ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದಿಲ್ಲ, ಖಟ್ಟರ್‌ಗೆ ಅಮಿತ್‌ ಪ್ರತಿಕ್ರಿಯೆ

|
Google Oneindia Kannada News

ಹೈದರಾಬಾದ್, ನವೆಂಬರ್ 29: ಹೈದರಾಬಾದ್‌ನಲ್ಲಿ ಭಾನುವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಎಂದಿಗೂ ಕರೆದಿಲ್ಲ, ಈಗಲೂ ನಾನು ಕರೆಯುತ್ತಿಲ್ಲ' ಎಂದರು.

ಜಿಎಚ್‌ಎಂಸಿ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಲು ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ನಲ್ಲಿದ್ದು, "ನಾವು ಹೈದರಾಬಾದ್ ಅನ್ನು ನವಾಬ್, ನಿಜಾಮ್ ಸಂಸ್ಕೃತಿಯಿಂದ ಮುಕ್ತಗೊಳಿಸುತ್ತೇವೆ ಮತ್ತು ಇಲ್ಲಿ ಮಿನಿ ಇಂಡಿಯಾವನ್ನು ರಚಿಸುತ್ತೇವೆ' ಎಂದು ಹೇಳಿದರು.

ಅಮಿತ್ ಶಾ ಅವರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾ ರೈತರುಅಮಿತ್ ಶಾ ಅವರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾ ರೈತರು

ರೈತರ ಪ್ರತಿಭಟನೆ ಕುರಿತು ಭಾನುವಾರ ಅಮಿತ್ ಶಾ ಹೇಳಿಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿದೆ. ಆಂದೋಲನ ನಡೆಸುತ್ತಿರುವ ರೈತರು ಆಯೋಜಿಸಿರುವ "ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲವಿದೆ ಎಂದು ಹರಿಯಾಣ ಸಿಎಂ ಹೇಳಿದ್ದಾರೆ.

We Will Liberate Hyderabad From The Culture Of The Nawab And Nizam: Amit Shah

ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಪ್ರತಿಭಟನೆಯನ್ನು ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸುವಂತೆ ರೈತರಿಗೆ ಮನವಿ ಮಾಡಿದ್ದರು. "ಭಾರತ ಸರ್ಕಾರ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ನಾನು ಪ್ರತಿಭಟನಾ ನಿರತ ರೈತರಿಗೆ ಮನವಿ ಮಾಡುತ್ತೇನೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರನ್ನು ಡಿಸೆಂಬರ್ 3 ರಂದು ಚರ್ಚೆಗೆ ಆಹ್ವಾನಿಸಿದ್ದಾರೆ. ರೈತರ ಪ್ರತಿಯೊಂದು ಸಮಸ್ಯೆ ಮತ್ತು ಬೇಡಿಕೆಯ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ' ಎಂದು ತಿಳಿಸಿದರು.

ಭಾರತೀಯ ಕಿಸಾನ್ ಯೂನಿಯನ್‌ನ ಪಂಜಾಬ್ ಘಟಕದ ಅಧ್ಯಕ್ಷ ಜಗ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿ, "ಅಮಿತ್ ಷಾ ಜಿ ಅವರು ಷರತ್ತಿನ ಮೇಲೆ ಆರಂಭಿಕ ಸಭೆ ಕರೆದಿದ್ದಾರೆ, ಅದು ಒಳ್ಳೆಯದಲ್ಲ. ಅವರು ಷರತ್ತು ಇಲ್ಲದೆ ಮುಕ್ತ ಹೃದಯದಿಂದ ಮಾತುಕತೆ ನಡೆಸಬೇಕಾಗಿತ್ತು. ನಮ್ಮ ಪ್ರತಿಕ್ರಿಯೆಯನ್ನು ನಿರ್ಧರಿಸಲು ನಾಳೆ ಬೆಳಿಗ್ಗೆ ಸಭೆ ನಡೆಸುತ್ತೇವೆ ಎಂದರು.

English summary
Home Minister Amit Shah, who participated in a public rally before the GHMC Mahanagara Palike polls, said, "We will liberate Hyderabad from the culture of Nawab and Nizam and create a mini India here."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X