ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲಿಗಳ ಪಾಲಾಯ್ತೇ ಹೈದರಾಬಾದ್ ಆಸ್ಪತ್ರೆಯಲ್ಲಿದ್ದ ಮೃತದೇಹ?!

|
Google Oneindia Kannada News

ಹೈದರಾಬಾದ್, ಡಿಸೆಂಬರ್ 20: ಆತ್ಮಹತ್ಯೆ ಮಾಡಿಕೊಂಡ 21 ವರ್ಷದ ಮಹಿಳೆಯ ಮೃತದೇಹವನ್ನು ಇಲಿಗಳು ತಿಂದ ಘಟನೆ ಹೈದರಾಬಾದಿನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ!

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ: ಸಮಜಾಯಿಷಿ ನೀಡಿದ ಫೋರ್ಟೀಸ್ ಆಸ್ಪತ್ರೆಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ: ಸಮಜಾಯಿಷಿ ನೀಡಿದ ಫೋರ್ಟೀಸ್ ಆಸ್ಪತ್ರೆ

ಯು.ಮಧು ಎಂಬುವವರು ಡಿ.18 ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಒಸ್ಮಾನಿಯ ಆಸ್ಪತ್ರೆಗೆ ತರಲಾಗಿತ್ತು. ಆದರೆ ಫಾರೆನ್ಸಿಕ್ ಲ್ಯಾಬ್ ನಲ್ಲಿದ್ದ ದೇಹವನ್ನು ಇಲಿಗಳು ಅಲ್ಲಲ್ಲಿ ತಿಂದಿರುವುದು ಕಂಡುಬಂದಿದೆ.

Woman's body found chewed up by rats in Hyderabad hospital morgue

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಒಸ್ಮಾನಿಯಾ ಆಸ್ಪತ್ರೆಯ ಮುಖ್ಯಸ್ಥ ಡಾ. ನರೇಂದರ್, ಈ ಘಟನೆಯ ನಂತರ ನಾವು ಫಾರೆನ್ಸಿಕ್ ಲ್ಯಾಬ್ ಗೆ ತೆರಳಿ ತನಿಖೆ ನಡೆಸಿದ್ದೇವೆ. ಇಲ್ಲಿರುವ ಎಲ್ಲಾ ಫ್ರೀಜರ್ ಗಳೂ ಕೆಲಸ ನಿರ್ವಹಿಸುತ್ತಿವೆ, ಅಲ್ಲದೆ ಇಲ್ಲಿ ಇಲಿಗಳು ಪ್ರವೇಶಿಸುವುದಕ್ಕೆ ಸಾಧ್ಯವೇ ಇಲ್ಲ. ಈ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕುತ್ತೇವೆ" ಎಂದಿದ್ದಾರೆ.

ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!

ಬಹುಶಃ ಮೃತದೇಹವನ್ನು ಫ್ರೀಜರ್ ನಲ್ಲಿ ಇಟ್ಟ ನಂತರ ಯಾರೋ ಸರಿಯಾಗಿ ಬಾಗಿಲು ಮುಚ್ಚಿರದ ಕಾರಣ ಈ ಘಟನೆ ನಡೆದಿರಬಹುದು ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಂತೂ ಮತ್ತೊಮ್ಮೆ ಆಸ್ಪತ್ರೆಗಳ ಬೇಜವಾಬ್ದಾರಿ ವರ್ತನೆಗೆ ಕನ್ನಡಿ ಹಿಡಿದಿದೆ.

English summary
In another case of medical apathy, the body of a 21-year-old woman stored in mortuary of Hyderabad's Osmania General Hospital was allegedly found chewed up by rats. The body of U. Madhu, who had committed suicide by hanging herself in Habeebnagar's Mangaar Basti on Dec 18th night, was found with bitten marks around the nose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X