ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಜಗತ್ತಿನ ಅತಿ ದೊಡ್ಡ ಪಂಪ್ ಹೌಸ್ ಉದ್ಘಾಟನೆ

|
Google Oneindia Kannada News

ಹೈದರಾಬಾದ್, ಜೂನ್ 21: ಜಗತ್ತಿನ ಅತಿ ದೊಡ್ಡ ಬಹು ಹಂತ, ಬಹು ಉದ್ದೇಶದ ನೀರಾವರಿ ಯೋಜನೆಯಾದ 'ಕಾಳೇಶ್ವರಂ ನೀರಾವರಿ ಯೋಜನೆ'ಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಉಪಸ್ಥಿತರಿದ್ದರು.

ಇಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ ಬೆಳೆಗಳು ಇಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ ಬೆಳೆಗಳು

ಈ ಯೋಜನೆಯು ಸುಮಾರು 45ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ನಿರೀಕ್ಷೆಯಿದೆ. ಇದರಿಂದ ಈ ಭಾಗಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಸಾಧ್ಯವಾಗಲಿದೆ. ಅಲ್ಲದೆ, ಇದು ರಾಜ್ಯದ ಶೇ 70ರಷ್ಟು ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲಿದೆ. ಅಂದಾಜು 16 ಸಾವಿರ ಟಿಎಂಸಿ ನೀರು ಕೈಗಾರಿಕೆಗಳಿಗೆ ದೊರಕಲಿದೆ ಎಂದು ಕೆಸಿಆರ್ ವಿವರಿಸಿದರು.

worlds biggest pumphouse inaugurated by KCR at kaleswaram telangana

ಇದೇ ಸಂದರ್ಭದಲ್ಲಿ ಅವರು ಜಗತ್ತಿನ ಅತಿ ದೊಡ್ಡ ಪಂಪ್‌ಹೌಸ್‌ಅನ್ನು ಮೇಡಿಗಡ್ಡದಲ್ಲಿ ಉದ್ಘಾಟಿಸಿದರು. 40 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಹೌಸ್‌ನ ಪ್ರತಿ ಘಟಕಗಳೂ 60 ಕ್ಯೂಸೆಕ್ಸ್ ನೀರನ್ನು ಮೇಲೆತ್ತಬಲ್ಲದು. ಇದನ್ನು ಗೋದಾವರಿ ನದಿಯ 91 ಮೀಟರ್ ಮೆಲ್ಭಾಗದಲ್ಲಿ ನಿರ್ಮಿಸಲಾಗಿದೆ. ಒಟ್ಟು 660 ಕ್ಯೂಸೆಕ್ಸ್‌ನಷ್ಟು ನೀರೆತ್ತುವ ಸಾಮರ್ಥ್ಯ ಹೊಂದಿದೆ.

ಮಂಡ್ಯದ ಬೆಳೆಗೆ ಕಾವೇರಿ ನೀರು ಬಿಡುವಂತೆ ಸದಾನಂದ ಗೌಡ ಪತ್ರ ಮಂಡ್ಯದ ಬೆಳೆಗೆ ಕಾವೇರಿ ನೀರು ಬಿಡುವಂತೆ ಸದಾನಂದ ಗೌಡ ಪತ್ರ

ಮೊದಲ ಹಂತದ ಭಾಗವಾಗಿ ಒಟ್ಟು 440 ಮೆಗಾವ್ಯಾಟ್ ಸಾಮರ್ಥ್ಯದ 11 ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಈ ಪಂಪ್ ಹೌಸ್‌ಅನ್ನು ಕೇವಲ ಒಂದೂವರೆ ವರ್ಷದಲ್ಲಿ ನಿರ್ಮಿಸಲಾಗಿದೆ.

English summary
Telangana CM K Chandrashekhar Rao on Friday inaugurated world's biggest pumphouse at Kaleswaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X