ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇರಿಗೆ ಸವಾಸೇರ್ ಅಲ್ಲ, ಆಂದ್ರಪ್ರದೇಶದಲ್ಲಿ ಕೇಸ್ ಗೆ ಪ್ರತಿ ಕೇಸ್!

|
Google Oneindia Kannada News

ಹೈದ್ರಾಬಾದ್, ನವೆಂಬರ್.29: ಏಟಿಗೆ ಎದಿರೇಟು ರಾಜಕಾರಣದಲ್ಲಿ ಕಾಮನ್. ಹೇಳಿಕೆಗಳಿಗೆ ಪ್ರತಿಹೇಳಿಕೆ, ಆರೋಪಕ್ಕೆ ಪ್ರತ್ಯಾರೋಪ ಎಲ್ಲವೂ ಇದ್ದೇ ಇರುತ್ತದೆ. ಆದರೆ, ಆಂದ್ರಪ್ರದೇಶದಲ್ಲಿನ ರಾಜಕಾರಣ ಎಲ್ಲಕ್ಕಿಂತಲೂ ಡಿಫರೆಂಟ್.

ಹೌದು, ಆಂದ್ರಪ್ರದೇಶದಲ್ಲಿ ಸೇರಿಗೆ ಸವಾಸೇರ್ ಅನ್ನುವ ರೀತಿಯಲ್ಲಿ ರಾಜಕಾರಣ ನಡೆಯುತ್ತಿದೆ. ಇಂದು ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತೆಲುಗು ದೇಶಂ ಪಾರ್ಟಿ ಪೊಲೀಸರಿಗೆ ದೂರು ನೀಡಿತ್ತು.
ಇದಾಗಿ ಕೆಲಗಂಟೆಗಳಲ್ಲೇ ತೆಲುಗು ದೇಶಂ ಪಾರ್ಟಿ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. ಈಗ ಆಂದ್ರಪ್ರದೇಶದಲ್ಲಿ ಏನಿದ್ರೂ ಕೇಸ್ ಗೆ ಪ್ರತಿಕೇಸ್ ರಾಜಕಾಣ ನಡೆಯುತ್ತಿದ್ದಂತೆ ಕಾಣುತ್ತಿದೆ.

ಅಯ್ಯಯ್ಯೋ, ಮಾಜಿ ಮುಖ್ಯಮಂತ್ರಿ ಮೇಲೆಯೇ ಚಪ್ಪಲಿ ಎಸೆಯುವುದೇ?ಅಯ್ಯಯ್ಯೋ, ಮಾಜಿ ಮುಖ್ಯಮಂತ್ರಿ ಮೇಲೆಯೇ ಚಪ್ಪಲಿ ಎಸೆಯುವುದೇ?

ಟಿಡಿಪಿ ಕೇಸ್ ದಾಖಲಿಸಿದ್ದು ಯಾಕೆ?
ಅಸಲಿಗೆ ಇದು ನವೆಂಬರ್.28ರಂದು ಅಮರಾವತಿಯಲ್ಲಿ ನಡೆದಿರುವ ಘಟನೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದುವಿದ್ದ ಬಸ್ ಮೇಲೆಯೇ ಕಿಡಿಗೇಡಿಗಳು ಚಪ್ಪಲಿ ತೂರಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರೇ ಚಂದ್ರಬಾಬು ನಾಯ್ದು ಇರುವ ಬಸ್ ಮೇಲೆ ಚಪ್ಪಲಿ ತೂರಿರುವ ಆರೋಪ ಇದೀಗ ಕೇಳಿ ಬಂದಿದೆ. ವೈಎಸ್ಆರ್ ಸಿಪಿ ಕಾರ್ಯಕರ್ತರ ವಿರುದ್ಧ ತೆಲುಗು ದೇಶಂ ಪಾರ್ಟಿ ದೂರು ದಾಖಲಿಸಿದೆ.

 YSRCP Leaders File Complaint Over Drone Camera Use.

ವೈಎಸ್ಆರ್ ಕಾಂಗ್ರೆಸ್ ದೂರು ಕೊಟ್ಟಿದ್ದೇಕೆ?
ಟಿಡಿಪಿ ಕೇಸ್ ದಾಖಲಿಸಿ ಕೆಲವು ಗಂಟೆಗಳಲ್ಲೇ ವೈಎಸ್ಆರ್ ಕಾಂಗ್ರೆಸ್ ಕೂಡಾ ಟಿಡಿಪಿ ವಿರುದ್ಧ ತಳ್ಳೂರು ಉಪ ವಿಭಾಗ ಡಿಸಿಪಿಗೆ ದೂರು ಸಲ್ಲಿಸಿದೆ. ಅದಕ್ಕೆ ಕಾರಣವಿಷ್ಟೇ. ಅಮರಾವತಿಯ ಸುತ್ತಮುತ್ತ ಪ್ರದೇಶಗಳಲ್ಲಿ ಪ್ರವಾಸ ನಡೆಸಿ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಈ ವೇಳೆ ಅತ್ಯಾಧುನಿಕ ಡ್ರೋನ್ ಕ್ಯಾಮರಾ ಮೂಲಕ ಶೂಟಿಂಗ್ ಮಾಡಿಸಿದ್ದಾರೆ ಎಂಬುದು ವೈಎಸ್ ಆರ್ ಕಾಂಗ್ರೆಸ್ ಆರೋಪವಾಗಿದೆ.

ವೆಲಗಪುಡಿ, ಮಂದಡಂ ಗ್ರಾಮದ ಸುತ್ತಮುತ್ತಲಿನಲ್ಲಿ ಪ್ರದೇಶ ಸರ್ಕಾರದ ಕಚೇರಿ ಹಾಗೂ ಕಾರ್ಯದರ್ಶಿಗಳಿಗೆ ಸಂಬಂಧಿಸಿದ್ದು ಅತ್ಯಂತ್ಯ ಸೂಕ್ಷ್ಮವಾಗಿದೆ. ಸರ್ಕಾರದ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೇ ಡ್ರೋನ್ ಕ್ಯಾಮರಾಗಳನ್ನು ಬಳಸಿ ಶೂಟಿಂಗ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಟಿಡಿಪಿ ವಿರುದ್ಧ ಕ್ರಮ ಜರುಗಿಸುವಂತೆ ವೈಎಸ್ಆರ್ ಕಾಂಗ್ರೆಸ್ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿಕೊಂಡಿದೆ.

English summary
YSRCP Leaders File Complaint Over Drone Camera Use During Chandrababu Naidu Amaravati Touring Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X