥಾನಗಳನ್ನು ಮತ್ತು ಪಕ್ಷೇತರರು 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

2012ರಲ್ಲಿ ಕಾಂಗ್ರೆಸ್ 36, ಬಿಜೆಪಿ 26 ಸ್ಥಾನಗಳನ್ನು ಗೆದ್ದಿತ್ತು. ವೀರಭದ್ರ ಸಿಂಗ್ ಆರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.

ಬಿಜೆಪಿಗೆ ಶೇ. 49 ಮತ

ಬಿಜೆಪಿಗೆ ಶೇ. 49 ಮತ

ಬಿಜೆಪಿ ಒಟ್ಟು ಶೇಕಡಾ 49 ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಕೇವಲ ಶೇಕಡಾ 38ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಯಲ್ಲಿ ಜನರು ಹೇಳಿದ್ದರೂ, ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ರನ್ನೇ ಜನರು ಬೆಂಬಲಿಸಿದ್ದಾರೆ.

ವೀರಭದ್ರ ಸಿಂಗ್ ಪರ ಜನರ ಒಲವು

ವೀರಭದ್ರ ಸಿಂಗ್ ಪರ ಜನರ ಒಲವು

ಆರು ಬಾರಿಯ ಮುಖ್ಯಮಂತ್ರಿ ಹಾಗೂ ಹಾಲಿ ಸಿಎಂ ವೀರಭದ್ರ ಸಿಂಗ್ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಜನ ಬಯಸುತ್ತಿದ್ದಾರೆ. ಶೇಕಡಾ 31 ರಷ್ಟು ಜನರು ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ.

ಎರಡನೇ ಸ್ಥಾನದಲ್ಲಿ ಜೆಪಿ ನಡ್ಡಾ

ಎರಡನೇ ಸ್ಥಾನದಲ್ಲಿ ಜೆಪಿ ನಡ್ಡಾ

ನಂತರದ ಸ್ಥಾನದಲ್ಲಿ ಬಿಜೆಪಿಯ ಕೇಂದ್ರ ಸಚಿವ ಜೆಪಿ ನಡ್ಡಾ (ಶೇ. 24), ಬಿಜೆಪಿಯ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧಮಾಲ್ (ಶೇ. 16) ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಾಂತ ಕುಮಾರ್ (ಶೇ. 9 ), ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ಸತ್ಪಾಲ್ ಸಿಂಗ್ ಸಾಟಿ (ಶೇ. 2) ಇದ್ದಾರೆ.

ಎಲ್ಲಾ ವಲಯಗಳಲ್ಲೂ ಕೇಸರಿ ಪಾರುಪತ್ಯ

ಎಲ್ಲಾ ವಲಯಗಳಲ್ಲೂ ಕೇಸರಿ ಪಾರುಪತ್ಯ

ಕಂಗ್ರಾ, ಮಂಡಿ ಮತ್ತು ಶಿಮ್ಲಾ ಮೂರೂ ಭಾಗಗಳಲ್ಲಿ ಕ್ರಮವಾಗಿ 25, 24 ಮತ್ತು 19 ಸ್ಥಾನಗಳಿದ್ದು ಇದರಲ್ಲಿ ಬಿಜೆಪಿ ಕ್ರಮವಾಗಿ 18, 15 ಮತ್ತು 12 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಇಲ್ಲಿ ಕ್ರಮವಾಗಿ 7, 9 ಮತ್ತು 7 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

 ಉದ್ಯೋಗವೇ ಪ್ರಮುಖ ವಿಷಯ

ಉದ್ಯೋಗವೇ ಪ್ರಮುಖ ವಿಷಯ

ಶೇಕಡಾ 82 ಜನರು ಚುನಾವಣೆಯಲ್ಲಿ ಉದ್ಯೋಗದ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದು ಹೇಳಿದ್ದಾರೆ. ಇನ್ನು ಶೇಕಡಾ 7ರಷ್ಟು ಜನರು ಅಭಿವೃದ್ಧಿ, ಶೇಕಡಾ 4 ರಷ್ಟು ಜನರು ರಸ್ತೆ ಮತ್ತು ಶೇಕಡಾ 3ರಷ್ಟು ಜನರು ಮುಖ್ಯಮಂತ್ರಿ ಅಭ್ಯರ್ಥಿಗಳ ವಿಚಾರ ಚುನಾವಣೆಯಲ್ಲಿ ನಿರ್ಧಾರಕ ಅಂಶಗಳಾಗಲಿವೆ ಎಂದು ಹೇಳಿದ್ದಾರೆ.

 ನವೆಂಬರ್ 9ರಂದು ಚುನಾವಣೆ

ನವೆಂಬರ್ 9ರಂದು ಚುನಾವಣೆ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ.

English summary
The BJP is heading for a big victory in the Himachal Pradesh assembly elections 2017 according to an opinion poll conducted by India Today-Axis My India. According to the poll, BJP will garner 43 to 47 of the total 68 seats in the Himachal Pradesh Assembly. The majority mark in the state is 35.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X