ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನಲ್ಲಿ ಮಹಿಳಾ ದೌರ್ಜನ್ಯ ತಡೆಗೆ 'ವುಮೆನ್ಸ್ ಆನ್ ವ್ಹೀಲ್ಸ್'

|
Google Oneindia Kannada News

ಹೈದರಾಬಾದ್, ಜನವರಿ 2: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಕಾರಣ ಅವುಗಳ ತಡೆಗೆ ಮಹಿಳಾ ಪೊಲೀಸ್ ಪಡೆ ಸಿದ್ಧಗೊಂಡಿದೆ.

ಹೈದರಾಬಾದ್ ಮಹಿಳಾ ಪೊಲೀಸರು ವುಮೆನ್ಸ್ ಆನ್ ವ್ಹೀಲ್ಸ್ ಎನ್ನುವ ಹೆಸರಿನಲ್ಲಿ ಗಸ್ತು ವ್ಯವಸ್ಥೆಯನ್ನು ರೂಪಿಸಿ ನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮಹಿಳಾ ಪೊಲೀಸರು ಬೈಕ್‌ಗಳಲ್ಲಿ ಒಂದುಕಡೆಯಿಂದ ಇನ್ನೊಂದು ಕಡೆಗೆ ಗಸ್ತು ತಿರುಗುತ್ತಲೇ ಇರುತ್ತಾರೆ.

ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

ಈ ಕುರಿತು ಹೈದರಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ಶಿಕಾ ಗೋಯೆಲ್ ಮಾತನಾಡಿ, ವುಮೆನ್ ಆನ್ ವ್ಹೀಲ್ಸ್ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ ಕಲ್ಪಿಸುವುದು, ಪುರುಷ ಸಿಬ್ಬಂದಿಯಂತೆಯೇ ಮಹಿಳಾ ಪೊಲೀಸರು ಎಲ್ಲಾ ಕಾರ್ಯಗಳನ್ನು ನಿಭಾಯಿಸಬಲ್ಲರು ಎಂದು ತೋರಿಸುವುದು ಈ ಎರಡು ಉದ್ದೇಶಗಳನ್ನು ಸಾಕಾರಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

Women on wheels: Female cops to now patrol the streets in Hyderabad

ಸದ್ಯ ಹೈದರಾಬಾದ್​ನ 17 ಉಪ ವಿಭಾಗಗಲ್ಲಿ 20 ಮಹಿಳಾ ಗಸ್ತು ಪಡೆ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದೆ. ಅವರಿಗೆಲ್ಲ ದ್ವಿಚಕ್ರ ವಾಹನಗಳನ್ನು ಪೂರೈಸಲಾಗಿದೆ. ಇದಕ್ಕಾಗಿ ಮಹಿಳಾ ಪೊಲೀಸರಿಗೆ 2 ತಿಂಗಳ ತರಬೇತಿಯನ್ನೂ ನೀಡಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ ಯುವತಿಗೆ ಲೈಂಗಿಕ ಕಿರುಕುಳ: ಬಂಧನ ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ ಯುವತಿಗೆ ಲೈಂಗಿಕ ಕಿರುಕುಳ: ಬಂಧನ

ಈ ಕಾರ್ಯಕ್ರಮದಿಂದ ಮಹಿಳಾ ಪೊಲೀಸರ ಸಬಲೀಕರಣವಾಗುತ್ತಿದೆ. ಈ ಮೂಲಕ ಪೊಲೀಸ್​ ಪಡೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಅಲ್ಲದೆ, ನಾವು ಪುರುಷರಿಗಿಂತಲೂ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತಿದೆ ಎಂದರು.

English summary
In unique initiative "Women on Wheels" by Hyderabad Police, female police officers will now be patrolling streets to prevent crime against women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X