ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಚೇತರಿಸಿದ ವ್ಯಕ್ತಿಯ ಮೆದುಳಿನಲ್ಲಿ ವೈಟ್‌ ಫಂಗಸ್‌ ಪತ್ತೆ

|
Google Oneindia Kannada News

ಹೈದರಾಬಾದ್‌, ಆ.07: ಹೈದರಾಬಾದಿನಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ (ಕೋವಿಡ್ -19) ಚೇತರಿಸಿಕೊಂಡ ವ್ಯಕ್ತಿಯೋರ್ವರ ಮೆದುಳಿನಲ್ಲಿ ಅಪರೂಪದ ವೈಟ್‌ ಫಂಗಸ್‌ ಅಥವಾ ಆಸ್ಪರ್‌ಗಿಲ್ಲಸ್ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ, ಮೇ ತಿಂಗಳಿನಲ್ಲಿ ಈ ವ್ಯಕ್ತಿಯು ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬಳಿಕ ಈ ವ್ಯಕ್ತಿಯ ಕೈ ಕಾಲುಗಳಲ್ಲಿ ದೌರ್ಬಲ್ಯ ಕಾಣಿಸಿಕೊಂಡಿದೆ. ಹಾಗೆಯೇ ವ್ಯಕ್ತಿಗೆ ಮಾತನಾಡುವಾಗ ತೊಂದರೆ ಉಂಟಾಗಿದೆ. ಈ ಹಿನ್ನೆಲೆ ವೈದ್ಯರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ.

ವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರುವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರು

ವೈದ್ಯರು ಈ ಕೊರೊನಾ ಸೋಂಕಿನಿಂದ ಗುಣಮುಖರಾದ ರೋಗಿಯ ಮೆದುಳನ್ನು ಸ್ಕ್ಯಾನ್ ಮಾಡಿದಾಗ, ಔಷಧಿಯ ಹೊರತಾಗಿಯೂ ಕಡಿಮೆಯಾಗದ ಹೆಪ್ಪುಗಟ್ಟಿರುವ ಒಂದು ಗೆಡ್ಡೆಯಂತೆ ಇರುವುದು ವೈದ್ಯರಿಗೆ ಕಂಡು ಬಂದಿದೆ. ಇದಕ್ಕೆ ಔಷಧಿ ನೀಡಿದರೂ ಕಡಿಮೆಯಾಗುವುದಿಲ್ಲ ಎಂಬ ಕಾರಣದಿಂದಾಗಿ ಕೊನೆಗೆ ಶಸ್ತ್ರ ಚಿಕಿತ್ಸೆಯೇ ಮಾಡಬೇಕಾಯಿತು.

White fungus abscess found in recovered Covid patients brain

ಮೆದುಳಿನಲ್ಲಿ ಗೆಡ್ಡೆಯಂತಿದ್ದ ರಚನೆಯನ್ನು ಹೊರತೆಗೆಯುವ ಸಲುವಾಗಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ನಂತರವೇ ವೈದ್ಯರು ಬಿಳಿ ಶಿಲೀಂಧ್ರವು ಮೆದುಳಿನಲ್ಲಿ ಹೆಪ್ಪುಗಟ್ಟಿತ್ತು ಎಂದು ತಿಳಿದು ಬಂದಿದೆ ಎನ್ನಲಾಗಿದೆ.

''ಆಸ್ಪರ್‌ಗಿಲ್ಲಸ್‌ನಿಂದ ಮೆದುಳಿನಲ್ಲಿ ಈ ರೀತಿಯಾಗಿ ಬಿಳಿ ಶಿಲೀಂಧ್ರವು ಹೆಪ್ಪುಗಟ್ಟಿರುವ ಪ್ರಕರಣಗಳು ಬಾರೀ ಅಪರೂಪ. ಅದರಲ್ಲೂ ವಿಶೇಷವಾಗಿ ಕೋವಿಡ್ -19 ರೋಗಿಗಳಲ್ಲಿ, ಇದು ಅತ್ಯಂತ,'' ಎಂದು ವೈದ್ಯರು ಹೇಳುತ್ತಾರೆ.

ಹೈದರಾಬಾದ್ ಮೂಲದ ಸನ್ಶೈನ್ ಆಸ್ಪತ್ರೆಗಳ ಹಿರಿಯ ನರಶಸ್ತ್ರಚಿಕಿತ್ಸಕ ಡಾ.ಪಿ. ರಂಗನಾಥಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ''ಮಧುಮೇಹ ಹೊಂದಿರುವ ಕೋವಿಡ್ -19 ರೋಗಿಗಳಲ್ಲಿ ಶಿಲೀಂಧ್ರಗಳ ಸೋಂಕು ಕಂಡುಬಂದಿದೆ. ಈ ಪ್ರಕರಣದಲ್ಲಿ, ರೋಗಿಗೆ ಅಧಿಕ ರಕ್ತದೊತ್ತಡದ ಸಮಸ್ಯೆಯಿದೆ. ಆದರೆ ಮಧುಮೇಹ ಇಲ್ಲ,'' ಎಂದು ತಿಳಿಸಿದ್ದಾರೆ.

"ಪರಾನಾಸಲ್ ಸೈನಸ್‌ಗಳು ಬಿಳಿ ಶಿಲೀಂಧ್ರವು ಕಪ್ಪು ಶಿಲೀಂಧ್ರಕ್ಕಿಂತ ಭಿನ್ನವಾಗಿ ಮೂಗಿನ ಮೂಲಕ ಮೆದುಳಿಗೆ ಪ್ರವೇಶಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ," ಎಂದು ತಜ್ಞ ವೈದ್ಯರು ಹೇಳಿದರು.

ಅಪರೂಪದ ಆವಿಷ್ಕಾರಕ್ಕೆ ಕಾರಣವಾದ ರೋಗಿಯ ಸ್ಥಿತಿಯನ್ನು ವಿವರಿಸಿದ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ರಂಗನಾಥಮ್, ''ಕೋವಿಡ್ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಆರು ದಿನಗಳ ನಂತರ ಅಂಗದಲ್ಲಿ ದೌರ್ಬಲ್ಯ ಮತ್ತು ಮಾತಿನ ತೊಂದರೆಯ ಬಗ್ಗೆ ಈ ರೋಗಿಯು ದೂರು ನೀಡಿದ್ದರು. ಅದು ಕೋವಿಡ್ ಸೋಂಕು ಸಾಂಕ್ರಾಮಿಕದ ಎರಡನೇ ಅಲೆಯ ಉತ್ತುಂಗದ ಸಮಯವಾಗಿತ್ತು. ಮೆದುಳಿನ ಸ್ಕ್ಯಾನ್‌ ಮಾಡಿದಾಗ ಎಡ ಭಾಗದಲ್ಲಿ ದೊಡ್ಡ ಗಾಯ ಮತ್ತು ಇತರ ಪ್ರದೇಶಗಳಲ್ಲಿ ಎರಡು ಸಣ್ಣ ಗಾಯಗಳು ಪತ್ತೆಯಾಗಿವೆ," ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ: ಮೊದಲ ಬಾರಿಗೆ ವೈದ್ಯರೊಬ್ಬರಲ್ಲಿ ಬ್ಲ್ಯಾಕ್, ಗ್ರೀನ್ ಫಂಗಸ್ ಪತ್ತೆಕರ್ನಾಟಕ: ಮೊದಲ ಬಾರಿಗೆ ವೈದ್ಯರೊಬ್ಬರಲ್ಲಿ ಬ್ಲ್ಯಾಕ್, ಗ್ರೀನ್ ಫಂಗಸ್ ಪತ್ತೆ

"ರೋಗಿಗೆ ಆರಂಭದಲ್ಲಿ ಹೆಮಟೋಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿನ ಮತ್ತೊಂದು ಎಂಆರ್‌ಐ ನಡೆಸಿದಾಗ ಗಾಯವು ದಟ್ಟವಾದ ಮತ್ತು ಹೆಚ್ಚಾಗಿ ಹರಡುತ್ತಿದೆ ಎಂದು ತಿಳಿದು ಬಂದಿತು. ಹಾಗೆಯೇ ಈ ಗಾಯವು ಅಂಚು ಅಂಚಾಗಿ ಗಾತ್ರದಲ್ಲಿ ಹೆಚ್ಚಾಗುತ್ತಿದೆ ಎಂದು ಕಂಡುಬಂದಿದೆ," ಎಂದರು.

ಸಣ್ಣ ಗಾಯಗಳ ಗಾತ್ರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಈ ಎಲ್ಲಾ ಕಾರಣದ ಹಿನ್ನೆಲೆ ನಾವು ಶಸ್ತ್ರ ಚಿಕಿತ್ಸೆ ನಡೆಸಬೇಕಾಯಿತು. ಶಸ್ತ್ರಚಿಕಿತ್ಸೆ ನಡೆಸಿದ ನಂತರ, ಸಾಮಾನ್ಯ ಮಿದುಳಿನಿಂದ ಪ್ರತ್ಯೇಕವಾದ ಮೃದುವಾದ ನೆಕ್ರೋಟಿಕ್ ವಸ್ತುಗಳನ್ನು ಹೊಂದಿರುವ ಪೂರ್ತಿಯಾಗಿ ಮುಚ್ಚಲ್ಪಟ್ಟ ಬಿಳಿ ಫಂಗಸ್‌ ಕಾಣಿಸಿಕೊಂಡಿದೆ," ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಕೆಲಸ ಮಾಡುವ ವೈದ್ಯಕೀಯ ತಂಡವು ಈ ಹೆಪ್ಪುಗಟ್ಟಿದ ವೈಟ್‌ ಫಂಗಸ್‌ ಬಾವುಗಳ ರೋಗಶಾಸ್ತ್ರೀಯ ವಿಶ್ಲೇಷಣೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಇದು ಬಿಳಿ ಶಿಲೀಂಧ್ರ ಸೋಂಕಿನ ಪ್ರಕರಣವೆಂದು ಕಂಡುಬಂದಿದೆ. ಇನ್ನು ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಆಸ್ಪರ್ಜಿಲ್ಲೋಸಿಸ್ ಎಂದೂ ಕರೆಯುತ್ತಾರೆ.

''ಮೆದುಳಿನ ಬಿಳಿ ರಕ್ತ ಕಣಗಳು ಬಿಳಿ ಶಿಲೀಂಧ್ರದಿಂದ ಆಕ್ರಮಣಗೊಂಡ ನಂತರ ಕೇಂದ್ರ ನರಮಂಡಲದ ಆಸ್ಪರ್ಜಿಲ್ಲೋಸಿಸ್ ಉಂಟಾಗುತ್ತದೆ,'' ಎಂದು ಡಾ ರಂಗನಾಥಮ್ ಹೇಳಿದ್ದಾರೆ.

Recommended Video

ಖೇಲ್ ರತ್ನ ಮರುನಾಮಕರಣ ಬೆನ್ನಲ್ಲೇ ಮೋದಿಗೆ ತಿರುಗೇಟು ಕೊಟ್ಟ ಇರ್ಫಾನ್ ಪಠಾಣ್ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
A patient who recovered from the Covid in Hyderabad reportedly developed a rare case of white fungus forming an abscess in the brain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X