ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷೆ ಸ್ಥಾನ ತೊರೆದ ಜಗನ್ ತಾಯಿ ವಿಜಯಲಕ್ಷ್ಮಿ

|
Google Oneindia Kannada News

ಹೈದರಾಬಾದ್ ಜುಲೈ 08: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮೆಗಾ ಸಭೆಯ ಮೊದಲ ದಿನ, ಅದರ ಗೌರವಾಧ್ಯಕ್ಷೆ ವಿಜಯಮ್ಮ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವೈ.ಎಸ್. ವಿಜಯಲಕ್ಷ್ಮಿ ಅವರು ತಮ್ಮ ಸ್ಥಾನವನ್ನು ತ್ಯಜಿಸುವುದಾಗಿ ಘೋಷಿಸಿದರು.

ನೆರೆಯ ತೆಲಂಗಾಣದಲ್ಲಿ ವೈ.ಎಸ್‌.ವಿಜಯಲಕ್ಷ್ಮಿ ಮಗಳು ವೈ.ಎಸ್. ಶರ್ಮಿಳಾಗೆ ಬೆಂಬಲ ನೀಡಲು ಆಂಧ್ರಪ್ರದೇಶದ ವೈಎಸ್‌ಆರ್ ಪಕ್ಷ ತೊರೆದಿರುವುದಾಗಿ ಅವರು ತಿಳಿಸಿದ್ದಾರೆ.

ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಿದ್ದು ನಾವು: ಟಿಡಿಪಿ, ವೈಎಸ್‌ಆರ್ ಕಿತ್ತಾಟ- ವಾಸ್ತವ ಬೇರೆಯಾ?ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಿದ್ದು ನಾವು: ಟಿಡಿಪಿ, ವೈಎಸ್‌ಆರ್ ಕಿತ್ತಾಟ- ವಾಸ್ತವ ಬೇರೆಯಾ?

ಐದು ವರ್ಷಗಳ ನಂತರ ಗುಂಟೂರಿನಲ್ಲಿ ಅವರ ಪುತ್ರ, ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ವೈಎಸ್‌ಆರ್‌ಸಿಪಿ ಅಧಿವೇಶನದಲ್ಲಿ ಗುರುವಾರ ಅವರ ಭಾಷಣದ ಕೊನೆಯಲ್ಲಿ ಪಕ್ಷ ತ್ಯಜಿಸುವ ಘೋಷಣೆ ಮಾಡಿದ್ದಾರೆ.

YSR Congress Honorary President Y.S.Vijayalakshmi Announced That She Quitting Her Post

"ತೆಲಂಗಾಣ ಜನತೆಗಾಗಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಕನಸುಗಳನ್ನು ನನಸು ಮಾಡಲು ತೆಲಂಗಾಣದಲ್ಲಿ ಏಕಾಂಗಿ ಹೋರಾಟ ನಡೆಸುತ್ತಿರುವ ನನ್ನ ಮಗಳು ವೈ.ಎಸ್. ಶರ್ಮಿಳಾ ಅವರೊಂದಿಗೆ ನಾನು ನಿಂತಿದ್ದೇನೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು, ವದಂತಿಗಳು ಮತ್ತು ಅನಗತ್ಯ ವಿವಾದಗಳು ಇದ್ದವು. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಅಥವಾ ಹಿತಾಸಕ್ತಿ ಸಂಘರ್ಷದ ಬಗ್ಗೆ ಮಾತನಾಡುವ ಅನಗತ್ಯ ವಿವಾದವನ್ನು ಕೊನೆಗೊಳಿಸಲು ನಿರ್ಧರಿಸಿದ್ದು, ವೈಎಸ್‌ಆರ್‌ಸಿಪಿ ತೊರೆಯುತ್ತಿದ್ದೇನೆ" ಎಂದು ಅವರು ಹೇಳಿದರು.

ವೈಎಸ್‌ಆರ್ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ ಆದೇಶ

ಮಗಳ ಪಕ್ಷ ಅಧಿಕಾರಕ್ಕೆ ತರಲು ಸಾಥ್

"ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ನನ್ನ ಮಗನ ಕಷ್ಟದ ಸಮಯದಲ್ಲಿ ನಾನು ಜೊತೆಗಿದ್ದೆ. ನನ್ನ ಮಗಳ ಜೊತೆ ನಿಲ್ಲದಿದ್ದರೆ ನಾನು ತಪ್ಪಿತಸ್ಥಳೆಂದು ಭಾವಿಸುತ್ತೇನೆ. ಆತ್ಮಸಾಕ್ಷಿಯಿಂದ ನಾನು ನನ್ನ ಗೌರವಾಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿದ್ದೇನೆ, ನನ್ನ ಮಗನಿಗೆ ತಾಯಿಯಾಗಿ ಆಂಧ್ರಪ್ರದೇಶದ ಜೊತೆ ಬಾಂಧವ್ಯ ಮುಂದುವರಿಸುತ್ತೇನೆ" ಎಂದು ಅವರು ಹೇಳಿದರು.

YSR Congress Honorary President Y.S.Vijayalakshmi Announced That She Quitting Her Post

ನೀರು ಹಂಚಿಕೆ ವಿವಾದ ಸೇರಿದಂತೆ ವಿಭಜನೆಯ ವಿಷಯಗಳಲ್ಲಿ ಆಯಾ ರಾಜ್ಯಗಳ ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಜಗನ್ ಮತ್ತು ಶರ್ಮಿಳಾ ಪಕ್ಷಗಳು ವಿಭಿನ್ನ ನಿಲುವುಗಳನ್ನು ಹೊಂದಿವೆ ಎಂದು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಹಾಗಾಗಿ ಎರಡೂ ಪಕ್ಷಗಳ ಜತೆ ಮುಂದುವರಿಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಎರಡು ಪಕ್ಷಗಳು ಮೊದಲಿನಿಂದಲೂ ಅಂತರ ಕಾಯ್ದುಕೊಂಡಿವೆ. ವೈಎಸ್ ಶರ್ಮಿಳಾ ತಮ್ಮ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಪ್ರಾರಂಭಿಸುವ ಮೊದಲು, ತೆಲಂಗಾಣದಲ್ಲಿ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಇಂಗಿತವನ್ನು ಘೋಷಿಸಿದ ನಂತರ, ವೈಎಸ್‌ಆರ್‌ಸಿಪಿ ಪಕ್ಷಕ್ಕೂ ವೈಎಸ್ ಜಗನ್ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿ ಹೇಳಿಕೆ ನೀಡಿತ್ತು.

ಸಾಕಷ್ಟು ಹೋರಾಟಗಳ ನಂತರ 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಬೇರ್ಪಡಿಸಲಾಯಿತು.

English summary
On the first day of the mega meeting of Andhra Pradesh's ruling YSR Congress party, its honorary president, Vijayamma popularly known as Y.S.Vijayalakshmi announced that she quitting her post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X